News Kannada
Tuesday, September 27 2022

ಮೈಸೂರು

17 ವರ್ಷಗಳಿಂದ ನಿವೇಶನಕ್ಕೆ ಅಲೆದಾಡುತ್ತಿರುವ ಮೃತ ಯೋಧರ ಪತ್ನಿಯರು! - 1 min read

Photo Credit :

17 ವರ್ಷಗಳಿಂದ ನಿವೇಶನಕ್ಕೆ ಅಲೆದಾಡುತ್ತಿರುವ ಮೃತ ಯೋಧರ ಪತ್ನಿಯರು!

ಮೈಸೂರು: ಸೈನಿಕರು ಯುದ್ದದಲ್ಲಿ ಮಡಿದು ವರ್ಷಗಳೇ ಕಳೆದರೂ ಅವರ ಪತ್ನಿಯರಿಗೆ ಇನ್ನು ನಿವೇಶನ ಸಿಗದೆ ಸರ್ಕಾರಿ ಕಚೇರಿಗಳ ಕಂಬ ಸುತ್ತುವುದು ಮಾತ್ರ ತಪ್ಪಿಲ್ಲ.

ಸೈನಿಕರ ದಿನವನ್ನು ಜ.7ರಂದು ಆಚರಿಸಲಾಗುತ್ತದೆ. ಅಂದು ನಾವು ಸೈನಿಕರ ಸೇವೆಯನ್ನು ಸ್ಮರಿಸುತ್ತೇವೆ. ಆದರೆ ಅವರ ಅಭಿವೃದ್ಧಿಯ ಕಡೆ ಯಾರು ಗಮನ ಹರಿಸುವುದಿಲ್ಲ. ಸೈನಿಕರು ಯುದ್ಧದಲ್ಲಿ ಮಡಿದು 17 ವರ್ಷಗಳೇ ಕಳೆದರೂ ಅವರ ಪತ್ನಿಯರಿಗೆ ಸಿಗಬೇಕಾದ ನಿವೇಶನಗಳು ಇನ್ನು ಸಿಕ್ಕಿಲ್ಲ. ಯೋಧರಾರ ಸುಬೇದಾರ್, ರಮೇಶ್ ಖಂಡಪ್ಪ, ಪೊಲೀಸ್ ಪಾಟೀಲ್, ಲೆಫ್ಟಿನೆಂಟ್ ಕರ್ನಲ್ ಸಿ.ಎನ್.ನಂಜಪ್ಪ, ಯುದ್ದದಲ್ಲಿ ಮಡಿದ ಯೋಧರು. ಇವರ ಪತ್ನಿರಾದ ಲಕ್ಷ್ಮೀ ಪಾಟೀಲ್, ಪಿ.ಪಿ.ಕವಿತಾ ಅವರಿಗೆ ಬೆಂಗಳೂರಿನ ಬನ್ನಿಮಂಗಲ 2ನೇ ಹಂತದ ಬಡಾವಣೆಯಲ್ಲಿ ನಿವೇಶನ ನೀಡುವಂತೆ ಸರ್ಕಾರ ಆದೇಶ ನೀಡಿತ್ತು. ಇದುವರೆಗೂ ನಿವೇಶನ ಸಿಕ್ಕಿಲ್ಲ. ಪ್ರತಿನಿತ್ಯ ಕಚೇರಿ ಬಾಗಿಲು ಮುಂದೆ ನಿಲ್ಲುವ ಪರಿಸ್ಥಿತಿಯು ತಪ್ಪಿಲ್ಲ.

2001ರಲ್ಲಿ ಡಿ. 31ರಂದು ಪಂಜಾಬ್ ನಲ್ಲಿ ಉಗ್ರವಾದಿಗಳ ಜೊತೆಗಿನ ಗುಂಡಿನ ಚಕಮಕಿಯಲ್ಲಿ ರಮೇಶ್ ಖಂಡಪ್ಪ ನಿಧನರಾಗಿದ್ದರು. ಇವರ ಜೊತೆ ಹಲವರು ಹೋರಾಡಿ ಮೃತಪಟ್ಟಿದ್ದರು. ಇವರೆಲ್ಲರೂ ಸಹ 22 ವರ್ಷ ಸೇನೆಯಲ್ಲಿ ದುಡಿದವರು. ಇವರ ನಿಧನದ ನಂತರ ಅಂದಿನ ರಾಜ್ಯಪಾಲರು ನಿವೇಶನ ನೀಡುವಂತೆ ಆದೇಶಿಸಿದಂತೆ ಸರ್ಕಾರಿ ಆದೇಶವೂ ಹೊರ ಬಿದ್ದಿತ್ತು. ಆದರೆ ನಿವೇಶನಗಳು ಸಿಗಲೇ ಇಲ್ಲ.

ನಿವೇಶನ ಮೈಸೂರಿಗೆ ಸ್ಥಳಾಂತರ
ಕೋರ್ಟ್ ಆದೇಶದ ಪ್ರಕಾರ ಮೈಸೂರಿನಲ್ಲೇ ನಿವೇಶನ ನೀಡುವುದಾಗಿ 2018 ಜುಲೈ 24ರಂದು ಯೋಧರ ಪತ್ನಿಯರಿಗೆ ಸರ್ಕಾರ ಪತ್ರ ಬರೆದಿದೆ. ಈ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಪತ್ರ ಹೋಗಿದೆ. ಆದರೂ 17 ವರ್ಷಗಳಿಂದ ನಿವೇಶನ ಪಡೆದುಕೊಳ್ಳಲು ಕಚೇರಿಗೆ ಅಲೆದಾಡುವುದು ಮಾತ್ರ ತಪ್ಪಿಲ್ಲ.

See also  ವಿದ್ಯುತ್ ತಂತಿ ತಗುಲಿ ಓರ್ವ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು