News Kannada
Monday, October 03 2022

ಮೈಸೂರು

ಭೋಜನಪ್ರಿಯರನ್ನು ಸೆಳೆಯುತ್ತಿರುವ ದಸರಾ ಆಹಾರ ಮೇಳ - 1 min read

Photo Credit :

ಭೋಜನಪ್ರಿಯರನ್ನು ಸೆಳೆಯುತ್ತಿರುವ ದಸರಾ ಆಹಾರ ಮೇಳ

ಮೈಸೂರು: ನಾಡಹಬ್ಬ ಮೈಸೂರು ದಸರಾ ಹಿನ್ನೆಲೆಯಲ್ಲಿ ನಡೆಯುತ್ತಿರುವ ಆಹಾರಮೇಳ ಭೋಜನ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.

ಬೆಳಗ್ಗೆಯಿಂದ ರಾತ್ರಿವರೆಗೂ ನಡೆಯುತ್ತಿರುವ ಆಹಾರ ಮೇಳದಲ್ಲಿ ಮಾಂಸಹಾರಿ ಮತ್ತು ಸಸ್ಯಾಹಾರಕ್ಕೆ ಸಂಬಂಧಿಸಿದಂತೆ ನೂರಾರು ಬಗೆಯ ತಿನಿಸುಗಳು ತಯಾರಾಗುತ್ತಿದ್ದು ಜನ ತಮಗೆ ಇಷ್ಟವಾದುದನ್ನು ತಿಂದು ಖುಷಿ ಪಡುತ್ತಿದ್ದಾರೆ.

ನಗರದಲ್ಲಿ ಸ್ಕೌಟ್ ಅಂಡ್ ಗೈಡ್ ಮೈದಾನ, ಲಲಿತ್ ಮಹಲ್ ಪಕ್ಕದ ಮೈದಾನದಲ್ಲಿ ದಸರಾ ಸಂಬಂಧ ಆಹಾರ ಮೇಳ ಏರ್ಪಡಿಸಿದ್ದರೆ, ಇನ್ನೊಂದೆಡೆ ನಾಗಾರ್ಜುನ ಗ್ರೂಪ್ ವತಿಯಿಂದ ಗನ್‍ಹೌಸ್ ಆವರಣದಲ್ಲಿ ಆಹಾರ ಮೇಳ ನಡೆಯುತ್ತಿದ್ದು, ನಗರಕ್ಕೊಂದು ಸುತ್ತು ಹೊಡೆಯುತ್ತಾ ತಮಗೆ ಎಲ್ಲಿ ಅನುಕೂಲವೊ ಅಲ್ಲಿಗೆ ತೆರಳಿ ತಮಗೆ ಬೇಕಾದ ತಿಂಡಿ, ತಿನಿಸುಗಳನ್ನು ಸವಿಯಬಹುದಾಗಿದೆ.

ಸ್ಕೌಟ್ ಅಂಡ್ ಗೈಡ್ ಮೈದಾನದಲ್ಲಿ ನಡೆಯುತ್ತಿರುವ ಆಹಾರಮೇಳದಲ್ಲಿ ಬೊಂಬು ಬಿರಿಯಾನಿ, ಗೆಡ್ಡೆ ಗೆಣಸು-ಜೇನುತುಪ್ಪ ಜತೆಗೆ ಬಿದಿರಕ್ಕಿ ಪಾಯಸದಂತಹ ಹಲವು ರೀತಿಯ ಆದಿವಾಸಿಗಳ ಸ್ಪೆಷಲ್ ತಿನಿಸುಗಳು ಒಂದೆಡೆಯಿದ್ದರೆ ಮತ್ತೊಂದೆಡೆ ಮೈಸೂರಿನ ಪ್ರಸಿದ್ಧ ಮಾಂಸಾಹಾರಿ ಹೋಟೆಲ್‍ಗಳ ಬಿರಿಯಾನಿ, ಸೂಪ್, ಪಲಾವ್ ಹೀಗೆ ವಿವಿಧ ತಿನಿಸುಗಳು, ಇನ್ನು ಸಸ್ಯಾಹಾರದಲ್ಲಿ ಪ್ರಸಿದ್ಧ ಮೇಲುಕೋಟೆಯ ಪುಳಿಯೋಗರೆ, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಕೊಡಗಿನ ಕಡಂಬಿಟ್ಟು, ದಕ್ಷಿಣ ಕನ್ನಡದ ಪತ್ರೊಡೆ ಹೀಗೆ ಒಂದೇ, ಎರಡೇ ನೂರಾರು ಸವಿರುಚಿಯ ತಿನಿಸುಗಳು ಎಲ್ಲರನ್ನು ಆಕರ್ಷಿಸುತ್ತದೆ.

ಬೊಂಬು ಬಿರಿಯಾನಿ, ಗೆಣಸು, ಜೇನುತುಪ್ಪ, ಬಿದಿರಕ್ಕಿ ಪಾಯಸ, ನಳ್ಳಿ ಸಾರು, ಕಾಡುಸೊಪ್ಪು, ಕರಳೇ ಪಲ್ಯ, ಮುದ್ದೆ ಉಪ್ಸಾರು, ರಾಗಿಮುದ್ದೆ, ಹುರಳಿಕಟ್ಟು ಸೇರಿದಂತೆ ಹೀಗೆ ವಿಭಿನ್ನ ಬಗೆಯ ಪದಾರ್ಥಗಳು ಗಮನಸೆಳೆಯುತ್ತಿವೆ. ಜತೆಗೆ ಬಾಯಲ್ಲಿ ನೀರೂರಿಸುತ್ತಿದೆ.

ಆಹಾರಮೇಳದಲ್ಲಿ ಬಂಬೂ ಬಿರಿಯಾನಿ ಗಮನಸೆಳೆಯುತ್ತಿದೆ. ಇದನ್ನು ತಯಾರು ಮಾಡುವುದು ಕೂಡ ಅಷ್ಟು ಸುಲಭವಲ್ಲ. ತುಂಬಾ ಜಾಗರೂಕತೆಯಿಂದ ಮಾಡಬೇಕು. ಆದಿವಾಸಿಗಳು ಇದನ್ನು ಮಾಡುತ್ತಿದ್ದು ಜನ ಸರತಿ ಸಾಲಿನಲ್ಲಿ ನಿಂತು ಕಾದು ಸೇವಿಸುವುದು ಕಂಡು ಬರುತ್ತಿದೆ.

ಅಕ್ಕಿಯನ್ನು ಬೇಯಿಸಿಕೊಂಡ ಮಾಂಸ ಹಾಗೂ ಮಸಾಲೆಗಳೆಲ್ಲವನ್ನೂ ಕೊರೆದ ಬಿದಿರಿಗೆ ತುಂಬಿ ಅದನ್ನು ಮುಚ್ಚಿ ಗಾಳಿ ಹೋಗಲು ಚಿಕ್ಕ ರಂಧ್ರವನ್ನು ಬಿಡಲಾಗುತ್ತದೆ. ನಂತರ ಉರಿಯುವ ಬೆಂಕಿಯಲ್ಲಿ ಬೇಯಿಸಲಾಗುವುದು. ಸುಮಾರು ಅರ್ಧ ಗಂಟೆ ಬಳಿಯ ತೆಗೆದು ಬೊಂಬನ್ನು ಒಡೆದು ಅದರೊಳಗೆ ಇರುವ ಬಿರಿಯಾನಿಯನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನೀಡಲಾಗುತ್ತದೆ. ಸದ್ಯ ಬಂಬೂ ಬಿರಿಯಾನಿಗೆ ಪ್ಲೇಟ್‍ವೊಂದಕ್ಕೆ ನೂರು ರೂಪಾಯಿಯನ್ನು ನಿಗದಿಮಾಡಲಾಗಿದೆ.

ಇನ್ನು ತಂಪು ಪಾನೀಯಗಳು, ಸಿಹಿ ತಿನಿಸುಗಳು, ಐಸ್‍ಕ್ರೀಂ, ಪಾನಿಪೂರಿ, ಸಮೋಸ ಹೀಗೆ ಹಲವು ಬಗೆಯ ತಿನಿಸು, ಜೋಳದ ರೊಟ್ಟಿ ಎಣ್ಣೆಗಾಯಿ, ದಾವಣಗೆರೆ ಬೆಣ್ಣೆದೋಸೆ ಮೊದಲಾದವುಗಳಿವೆ. ಒಂದೇ ಸೂರಿನಡಿ ವಿವಿಧ ತಿನಿಸುಗಳನ್ನು ಸವಿಯುವ ಅವಕಾಶ ಆಹಾರಮೇಳಕ್ಕೆ ಭೇಟಿ ನೀಡುವವರದ್ದಾಗಿದೆ.

See also  ಮಂಡ್ಯದಲ್ಲಿ ಸಾವಿನಲ್ಲೂ ಬೆಳಕಾದ ಕಣ್ಣುಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು