News Kannada
Wednesday, September 28 2022

ಮೈಸೂರು

ಶುದ್ಧ ನೀರು ಘಟಕಗಳಲ್ಲಿ ನೀರೇ ಬರಲ್ಲ! - 1 min read

Photo Credit :

ಶುದ್ಧ ನೀರು ಘಟಕಗಳಲ್ಲಿ ನೀರೇ ಬರಲ್ಲ!

ಮಾಗಡಿ: ಜನಸಾಮಾನ್ಯನಿಗೂ ಶುದ್ಧ ಕುಡಿಯುವ ನೀರು ಸಿಗಬೇಕೆಂಬ ಉದ್ದೇಶದಿಂದ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಮಾಗಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ನಿರ್ಮಿಸಲಾಗಿರುವ ಶುದ್ಧ ನೀರು ಘಟಕಗಳು ಇದೀಗ ನಿರ್ವಹಣೆಯಿಲ್ಲದೆ ಉಪಯೋಗಕ್ಕೆ ಬಾರದಂತಾಗಿರುವುದು ಕಂಡು ಬರುತ್ತಿದೆ.

ಬಹಳಷ್ಟು ಘಟಕಗಳು ದುರಸ್ತಿಗೊಳಗಾಗಿದ್ದು ಇದರಿಂದ ನೀರಿನ ಘಟಕಗಳು ಇದ್ದರೂ ಸಾರ್ವಜನಿಕರಿಗೆ ನೀರು ಸಿಗದಂತಾಗಿದೆ. ಇದಕ್ಕೆ ಕಾರಣ ಘಟಕಗಳ ನಿರ್ವಹಣೆಯನ್ನು ತಮಿಳುನಾಡಿದ ಆಪೆಕ್ಸ್ ಕಂಪನಿಗೆ ವಹಿಸಿದ್ದು ಆ ಕಂಪನಿ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದೇ ಇವತ್ತು ನೀರು ಸಿಗದೆ ಪರದಾಡುವಂತಾಗಿದೆ.

ಒಂದು ಘಟಕಕ್ಕೆ 8 ರಿಂದ 10 ಲಕ್ಷ ವೆಚ್ಚ ಮಾಡಿ ನಿರ್ಮಿಸಲಾಗಿದೆ. ಜತೆಗೆ ಒಂದು ಕ್ಯಾನ್ ನೀರಿಗೆ 2 ರೂ.5 ರೂ.ಗೆ ನಿಗದಿ ಪಡಿಸಲಾಗಿದೆ. ಜತೆಗೆ ಕರೆನ್ಸಿ ರೂಪದಲ್ಲಿ ಕಾರ್ಡ್ ಕೂಡ ವಿತರಣೆ ಮಾಡಲಾಗಿದೆ. ಆದರೆ ಇದೀಗ ಕಾರ್ಡ್‍ಗಳನ್ನು ರಿಚಾರ್ಜ್ ಮಾಡಿಸಲು ಆಗದೆ ನೀರನ್ನು ಪಡೆಯಲು ಗ್ರಾಹಕರು ಪರದಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಇಲ್ಲಿ ಪದೇ ಪದೇ ಮೋಟಾರ್ ಇನ್ನಿತರ ವಸ್ತುಗಳು ಕೆಟ್ಟು ಹೋಗುತ್ತಿದ್ದು ಕೆಟ್ಟು ಹೋದ ಕೂಡಲೇ ರಿಪೇರಿ ಮಾಡುವ ಕೆಲಸವನ್ನು ಆಪೆಕ್ಸ್ ಕಂಪನಿ ಮಾಡುತ್ತಿಲ್ಲ. ಇದರಿಂದ ನೀರಿಗೆಂದು ಬರುವ ಗ್ರಾಹಕರು ಖಾಲಿ ಕ್ಯಾನ್ ಹಿಡಿದುಕೊಂಡು ಪೆಚ್ಚು ಮೊರೆ ಹಾಕಿಕೊಂಡು ಹೋಗುವಂತಾಗಿದೆ.

ಮಾಗಡಿ ತಾಲೂಕಿನ ಚಕ್ರಬಾವಿ, ಸೀಗೇಕುಪ್ಪೆ, ಅಜ್ಜನಹಳ್ಳಿ, ವಿಜಿದೊಡ್ಡಿ, ಸೇರಿದಂತೆ ಹಲವೆಡೆ ಶುದ್ಧ ನೀರು ಘಟಕಗಳಿದ್ದು, ಇಲ್ಲಿ ಯಾವಾಗ ಯಾವುದು ಕೆಟ್ಟು ಹೋಗಿರುತ್ತೆ ಎಂದು ಹೇಳಲಾರದ ಸ್ಥಿತಿ ನಿರ್ಮಾಣವಾಗಿದೆ.

ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಶುದ್ಧ ನೀರಿನ ಪ್ರತಿ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕಾಗಿದೆ. ಇಲ್ಲದೆ ಹೋದರೆ ಗ್ರಾಹಕರು ಪ್ರತಿಭಟನೆ ನಡೆಸಿದರೂ ಅಚ್ಚರಿ ಪಡಬೇಕಾಗಿಲ್ಲ.

See also  ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳುತ್ತಿರುವ ಸರ್ಕಾರ: ಮಾಜಿ ಶಿಕ್ಷಣ ಸಚಿವ ಎಚ್‌.ವಿಶ್ವನಾಥ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು