News Kannada
Tuesday, November 29 2022

ಮೈಸೂರು

ಬೆಟ್ಟದಪುರದಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ - 1 min read

Photo Credit :

ಬೆಟ್ಟದಪುರದಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ

ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರದ ಇತಿಹಾಸ ಪ್ರಸಿದ್ದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ನಡೆಯಿತು. ನೆರೆದಿದ್ದ ಸಹಸ್ರಾರು ಭಕ್ತರು ಮಲ್ಲಿಕಾರ್ಜುನನಿಗೆ ಜಯಘೋಷ ಕೂಗಿ ಆನಂದ ತುಂದಿಲರಾದರು.

ರಥಬೀದಿಯಲ್ಲಿ ಸಾಗಿದ ಬೆಳ್ಳಿಬಸವ, ಗಣಪತಿ ಹಾಗೂ ಭ್ರಮರಾಂಭ ಮಲ್ಲಿಕಾರ್ಜುನ ದೇವತೆಗಳ ಮೂರು ರಥಗಳಿಗೆ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು, ಹಣ್ಣು ಜವನ ಎಸೆದು ಭಕ್ತಿ ಸಮರ್ಪಿಸಿದರು. ಬುಧವಾರ ಬೆಳಗ್ಗೆ 7.30ರ ಶುಭ ಕುಂಭ ಲಗ್ನದಲ್ಲಿ ಬ್ರಹ್ಮ ರಥೋತ್ಸವಕ್ಕೆ ರಥೋತ್ಸವಕ್ಕೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು.

ಗ್ರಾಮದ ಮಧ್ಯಭಾಗದಲ್ಲಿ ಸಿಡಿಲು ಮಲ್ಲಿಕಾರ್ಜುನ ದೇವಾಲಯವಿದ್ದು, ಕಳೆದ 5 ದಿನಗಳಿಂದಲೇ ವಿವಿಧ ಉತ್ಸವಾದಿಗಳು ಇಲ್ಲಿ ಆರಂಭಗೊಂಡಿದ್ದವು. ಇದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಗಿರಿಜಾ ಕಲ್ಯಾಣೋತ್ಸವ: ಇಲ್ಲಿನ ಪ್ರಮುಖ ಆಕರ್ಷಣೆಯಾಗಿರುವ ಗಿರಿಜಾ ಕಲ್ಯಾಣವು ವಿಶೇಷವಾಗಿದ್ದು, ಈ ಕಲ್ಯಾಣೋತ್ಸವವನ್ನು ವೀಕ್ಷಿಸಲು ಸಹಸ್ರಾರು ಭಕ್ತಾಧಿಗಳು ಆಗಮಿಸುತ್ತಾರೆ. ಗಿರಿಜಾ ಕಲ್ಯಾಣೋತ್ಸವದ ನಂತರ ಈ ಪ್ರಾಂತ್ಯದ ಜನತೆ ಮದುವೆ ಶುಭ ಸಮಾರಂಭಗಳನ್ನು ಆಯೋಜಿಸುವುದು ಇಲ್ಲಿನ ಮಹತ್ವವಾಗಿದೆ. ಗಿರಿಜಾಕಲ್ಯಾಣದ ನಂತರ ಬೆಳಿಗ್ಗೆ ಬ್ರಹ್ಮರಥೋತ್ಸವ ನಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ. ಈ ವರ್ಷದ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದು ಶಾಸಕ ಕೆ.ಮಹದೇವ್ ಈ ಮೊದಲೇ ಸೂಚನೆ ನೀಡಿದ್ದರು. ಆದ್ದರಿಂದ ಗ್ರಾಮದಲ್ಲಿ ವಿದ್ಯುತ್ ದೀಪಗಳ ಅಲಂಕಾರ, ಸ್ವಚ್ಛತೆ, ಕುಡಿಯುವ ನೀರು ಹಾಗೂ ಭದ್ರತೆಗೆ ತಾಲೂಕು ಆಡಳಿತ ಹೆಚ್ಚಿನ ಆದ್ಯತೆ ನೀಡಿದ್ದರು.

ಅದರಂತೆ ಶುಕ್ರವಾರ ಮೂಲದೇವರ ಪ್ರಾರ್ಥನೆ ಹಾಗೂ ಗಣಪತಿ ಪೂಜೆಯೊಂದಿಗೆ ಜಾತ್ರೆ ಆರಂಭಗೊಂಡಿತು, ಶನಿವಾರ ಗಜಾರೋಹಣ, ಭಾನುವಾರ ಭೂತವಾಹನ, ಸೋಮವಾರ ವೃಷಭ ವಾಹನದ ಮೇಲೆ ದೇವರುಗಳ ಮೆರವಣಿಗೆ ಅದ್ಧೂರಿಯಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಮಂಗಳವಾರ ರಾತ್ರಿ ಕುದುರೆ ವಾಹನದ ಮೇಲೆ ಉತ್ಸವ ನಡೆಸಿದ ನಂತರ ಗಿರಿಜಾ ಕಲ್ಯಾಣಕ್ಕೆ ಚಾಲನೆ ನೀಡಲಾಗಿತ್ತು. ಬುಧವಾರ ಬೆಳಗ್ಗೆ ಬೆಳ್ಳಿಬಸವ, ಗಣಪತಿ ಹಾಗೂ ಭ್ರಮರಾಂಭ ಮಲ್ಲಿಕಾರ್ಜುನ ದೇವತೆಗಳ ಮೂರು ರಥಗಳನ್ನು ರಥಬೀದಿಯಲ್ಲಿ ಎಳೆದು ಜಾತ್ರೋತ್ಸವವನ್ನು ಆಚರಿಸಲಾಯಿತು.

ಇನ್ನು ಜಾತ್ರೆಯ ಅಂಗವಾಗಿ ಬೆಟ್ಟಕ್ಕೆ ಸಾವಿರಾರು ಭಕ್ತಾದಿಗಳು ಭೇಟಿ ನೀಡುವುದರಿಂದ ಬೆಟ್ಟದ ಮೇಲೆ ಹತ್ತುವವರು ಮೆಟ್ಟಿಲುಗಳನ್ನು ಬಿಟ್ಟು ಬೇರೆಡೆಗೆ ಹೋಗಬಾರದು, ಪ್ಲಾಸ್ಟಿಕ್ ಹಾಗೂ ನೀರಿನ ಬಾಟಲಿಗಳನ್ನು ಎಸೆಯಬಾರದು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಬೆಟ್ಟದಪುರ ಪೊಲೀಸ್ ಎಸ್.ಐ ಲೋಕೇಶ್ ಎಚ್ಚರಿಕೆ ನೀಡಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ. ಅಲ್ಲದೆ ಬೆಟ್ಟದಲ್ಲಿ ದೊಡ್ಡ ಮಟ್ಟದ ಕಾಡು, ಗಿಡ ಮರಗಳು ಬೆಳೆದಿದ್ದು ಯಾವುಧೆ ಕಾರಣಕ್ಕೂ ಕಾಡಿಗೆ ಹಾನಿಯುಂಟು ಮಾಡುವ ಚಟುವಟಿಕೆಗಳು ನಡೆಯದಂತೆ ವಲಯ ಅರಣ್ಯಧಿಕಾರಿ ಮಲ್ಲಿಕಾರ್ಜುನ್ ಜಾಗ್ರತೆವಹಿಸಿದ್ದರು.

ಗ್ರಾಮದ ಯುವಕರ ಸಂಘಗಳು ಒಗ್ಗಟ್ಟಿನಿಂದ ಸಾರ್ವಜನಿಕರ ಸಹಕಾರದೊಂದಿಗೆ ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಹಾಗೂ ಗ್ರಾಮದ ರಥಬೀದಿಯಲ್ಲಿ ತಮ್ಮ ಮನೆಗಳ ಮುಂದೆ ಪಾನಕ, ಮಜ್ಜಿಗೆ ವಿತರಿಸುವ ಮೂಲಕ ಬಿಸಿಲಿನ ಬೇಗೆಯಲ್ಲಿ ಭಕ್ತಾಧಿಗಳ ದಣಿವಾರಿಸಲು ನೆರವಾಗುತಿದ್ದ ದೃಶ್ಯ ಕಂಡು ಬಂತು.

See also  ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ

ಸಿಂಗಾರಗೊಂಡ ಗ್ರಾಮ: ಜಾತ್ರೆಯ ಪ್ರಯುಕ್ತ ದೇವಾಲಯಕ್ಕೆ ಬಣ್ಣ ಬಳಿದು, ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತಲ್ಲದೆ, ರಥೋತ್ಸವ ನಡೆಯುವ ಬೀದಿಗಳನ್ನು ಹಾಗೂ ಮುಖ್ಯರಸ್ತೆಗಳನ್ನು ಶುಚಿಗೊಳಿಸಿ ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು