News Kannada
Friday, September 30 2022

ಮೈಸೂರು

ಮಂಡ್ಯದಲ್ಲಿ 8 ಮಂದಿಯನ್ನು ಬಲಿಪಡೆದ ಕುಡುಕ ಚಾಲಕ - 1 min read

Photo Credit :

ಮಂಡ್ಯದಲ್ಲಿ 8 ಮಂದಿಯನ್ನು ಬಲಿಪಡೆದ ಕುಡುಕ ಚಾಲಕ

ಮಂಡ್ಯ: ನಗರದ ಗುತ್ತಲು ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಚಾಲಕ ಲಾರಿ ಚಲಾಯಿಸಿದ ಪರಿಣಾಮ 8 ಮಂದಿ ದಾರುಣವಾಗಿ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡು, 30ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿರುವ ದಾರುಣ ಘಟನೆ ಮಂಗಳವಾರ ರಾತ್ರಿ 7.30ರ ವೇಳೆಯಲ್ಲಿ ನಡೆದಿದೆ.

ಈ ಅವಘಡದಲ್ಲಿ ಅಂಬರೀಶ್ ಅಭಿಮಾನಿಗಳ ಸಂಘದ ಕಾರ್ಯಾಧ್ಯಕ್ಷ ರಫಿಕ್, ವಿನಯ್ ಹಾಗೂ ಓರ್ವ ಮಹಿಳೆ ಸೇರಿದಂತೆ 8 ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದು, ಯತ್ತಗದಹಳ್ಳಿ ಹೊಸಬಡಾವಣೆಯ ನಟರಾಜು, ಕೋಕಿಲಾ, ಬೇಲೂರು ಗ್ರಾಮದ ಪ್ರಸನ್ನ, ಗುತ್ತಲು ಬಡಾವಣೆಯ ರಿಜ್ವಾನ್, ಸೈಯದ್, ಜಮಿಲ್ ಖಾನ್ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜತೆಗೆ ರಸ್ತೆ ಬದಿ ನಿಲ್ಲಿಸಿದ್ದ ಮೂವತ್ತಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.

ಆಂಧ್ರ ಮೂಲದ ಲಾರಿ ಇದಾಗಿದ್ದು, ಚಲಾಸುತ್ತಿದ್ದವನು ನದೀಂ ಎಂದು ಹೇಳಲಾಗಿದೆ. ಎಳನೀರು ಲೋಡ್ ಮಾಡಿಕೊಂಡು, ಕೆ.ಎಂ.ದೊಡ್ಡಿ ಕಡೆಯಿಂದ ಮಂಡ್ಯ ಕಡೆಗೆ ಬರುತ್ತಿದ್ದಾಗ ಚಾಲಕ ಪಾನಮತ್ತನಾಗಿದ್ದರಿಂದ ನಿಯಂತ್ರಣ ತಪ್ಪಿ ಗುತ್ತಲು ರಸ್ತೆಯಲ್ಲಿರುವ ಬೆನಕ ಸಮುದಾಯ ಭವನದ ಸಮೀಪ ಬರುತ್ತಿದ್ದಂತೆ ರಸ್ತೆಬದಿ ನಿಂತಿದ್ದವರ ಮೇಲೆ ಲಾರಿ ಹರಿದಿದೆ. ಇದರಿಂದ ಭೀಕರ ಅವಘಡ ಸಂಭವಿಸಿದೆ. ಚಾಲಕ ನಂತರ ಲಾರಿಯನ್ನು ರಸ್ತೆ ವಿಭಜಕದ ಮೇಲೆ ನಿಲ್ಲಿಸಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಬಳಿಕ ಆತನನ್ನು ಬಂಧಿಸಲಾಗಿರುವುದಾಗಿ ತಿಳಿದುಬಂದಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಗಂಗಾಧರಸ್ವಾಮಿ, ಪೂರ್ವ ಠಾಣೆಯ ವೆಂಕಟೇಶ್ ಮತ್ತು ಸಿಬ್ಬಂದಿ ಗಾಯಾಳುಗಳನ್ನು ಆಂಬ್ಯುಲೆನ್ಸ್ ಹಾಗೂ ಇತರೆ ವಾಹನಗಳ ಮೂಲಕ ಜನತೆಯ ಸಹಕಾರದಿಂದ ಮಿಮ್ಸ್ ಗೆ ಸಾಗಿಸಿದ್ದಾರೆ. ಮೃತದೇಹಗಳನ್ನು ಮಿಮ್ಸ್ ನ ಶವಾಗಾರದಲ್ಲಿಡಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ನೀಡಲಾಗುತ್ತದೆ. ಮಿಮ್ಸ್ ಆಸ್ಪತ್ರೆ ಮುಂದೆ ಜನಸಾಗರ ನೆರೆದಿದ್ದು, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.

See also  ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನವೆಂಬರ್ 9ಕ್ಕೆ ಬಿಜೆಪಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು