News Kannada
Thursday, September 29 2022

ಮೈಸೂರು

ಮಂಡ್ಯದ ದೇವಲಾಪುರದ ನಾಗನಕೆರೆಯಲ್ಲಿ ವಿಶಿಷ್ಟ ಗಿಡದ ಜಾತ್ರೆ - 1 min read

Photo Credit :

ಮಂಡ್ಯದ ದೇವಲಾಪುರದ ನಾಗನಕೆರೆಯಲ್ಲಿ ವಿಶಿಷ್ಟ ಗಿಡದ ಜಾತ್ರೆ

ಮಂಡ್ಯ: ಜಾತ್ರೆ ಎಂದಾಕ್ಷಣ ನಮ್ಮ ಕಣ್ಣಮುಂದೆ ರಥೋತ್ಸವ, ಜನಜಂಗುಳಿ, ಪೂಜೆ, ವ್ಯಾಪಾರ ವಹಿವಾಟಿನ ದೃಶ್ಯಗಳು ಕಣ್ಣು ಮುಂದೆ ಹಾದುಹೋಗುತ್ತವೆ. ಆದರೆ ನಾಗಮಂಗಲ ತಾಲೂಕಿನ ದೇವಲಾಪರ ನಾಗನಕೆರೆಯಲ್ಲಿ ನಡೆಯುವ ಗಿಡದ ಜಾತ್ರೆ ಮಾತ್ರ ಇತರೆಡೆಗಳಲ್ಲಿ ನಡೆಯುವ ಜಾತ್ರೆಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿದೆ.

ದೇವಲಾಪರ ನಾಗನಕೆರೆಯಲ್ಲಿ ಇತ್ತೀಚೆಗೆ ನಡೆದ ಗಿಡದ ಜಾತ್ರೆ ಹಲವು ವೈಶಿಷ್ಟ್ಯಗಳನ್ನು ಸಾರಿ ಹೇಳಿದೆ. ಇಂತಹದೊಂದು ಜಾತ್ರೆ ನಡೆಯುತ್ತದೆ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ. ಈ ಸ್ಥಳವನ್ನು ಚಿಕ್ಕ ತಿರುಪತಿ ಎಂದೇ ಕರೆಯಲಾಗುತ್ತದೆ. ಇಲ್ಲಿ ಪ್ರತಿವರ್ಷವೂ ಗಿಡದ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಆಗಮಿಸುವವರಿಗೆ ಎಲ್ಲೆಂದರಲ್ಲಿ ಗೋವಿಂದನ ನಾಮಸ್ಮರಣೆ, ಜಾಗಟೆಯ ನಿನಾದ.. ತದೇಕ ಚಿತ್ತದಿಂದ ತಿಮ್ಮಪ್ಪನ ಸ್ಮರಿಸುವ ದಾಸರು.. ಬಯಲಲ್ಲೇ ನಡೆಯುವ ಪೂಜೆ.. ಅದರಾಚೆ ದೇವರಿಗೆ ಭಕ್ತರಿಂದ ಮಾಂಸ ಮದ್ಯದ ಎಡೆ.. ಎಲ್ಲವೂ ಗಮನಸೆಳೆಯುತ್ತವೆ ಮತ್ತು ಅಚ್ಚರಿಯನ್ನು ಮೂಡಿಸುತ್ತವೆ.

ಈ ಜಾತ್ರೆಗೆ ಜಿಲ್ಲೆಯವರು ಮಾತ್ರವಲ್ಲದೆ ಹೊರಗಿನವರು ಬರುತ್ತಾರೆ. ಎಲ್ಲರೂ ಒಂದೆಡೆ ಸೇರಿ ತಿಮ್ಮಪ್ಪನನ್ನು ಸ್ಮರಿಸಿ, ಪೂಜೆ ಮಾಡಿ ಹರಕೆ ಸಲ್ಲಿಸುತ್ತಾರೆ. ಇಲ್ಲಿ ಮದ್ಯ ಮತ್ತು ಮಾಂಸದ ಎಡೆ ಇಡುತ್ತಾರೆ ಎನ್ನುವುದೇ ಮತ್ತೊಂದು ವಿಶೇಷವಾಗಿದೆ.

ಜಾತ್ರೆಗೆ ಆಗಮಿಸುವ ಭಕ್ತರಾದ ದಾಸರು ತಮ್ಮ ಜೋಳಿಗೆಯಲ್ಲಿ ದೇವರನ್ನು ತಂದು ನಾಗನಕೆರೆ ದಡದ ಗಿಡದ ಪ್ರದೇಶದಲ್ಲಿಟ್ಟು ಪೂಜಿಸುತ್ತಾರೆ. ಈ ವೇಳೆ ಕೇಳಿ ಬರುವ ಶಂಖ, ಜಾಗಟೆಯ ಸದ್ದು ಭಕ್ತರ ಮೈನವಿರೇಳಿಸುತ್ತದೆ.

ಇನ್ನೊಂದೆಡೆ ಮದ್ಯ, ಮಾಂಸವನ್ನು ಎಡೆಗಿಟ್ಟು ಪೂಜಿಸಲಾಗುತ್ತದೆ. ಈ ಸಂಪ್ರದಾಯ ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ. ಭಕ್ತರು ಬಳಿಕ ಪೂಜೆ ಮಾಡಿ ಭೋಜನ ಸ್ವೀಕರಿಸಿ ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ.

ಅಪಾರ ಭಕ್ತರ ಸಂಗಮ:
ಒಂದು ದಿನ ನಡೆಯುವ ಈ ಗಿಡದ ಜಾತ್ರೆಗೆ ಸಹಸ್ರಾರು ಮಂದಿ ಭಾಗವಹಿಸುತ್ತಾರೆ. ಕೆಲವರು ಇಲ್ಲಿ ಹರಕೆಯಾಗಿ ಕೇಶಮುಂಡನ ಮಾಡಿಸಿಕೊಳ್ಳುತ್ತಾರೆ. ಈ ಜಾತ್ರೆ ನಾಗಮಂಗಲ ಪಟ್ಟಣದಿಂದ ಕೇವಲ 10 ಕಿ.ಮೀ. ದೂರದಲ್ಲಿದ್ದರೂ ಇಲ್ಲಿ ರಸ್ತೆ, ಕುಡಿಯುವ ನೀರಿನ ಸೌಲಭ್ಯವಿಲ್ಲ. ಸಂಚಾರಕ್ಕೆ ಸಮರ್ಪಕ ವ್ಯವಸ್ಥೆಯೂ ಇಲ್ಲ ಎನ್ನುವುದು ಭಕ್ತರ ಆರೋಪವಾಗಿದೆ.

ಸೌಲಭ್ಯವಿರಲಿ ಇಲ್ಲದಿರಲಿ ಜನ ಮಾತ್ರ ಇಲ್ಲಿಗೆ ಬಂದೇ ಬರುತ್ತಾರೆ. ವರ್ಷಕ್ಕೊ,ಮ್ಮೆ ನಡೆಯುವ ಈ ಜಾತ್ರೆ ಹಲವು ವೈಶಿಷ್ಟ್ಯತೆಗಳನ್ನು ಸಾರಿ ಹೇಳುತ್ತಿದೆ.

See also  ಗೃಹಿಣಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು