ಮೈಸೂರು: ಹೈದರಾಬಾದ್ ಇನ್ಫೋಸಿಸ್ ಇಂಜಿನಿಯರ್ ರೋರ್ವರು ಸ್ನೇಹಿತನನ್ನು ನೋಡಲು ಮೈಸೂರಿಗೆ ಆಗಮಿಸಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಸಂದೀಪ್ (೨೨) ಆತ್ಮಹತ್ಯೆ ಹೈದರಾಬಾದ್ ಇನ್ಫೋಸಿಸ್ ಸಂಸ್ಥೆಯ ಇಂಜಿನಿಯರ್.
ಈತ ವಿಜಯನಗರದ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿದ್ದ ಗೆಳೆಯನನ್ನು ಭೇಟಿಯಾಗಲು ಬಂದಿದ್ದ.
ಸ್ನೇಹಿತ ಭೇಟಿ ಮಾಡಿ ಕುಶಾಲೋಪಾರಿಯನ್ನು ಮಾತನಾಡಿದ ನಂತರ, ಸ್ನೇಹಿತ ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಸ್ನೇಹಿತ ಹೊರಗೆ ಹೋಗುತ್ತಿದ್ದಂತೆ ಸಂದೀಪ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.