News Kannada
Tuesday, November 29 2022

ಮೈಸೂರು

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನವೆಂಬರ್ 9ಕ್ಕೆ ಬಿಜೆಪಿ ಪ್ರತಿಭಟನೆ - 1 min read

Photo Credit :

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನವೆಂಬರ್ 9ಕ್ಕೆ ಬಿಜೆಪಿ ಪ್ರತಿಭಟನೆ

ಮೈಸೂರು: ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನವೆಂಬರ್ 9ಕ್ಕೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕನ್ನಡ ವಿರೋಧಿ ಹಾಗೂ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಬೇಡ. ಕೊಡಗಿನಲ್ಲಿ ಸಾವಿರಾರು ಜನರನ್ನು ಮಾರಣಹೋಮ ಮಾಡಿರುವ ಟಿಪ್ಪುವನ್ನು ವೈಭವಿಕರಿಸುತ್ತಿರುವುದು ಹಿಂದೂಗಳಿಗೆ ಮಾಡಿದ ಅಪಮಾನ. 1779ರಲ್ಲಿ ಬ್ರಿಟಿಷರು ಭಾರತಕ್ಕೆ ವ್ಯಾಪಾರ ಮಾಡಲು ಬಂದರು ಅಷ್ಟೇ, ಟಿಪ್ಪು ಅವರ ವಿರುದ್ಧ ಹೋರಾಡಿಲ್ಲ. ಮೈಸೂರಿನ ಸಂಸ್ಥಾನದ ಒಡೆಯರನ್ನು ಅಂಧಕಾರದಲ್ಲಿಟ್ಟಿದ್ದು ಟಿಪ್ಪು. ಟಿಪ್ಪು ಜಯಂತಿ ಆಚರಣೆ ಮಾಡಿದರೆ ವೀರ ಮದಕರಿ ನಾಯಕರ ಸಮುದಾಯಕ್ಕೆ, ಒನಕೆ ಓಬವ್ವನವರಿಗೆ ಮಾಡಿದ ಅವಮಾನ ಎಂದರು.

ಟಿಪ್ಪು ಜಯಂತಿ ಆಚರಣೆ ಮಾಡಿದರೆ ಕೇರಳದಿಂದ ಜಿಹಾದಿಗಳು ರಾಜ್ಯಕ್ಕೆ ಬಂದು ಅಶಾಂತಿ ಸೃಷ್ಟಿಸಲಿದ್ದಾರೆ. ಕೇವಲ ಓಟಿಗಾಗಿ ಟಿಪ್ಪು ಜಯಂತಿ ಆಚರಣೆ ಬೇಡ. ಟಿಪ್ಪು ಜಯಂತಿ ವೇಳೆ ಕೆಎಫ್ ಡಿ, ಪಿಎಫ್ ಐ ಸಂಘಟನೆಗಳು ಕೋಮುಗಲಭೆ ಉಂಟು ಮಾಡಲಿವೆ. ಮುಂದಾಗುವ ಎಲ್ಲಾ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ. ನಾವು ನವೆಂಬರ್ 9ರಂದು ಪ್ರತಿಭಟನೆ ಮಾಡುತ್ತೇವೆ. ಧಮ್ ಇದ್ದರೆ ಬಂದು ಬಂಧಿಸಿ ಎಂದು ರಾಜ್ಯ ಸರ್ಕಾರಕ್ಕೆ ಬಹಿರಂಗ ಸವಾಲು ಹಾಕಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಟಸ್ಥರಾಗಿರುವುದು ಬಿಟ್ಟು ಹಸ್ತದ ಕಡೆ ಮುಖ ಮಾಡಿದ್ದಾರೆ. ಯಾಕೆ ಈ ರೀತಿ ಮುಖ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ನಾವು ಟಿಪ್ಪು ಜಯಂತಿಯನ್ನು 365 ದಿನವು ವಿರೋಧ ಮಾಡುತ್ತೇವೆ. ಕನ್ನಡ ಪರ ಸಂಘಟನೆಗಳು ಟಿಪ್ಪು ಜಯಂತಿಯನ್ನು ಬೆಂಬಲಿಸುವುದು ಸರಿಯಲ್ಲ. ಬೆಂಬಲಿಸುವುದು ಕನ್ನಡಕ್ಕೆ ಮಾಡಿದ ಅವಮಾನ ಎಂದು ತಿಳಿಸಿದರು.

ಮಂಡ್ಯದ ಫಲಿತಾಂಶ ಅಚ್ಚರಿಯಾಗಿ ಬರಲಿದೆ
ಮಂಡ್ಯದ ಉಪಚುನಾವಣೆ ಕುರಿತು ಮಾತನಾಡಿದ ಅವರು ಮೊದಲ ಬಾರಿಗೆ ಮಂಡ್ಯದ ಹಳ್ಳಿ ಹಳ್ಳಿಗೆ ಬಿಜೆಪಿ ಪಾಂಪ್ಲೇಟ್ ಹೋಗಿದೆ. ಮಂಡ್ಯದಲ್ಲಿ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದರು. ಪಕ್ಷ ಭೇದ ಮರೆತು ಎಲ್ಲಾ ಪಕ್ಷದವರು ನಮಗೆ ಬೆಂಬಲವಾಗಿ ನಿಂತರು. ಮಂಡ್ಯದ ಫಲಿತಾಂಶ ಅಚ್ಚರಿಯಾಗಿ ಬರಲಿದೆ. ನಮ್ಮ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಗೆದ್ದು ಬರುತ್ತಾರೆ, ನನಗೆ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವಿ.ಸೋಮಣ್ಣ, ಡಾ.ಬಿ.ಮಂಜುನಾಥ, ಡಾ.ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

See also  ರಾಜ್ಯದಲ್ಲಿ ಸಾವಿರ ಇ ಚಾರ್ಜಿಂಗ್ ಸ್ಟೇಷನ್‌: ಸಚಿವ ಸುನೀಲ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು