News Kannada
Wednesday, October 05 2022

ಮೈಸೂರು

ಮೈಸೂರಿನಲ್ಲಿ ವೀರಯೋಧರ ಸ್ಮರಣೆ-ಸನ್ಮಾನ - 1 min read

Photo Credit :

ಮೈಸೂರಿನಲ್ಲಿ ವೀರಯೋಧರ ಸ್ಮರಣೆ-ಸನ್ಮಾನ

ಮೈಸೂರು: ಪರಿಸರ ಸ್ನೇಹಿ ತಂಡದ ವತಿಯಿಂದ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಜಲಪುರಿ ಪೊಲೀಸ್ ಕ್ವಾರ್ಟರ್ಸ್ ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಜೈ ಹಿಂದ್ ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ವೀರ ಯೋಧರಿಗೆ ಸನ್ಮಾನಿಸಲಾಯಿತು.

ಇದೇ ವೇಳೆ ಆನಂತರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಸೇನೆಯ ಅನುಭವಗಳನ್ನು ಹಾಗೂ ಕಾರ್ಗಿಲ್ ನಲ್ಲಿ ಸಂಭವಿಸಿದ ಅವಘಡಗಳ ಬಗ್ಗೆ ವಿವರಿಸಲಾಯಿತು. ಆ ನಂತರ ಕಾರ್ಗಿಲ್‍ನಲ್ಲಿ ವೀರ ಮರಣ ಹೊಂದಿದ ಯೋಧರನು ಸ್ಮರಿಸಲಾಯಿತು ಜತೆಗೆ ವೀರ ಯೋಧರಾದ ಜೂನಿಯರ್ ಕಮಿಷನರ್ ಆಫೀಸರ್ ನೀಲಕಂಠ ಕುಮಾರ್ ಶೆಟ್ಟಿ, ಕೃಷ್ಣಾಜಿ ರಾವ್, ಸುಬ್ರಹ್ಮಣ್ಯ, ಡಿ ತೆನಗಿ, ಉಮೇಶ್, ಬಸವರಾಜ್ ಅವರನ್ನು ಸನ್ಮಾನಿಸಲಾಯಿತು.

ವೀರ ಯೋಧರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ, ದೇಶ ಕಾಯುವ ಸೈನಿಕರು ಪ್ರಾಣವನ್ನು ದೇಶಕ್ಕಾಗಿ ಮುಡಿಪಾಗಿಡುತ್ತಾರೆ. ಯುವ ಸಮೂಹ ಕೂಡ ದೇಶದ ಪ್ರಗತಿಗಾಗಿ ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕು. ಗಡಿ ಪ್ರದೇಶದಲ್ಲಿ ನಮ್ಮ ಸೈನಿಕರು ಶತ್ರು ರಾಷ್ಟ್ರಗಳಿಂದ ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಇದರಿಂದ ನಾವು ದೇಶದ ಒಳಗಡೆ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದೇವೆ. ಇದೇ ರೀತಿ ಸಾವಿರಾರು ಯೋಧರು ಸಹ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ಮಾಡಿದ್ದಾರೆ. ಇಂತಹವರ ಸ್ಮರಣೆ ಅಗತ್ಯವಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಜೂನಿಯರ್ ಕಮಿಷನರ್ ಆಫೀಸರ್ ನೀಲಕಂಠ ಕುಮಾರ್ ಶೆಟ್ಟಿ ಮಾತನಾಡಿ, ಪಾಕ್ ಆಕ್ರಮಿತ ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗಿದೆ. ಭಯೋತ್ಪಾದಕರಿಂದ ನಮ್ಮ ಸೈನಿಕರು ದಿನನಿತ್ಯ ಸಾಯುತ್ತಿದ್ದಾರೆ. ಅವರು ಗೆರಿಲ್ಲಾ ಮಾದರಿಯಲ್ಲಿ ಯುದ್ಧ ಮಾಡುತ್ತಿದ್ದಾರೆ. ಒಳಗಿನಿಂದ ಮಾವೋದಿಗಳು, ನಕ್ಸಲೈಟ್‍ಗಳು ತೊಂದರೆ ಕೊಡುತ್ತಿದ್ದಾರೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡರು. ಭಾರತ ಅಭಿವೃದ್ಧಿ ಹೊಂದುವುದು ಚೀನಾಕ್ಕೆ ಬೇಡವಾಗಿದೆ. ಸಾವಿರಾರು ಕಿ.ಮೀ.ಹಾಗೆಯೇ ಚೀನಾದ ವಶದಲ್ಲಿದೆ. ಪಾಕಿಸ್ತಾನಕ್ಕೆ ಚೀನಾ ಹಣ ಹಾಗೂ ಶಸ್ತಾಸ್ತ್ರ ನೀಡುತ್ತಿದೆ. ಚೀನಾದಲ್ಲಿ ಭಯೋತ್ಪಾದನೆ ಇಲ್ಲ. ಸರ್ಕಾರ ಮನಸ್ಸು ಮಾಡಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಹಾಗೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯರಾದ ನಾರಾಯಣ ಲೋಲಪ್ಪ, ಬಿಜೆಪಿ ಯುವ ಮುಖಂಡ ಕಡಕೊಳ ಜಗದೀಶ್, ಬಿಜೆಪಿ ಮುಖಂಡರಾದ ಆನಂದ್, ಮುನಿರತ್ನಂ, ಶ್ರೀನಿವಾಸ್ ರಾಕೇಶ್, ಪರಿಸರ ಸ್ನೇಹಿ ತಂಡದ ಅಧ್ಯಕ್ಷರಾದ ಡಿ.ಲೋಹಿತ್, ಸಂತೋಷ್, ಜೀವನ್, ಸುರೇಂದ್ರ, ಶ್ರೀನಿವಾಸ್, ನವೀನ್ ಶೆಟ್ಟಿ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಶಿವಮ್ಮ, ವೇದಾವತಿ, ಉದಯಕುಮಾರಿ ಇನ್ನಿತರರು ಇದ್ದರು.

See also  ಶೆಟ್ಟಹಳ್ಳಿಯಲ್ಲಿ ಭಯಹುಟ್ಟಿಸಿರುವ ಹುಲಿ ಓಡಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು