ಕೆ.ಆರ್.ನಗರ: ಕಾವೇರಿ ನದಿಗೆ ಈಜಲು ಇಳಿದ ಬಾಲಕರಿಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಜಲಸಮಾಧಿಯಾಗಿರುವ ಘಟನೆಯು ಶುಕ್ರವಾರ ತಾಲೂಕಿನ ಚುಂಚನಕಟ್ಟೆಯಲ್ಲಿ ಸಂಭವಿಸಿದೆ.
ಕೆ.ಆ.ನಗರದ ಕಾಳಮ್ಮನಕೊಪ್ಪಲು ಗ್ರಾಮದ ಲೋಕೇಶ್(16) ಹೊಳೆನರಸೀಪುರ ತಾಲೂಕಿನ ಆನೆಕನ್ನಾಂಬಾಡಿ ಗ್ರಾಮದ ಹರ್ಷ(11)ಮೃತ ಬಾಲಕರು.
ಶ್ರೀರಾಮ ದೇವಾಲಯಕ್ಕೆ ಪುಜೆಗೆ ಆಗಮಿಸದ್ದ ವೇಳೆ ನದಿಯಲ್ಲಿ ಈಜಲು ಹೋದಾಗ ದುರ್ಘಟನೆ ನಡೆದಿದೆ.
ಸ್ಥಳೀಯರು ನದಿಯಿಂದ ಶವಗಳನ್ನು ಹೊರತೆಗೆದಿದ್ದು, ಕೆ.ಆರ್.ನಗರ ಸಾರ್ವಜನಿಕ ಆಸ್ವತ್ರೆಗಳಿಗೆ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನವು ಮುಗಿಲು ಮುಟ್ಟಿದೆ.
ಕೆ.ಆರ್.ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.