News Kannada
Friday, December 02 2022

ಮೈಸೂರು

ಮೈಸೂರು ದಸರಾ ಜಂಬೂ ಸವಾರಿಗೆ ತಾಲೀಮಿನ ಮುನ್ನುಡಿ…

Photo Credit :

ಮೈಸೂರು ದಸರಾ ಜಂಬೂ ಸವಾರಿಗೆ ತಾಲೀಮಿನ ಮುನ್ನುಡಿ...

ಮೈಸೂರು: ಮೊದಲ ಹಂತದಲ್ಲಿ ಅಂಬಾರಿ ಹೊರುವ ಅರ್ಜುನನ ನೇತೃತ್ವದಲ್ಲಿ ಅರಮನೆ ಆವರಣಕ್ಕೆ ಆಗಮಿಸಿರುವ ಆರು ಆನೆಗಳನ್ನೊಳಗೊಂಡ ಗಜಪಡೆ ಒಂದೆಡೆ ತಾಲೀಮು ನಡೆಸುತ್ತಿದ್ದರೆ, ಇನ್ನೊಂದೆಡೆ ಅವುಗಳಿಗೆ ಎಲ್ಲ ರೀತಿಯ ಪೌಷ್ಠಿಕಾಂಶಗಳನ್ನು ನೀಡಿ ಜಂಬೂ ಸವಾರಿಗೆ ಸದೃಢಗೊಳಿಸುವ ಕಾರ್ಯಗಳನ್ನು ಕಾವಾಡಿ, ಮಾವುತರು ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಾಡುತ್ತಿದ್ದಾರೆ.

ಈಗಾಗಲೇ ಬೆಳಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟಪದವರೆಗೆ ಸುಮಾರು ಐದು ಕಿ.ಮೀ.ಗಳ ತಾಲೀಮು ನಡೆಯುತ್ತಿದ್ದು, ಅರ್ಜುನ ರಾಜಗಾಂಭೀರ್ಯದಲ್ಲಿ ಮುನ್ನಡೆಯುತ್ತಿದ್ದರೆ ಉಳಿದ ಆನೆಗಳು ಹಿಂಬಾಲಿಸುತ್ತಿವೆ.

ವಿವಿಧ ಆನೆ ಶಿಬಿರಗಳಿಂದ ಬಂದಿರುವ ಗಜಪಡೆಯನ್ನು ಖಾಸಗಿ ವೇ ಬ್ರಿಡ್ಜ್‍ನಲ್ಲಿ ತೂಕ ಮಾಡಲಾಗಿದ್ದು, ಅವುಗಳ ತೂಕ ಸಾಮಥ್ರ್ಯಕ್ಕೆ ಅನುಗುಣವಾಗಿ ಯಾವ ಆಹಾರ? ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ಪಟ್ಟಿ ಮಾಡಿಕೊಂಡು ನೀಡಲಾಗುತ್ತಿದೆ. ಈಗಿರುವ ಗಜಪಡೆ ಪೈಕಿ ಅರ್ಜುನ ಬರೋಬ್ಬರಿ 5800 ಕೆಜಿಯಿದ್ದರೆ ಉಳಿದಂತೆ ವರಲಕ್ಷ್ಮಿ- 3,510, ಈಶ್ವರ- 3,995, ಧನಂಜಯ- 4,460, ವಿಜಯಾ- 2,825, ಅಭಿಮನ್ಯು- 5,145 ಕೆಜಿ ತೂಕವನ್ನು ಹೊಂದಿವೆ.

ಜಂಬೂ ಸವಾರಿ ವೇಳೆ ಅರ್ಜುನನ ಎಡ-ಬಲ ಭಾಗದಲ್ಲಿ ಕುಮ್ಕಿ ಆನೆಗಳಾಗಿ ವರಲಕ್ಷ್ಮೀ ಮತ್ತು ವಿಜಯಾ ಆನೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ತುಂಬಾ ಕಾಳಜಿ ವಹಿಸಿ ನೋಡಿಕೊಳ್ಳಲಾಗುತ್ತಿದ್ದು, ಅರಮನೆಯ ಆವರಣದಲ್ಲಿ ವಾಸ್ತವ್ಯ ಹೂಡಿರುವ ಆನೆಗಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದ್ದು, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಬೆಲ್ಲ, ತೆಂಗಿನಕಾಯಿ, ಭತ್ತ, ಮುದ್ದೆ, ಬೆಣ್ಣೆ, ಸೇರಿದಂತೆ ಹಲವು ಪೌಷ್ಠಿಕಾಂಶಯುಕ್ತ ಆಹಾರ ನೀಡಲಾಗುತ್ತದೆ. ಅಲದ ಮರದ ಸೊಪ್ಪನ್ನು ಲಾರಿಗಳಲ್ಲಿ ತಂದು ಹಾಕಲಾಗುತ್ತದೆ. ಪ್ರತಿ ಆನೆಯ ಮಾವುತ-ಕಾವಾಡಿಗಳು ತಮ್ಮ ಆನೆಗೆ ಬೆಲ್ಲ, ಕಬ್ಬು ತಿನ್ನಿಸುವ ಜತೆಗೆ ಮುದ್ದೆಗೆ ಬೆಣ್ಣೆ ಹಚ್ಚಿ ತಿನ್ನಿಸುತ್ತಾರೆ. ದಷ್ಟಪುಷ್ಟವಾಗಿ ಆರೋಗ್ಯವಾಗಿರಲೆಂದು ರಾಜಾತಿಥ್ಯ ನೀಡಲಾಗುತ್ತದೆ. ಜತೆಗೆ ಮಹಾಮಜ್ಜನ ಮಾಡಿಸಲಾಗುತ್ತಿದೆ.

ತೂಕ ಪರೀಕ್ಷೆ ಮತ್ತು ಆರೋಗ್ಯ ಪರೀಕ್ಷೆ ನಡೆಸಲಾಗಿದ್ದು ಇವುಗಳ ಆರೋಗ್ಯ ಸ್ಥಿರವಾಗಿರುವುದರಿಂದ ಮುಂದಿನ ದಿನಗಳಲ್ಲಿ ಕಠಿಣ ತಾಲೀಮು ನಡೆಸಲಾಗುತ್ತದೆ. ಇವುಗಳ ಜತೆಗೆ ಇನ್ನು ಕೆಲವು ಆನೆಗಳು ಎರಡನೇ ಹಂತದಲ್ಲಿ ಆಗಮಿಸಿ ಸೇರ್ಪಡೆಗೊಳ್ಳಲಿವೆ. ಪ್ರತಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಗಜಪಡೆಗಳ ತಾಲೀಮು ನಡೆಯುವ ವೇಳೆ ಅವುಗಳು ಸಾಗುವ ರಾಜ ಮಾರ್ಗದಲ್ಲಿ ವಾಹನ ಸಂಚಾರ ರದ್ದುಗೊಳಿಸುವುದರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರು ಜತೆಗಿದ್ದು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ದಿನದಿಂದ ದಿನಕ್ಕೆ ಮೈಸೂರು ನಗರದಲ್ಲಿ ದಸರಾ ಕಳೆ ಮೂಡುತ್ತಿದ್ದು, ಸರ್ವ ಸಿದ್ಧತೆಗಳು ಕೂಡ ಮತ್ತೊಂದಡೆ ನಡೆಯುತ್ತಿರುವುದನ್ನು ಕಾಣಬಹುದಾಗಿದೆ.a

See also  ನಕಲಿ ಕಾಂಗ್ರೆಸ್ ನಿಂದ ನಕಲಿ ಸಿಡಿ ಬಿಡುಗಡೆ: ಶೋಭಾ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು