News Kannada
Friday, September 30 2022

ಮೈಸೂರು

ಮೈಸೂರ ದಸರಾದ ಗಜಪಯಣಕ್ಕೆ ಇಂದು ಚಾಲನೆ - 1 min read

Photo Credit :

ಮೈಸೂರ ದಸರಾದ ಗಜಪಯಣಕ್ಕೆ ಇಂದು ಚಾಲನೆ

ಮೈಸೂರು: ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಆರು ಆನೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ದಸರಾದ ಗಜಪಯಣಕ್ಕೆ ಗುರುವಾರ ವಿಧ್ಯುಕ್ತ ಚಾಲನೆ ನೀಡಲಾಗಿದೆ.

ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆಯಲ್ಲಿ ಅಲಂಕೃತವಾಗಿದ್ದ ಅಂಬಾರಿ ಹೊರುವ ಆನೆ ಅರ್ಜುನ ನೇತೃತ್ವದ ಗಜಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಅವರು ಆನೆಗಳಿಗೆ ಕಬ್ಬು, ಬೆಲ್ಲ, ಕೋಡುಬಾಳೆ, ಮೋದಕ ಹೀಗೆ ಹಲವು ಭಕ್ಷ್ಯಬೋಜನವನ್ನು ತಿನ್ನಿಸಿ, ಪುಷ್ಪಾರ್ಚನೆ ಮಾಡಿ, ಮಾವುತ ಮತ್ತು ಕಾವಾಡಿಗಳಿಗೆ ಫಲತಾಂಬೂಲ ನೀಡಿ ಗಜಪಯಣಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಮಹಿಳೆಯರು ಕಳಸ ಹೊತ್ತು ಗಡಿ ಭಾಗದ ತನಕ ಗಜಪಡೆಯೊಂದಿಗೆ ಹೆಜ್ಜೆಹಾಕಿ ಬೀಳ್ಕೊಟ್ಟರು.

ಅರ್ಜುನ ನೇತೃತ್ವದಲ್ಲಿ ವಿಜಯ, ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಈಶ್ವರರನ್ನೊಳಗೊಂಡ ಗಜಪಡೆ ಗಾಂಭೀರ್ಯದ ಹೆಜ್ಜೆ ಹಾಕಿದವು. ಗಜಪಯಣ ಕಾರ್ಯಕ್ರಮದಲ್ಲಿ ರಂಗಹೆಜ್ಜೆ ಕಲಾತಂಡದ ಜಾನಪದ ನೃತ್ಯ ಕಲೆಗಳು, ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಕಂಸಾಳೆ, ವೀರನಹೊಸಳ್ಳಿ ಗಿರಿಜನ ವಸತಿ ಶಾಲಾ ಮಕ್ಕಳಿಂದ ನೃತ್ಯ, ನಾಗಪುರ ಗಿರಿಜನ ವಸತಿ ಶಾಲಾ ಮಕ್ಕಳಿಂದ ನೃತ್ಯ, ಗುರುಪುರ ಟಿಬೇಟಿಯನ್ ಶಾಲೆಯ ಮಕ್ಕಳ ನೃತ್ಯ, ಅಮ್ಮ ರಾಮಚಂದ್ರ ಮತ್ತು ತಂಡದವರ ಜಾನಪದ ಮತ್ತು ಭಾವಗೀತೆಗಳ ಗಾಯನ ನಡೆಯಿತು.

ಇದೇ ವೇಳೆ ಮಾತನಾಡಿದ ಸಚಿವ ಅಶೋಕ್ ಅವರು ಪಕ್ಷದಲ್ಲಿ ನಾನು ಸಾಮಾನ್ಯ ಕಾರ್ಯಕರ್ತ. ಯಾರಿಗೆ ಇಲ್ಲಿ ಕಾಂಪಿಟೇಟರೂ ಅಲ್ಲ. ಗಜರಾಜನಿಗೆ ಪೂಜೆ ಸಲ್ಲಿಸುವುದನ್ನು ತಪ್ಪಿಸಬಾರದೆಂದು ಇಲ್ಲಿಗೆ ಬಂದಿದ್ದೇನೆ. ನಾಡಿಗೆ, ನೆರೆಪೀಡಿತರಿಗೆ ಒಳಿತಾಗಲಿ ಎಂದು ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ಜಿಲ್ಲಾಡಳಿತ, ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ, ಶಾಸಕರಾದ ಎಸ್.ಎ. ರಾಮದಾಸ್, ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮೇಯರ್ ಪುಷ್ಪಲತಾ ಜಗನ್ನಾಥ್, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್. ಅರಣ್ಯ ಅಧಿಕಾರಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.

See also  ರೆಸಾರ್ಟ್‌ ನಲ್ಲಿ ಕಳ್ಳತನ ಮಾಡಿದವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು