News Kannada
Tuesday, September 27 2022

ಮೈಸೂರು

ಮೈಸೂರಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ - 1 min read

Photo Credit :

ಮೈಸೂರಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ

ಮೈಸೂರು: ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಸೇವಾ ಬಳಗದ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ತಗಡೂರು ರಾಮಚಂದ್ರ ಉದ್ಯಾನವನದಲ್ಲಿ ಗಿಡ ನೆಟ್ಟು ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 222ನೇ ಜಯಂತಿಯನ್ನು ಆಚರಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೈ.ಡಿ.ರಾಜಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಜನಿಷ್ಠೆ ಕಾರ್ಯಕ್ಕೆ ಹೆಸರಾದವರು ಸಂಗೊಳ್ಳಿ ರಾಯಣ್ಣ. ರಾಜ ನಿಷ್ಠರಾಗಿ ಬ್ರಿಟಿಷ್ ಸೈನ್ಯದ ವಿರುದ್ಧ ಶೌರ್ಯ ಪರಾಕ್ರಮ ತೋರಿದ ದೇಶಭಕ್ತರಾಗಿದ್ದರೂ ರಾಯಣ್ಣನವರ ವಂಶಸ್ಥರು ರಾಣಿ ಚೆನ್ನಮ್ಮನವರ ಆಸ್ಥಾನದ ರಕ್ಷಣಾ ಕಾರ್ಯದಲ್ಲಿ ತಮ್ಮ ಸೇನಾ ನಿಷ್ಠೆಗೆ ಹೆಸರಾಗಿದ್ದವರು. ಸಂಗೊಳ್ಳಿಯ ಗರಡಿಯಲ್ಲಿ ಕತ್ತಿವರಸೆ, ದೊಣ್ಣೆ ವರಸೆ, ಮೊದಲಾದ ಯುದ್ಧದ ಕೌಶಲ್ಯವನ್ನು ಹೊಂದಿ ಪರಿಣತ ಸೈನಿಕರಾಗಿದ್ದರು. ಅವರ ಮಹತ್ವಾಕಾಂಕ್ಷೆ ಕಿತ್ತೂರು ಸಂಸ್ಥಾನದ ರಕ್ಷಣೆಯಲ್ಲಿ ಆಗಿತ್ತು. 1989ರ ಆಗಸ್ಟ್ 15ರಂದು ಜನಿಸಿದ ರಾಯಣ್ಣ ಕಿತ್ತೂರು ಸಂಸ್ಥಾನದ ಮುಖ್ಯ ಸೈನಿಕರಾಗಿ, ಬಾಳಪ್ಪ ಮತ್ತು ಚೆನ್ನಬಸವಣ್ಣ ಎಂಬ ತಮ್ಮ ಆಪ್ತ ಬಳಗದ ಮೂಲಕ ಸಮರ್ಥವಾಗಿ ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡಿದರು. ದತ್ತು ಮಕ್ಕಳಿಗೆ ರಾಜ್ಯದ ಹಕ್ಕಿಲ್ಲವೆಂಬ ಕಾರಣ ನೀಡಿ ಬ್ರಿಟಿಷರು ಕಿತ್ತೂರು ಸಂಸ್ಥಾನಕ್ಕೆ ಕಪ್ಪ ನೀಡಬೇಕೆಂದು ಆದೇಶ ಹೊರಡಿಸಿದಾಗ ಸ್ವಂತ ರಾಣಿ ಚೆನ್ನಮ್ಮ ಅದನ್ನು ವಿರೋಧಿಸಿ ಬ್ರಿಟಿಷರ ವಿರುದ್ಧ ಯುದ್ಧಕ್ಕೆ ನಿಂತಾಗ ಅವರ ಜತೆ ನಿಂತು ಕಿತ್ತೂರು ಸಂಸ್ಥಾನದ ಉಳಿವಿಗೆ ಅವಿರತ ಹೋರಾಟ ಮಾಡಿದ ರಾಯಣ್ಣ 1831ರ ಜನವರಿ 26ರಂದು ಬ್ರಿಟಿಷರಿಂದ ನೇಣಿಗೆ ಶರಣಾದರು ಎಂದು ಹೇಳಿದರು.

ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ಮಾತನಾಡಿ, ಇಂದಿನ ಯುವ ಪೀಳಿಗೆ ಸಂಗೊಳ್ಳಿ ರಾಯಣ್ಣನ ದೇಶಭಕ್ತಿ ಅರಿಯಲಿ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ದೇಶಭಕ್ತಿ ಹಾಗೂ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕು ಎಂದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇವಾ ಬಳಗದ ಅಧ್ಯಕ್ಷರಾದ ರವಿ ತೇಜ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಪರಿಸರಸ್ನೇಹಿಯಾಗಲಿ, ಸ್ವಾತಂತ್ರ್ಯ ದಿನಾಚರಣೆಯಂದು ಶಾಲಾಕಾಲೇಜು, ಕಚೇರಿಗಳಲ್ಲಿ ಬಹುಮಟ್ಟಿಗೆ ಪರಿಸರಕ್ಕೆ ಹಾನಿಯಾಗುವಂತಹ ಪ್ಲಾಸ್ಟಿಕ್‍ನಿಂದ ತಯಾರಿಸಿದ ಬಾವುಟ ಮತ್ತಿತರ ವಸ್ತುಗಳನ್ನು ಬಳಸಲಾಗುತ್ತದೆ. ಇದು ಸರಿಯಲ್ಲ ಎಂದರು.

ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಸುಬ್ಬಣ್ಣ, ಶ್ರೀನಿವಾಸ್ ರಾಕೇಶ್, ತೇಜೇಶ್ ಲೋಕೇಶ್ ಗೌಡ, ಮಧು, ಹರೀಶ್ ನಾಯ್ಡು, ಪ್ರಭುಶಂಕರ್, ಕಂಸಾಳೆ ಕುಮಾರಸ್ವಾಮಿ, ಗೃಹಶೋಭೆ ಕೃಷ್ಣ ಇನ್ನಿತರರು ಹಾಜರಿದ್ದರು.

 

See also  ಕೀಲಾರದಲ್ಲಿ ಸುಮಲತಾಗೆ ಕೈ-ಕಮಲ ನಾಯಕರ ಸಾಥ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು