News Kannada
Tuesday, December 06 2022

ಮೈಸೂರು

ರೈತರಿಂದ ಸಕ್ಕರೆ ಕಾರ್ಖಾನೆ ಪೀಠೋಪಕರಣ ಧ್ವಂಸ  

Photo Credit :

ರೈತರಿಂದ ಸಕ್ಕರೆ ಕಾರ್ಖಾನೆ ಪೀಠೋಪಕರಣ ಧ್ವಂಸ   

ಮದ್ದೂರು : ಕಬ್ಬಿನ ಬಾಕಿ ಹಣ ಪಾವತಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ತಾಲೂಕಿನ ಕೊಪ್ಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ರೊಚ್ಚಿಗೆದ್ದ ರೈತರ ಗುಂಪು ಕಚೇರಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ದಾಂಧಲೆಗೊಳಿಸಿರುವ ಘಟನೆ ನಡೆದಿದೆ. 

ಕೊಪ್ಪ ಹೋಬಳಿಯ ಆಬಲವಾಡಿ ಹಾಗೂ ಹಲ್ಲೆಗೆರೆ ಗ್ರಾಮದ ಏಳರಿಂದ ಎಂಟು ಮಂದಿಯ ರೈತರ ಗುಂಪು ಕಾರ್ಖಾನೆ ಆಡಳಿತ ಮಂಡಳಿ ಕಚೇರಿಯಲ್ಲಿರುವ ಕಬ್ಬು ವಿಭಾಗದ ಕಚೇರಿಗೆ ಧಾವಿಸಿ ಕಳೆದ ನಾಲ್ಕು ತಿಂಗಳಿನಿಂದ ಕಬ್ಬಿನ ಬಾಕಿ ಹಣ ಪಾವತಿ ಮಾಡದಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ. 

ಈ ವೇಳೆಗೆ ಕಚೇರಿಯಲ್ಲಿದ್ದ ಸಿಬ್ಬಂದಿ ಶೀಘ್ರದಲ್ಲೇ ಬಾಕಿ ಹಣ ಪಾವತಿ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪದ ರೈತರ ಗುಂಪು ಕಚೇರಿಯಲ್ಲಿದ್ದ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ನಂತರ ಸಿಬ್ಬಂದಿಗಳನ್ನು ಹೊರದಬ್ಬಿ ಬೀಗ ಜಡಿದು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಿಂದಾಗಿ ಸುಮಾರು 50 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಗುಂಪು ಸ್ಥಳದಿಂದ ಪರಾಯಾಗಿದೆ. 

ಘಟನೆ ಸಂಬಂಧ ಜಿಲ್ಲಾ ಪೆÇಲೀಸ್ ಅಧೀಕ್ಷಕ ಶಿವಪ್ರಕಾಶ್ ದೇವರಾಜ್ ಸೂಚನೆ ಮೇರೆಗೆ ಕೊಪ್ಪ ಠಾಣೆ ಪೆÇಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

See also  ಮೋದಿ ಗೆಲ್ಲದಿದ್ದರೆ ದೇಶ ಉದ್ಧಾರವಾಗಲ್ಲ: ಸಾಹಿತಿ ಎಸ್.ಎಲ್. ಭೈರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು