News Kannada
Thursday, September 29 2022

ಮೈಸೂರು

ಕೆರೆಗೆ ಬಿದ್ದ ಎತ್ತಿನಗಾಡಿ: ಅಪ್ಪ-ಮಗ ಸಾವು - 1 min read

Photo Credit :

ಕೆರೆಗೆ ಬಿದ್ದ ಎತ್ತಿನಗಾಡಿ: ಅಪ್ಪ-ಮಗ ಸಾವು

ಮಳವಳ್ಳಿ: ಹಾಲುಗಲ್ಲದ ಕರುಗಳಿಗೆ ಎತ್ತಿನಗಾಡಿ ಕಲಿಕೆಯಲ್ಲಿ ನಿರತರಾಗಿದ್ದ ತಂದೆ-ಮಗ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಹಲಗೂರು ಹೋಬಳಿಯ ಹಾಡ್ಲಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಹಾಡ್ಲಿ ಗ್ರಾಮದ ಶಿವಣ್ಣ (50) ಹಾಗೂ ಸ್ಪಂದನ್ (20) ಮೃತಪಟ್ಟ ಅಪ್ಪ-ಮಗ. ಹಾಲುಗಲ್ಲದ ಹಳ್ಳಿಕಾರ್ ದನದ ಕರುಗಳಿಗೆ ಎತ್ತಿನಗಾಡಿ ಕಲಿಸುವ ಸಂದರ್ಭದಲ್ಲಿ ಗ್ರಾಮದ ಹೊರವಲಯದಲ್ಲಿರುವ ಕೆರೆಗೆ ಗಾಡಿ ಮಗುಚಿ ಬಿದ್ದು ತಂದೆ-ಮಗ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಸಕ ಅನ್ನದಾನಿ ಭೇಟಿ
ಕೆರೆಯಲ್ಲಿ ಮುಳುಗಿ ಮೃತಪಟ್ಟ ರೈತ ಶಿವಣ್ಣ ಅವರ ನಿವಾಸಕ್ಕೆ ಶಾಸಕ ಕೆ.ಅನ್ನದಾನಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ, ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾಗ ರೈತರು ಮೃತಪಟ್ಟರೆ ಅವರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕೊಡಿಸಿಕೊಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಳವಳ್ಳಿ ಕ್ಷೇತ್ರಕ್ಕೆ ಬಂದಾಗ ಇಲ್ಲಿಗೆ ಕರೆತರುವುದಾಗಿ ತಿಳಿಸಿದ್ದಾರೆ.a

See also  ರೋಹಿಣಿ ಸಿಂಧೂರಿ ಜನರನ್ನು ಮಂಗಂ ಮಾಡಲು ಹೊರಟಿದ್ದರು ; ಸಾರಾ ಮಹೇಶ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು