News Kannada
Monday, December 05 2022

ಮೈಸೂರು

ಸಂಕಷ್ಟದಿಂದ ಪಾರಾಗುವಂತೆ ಡಿಕೆಶಿ ಅಭಿಮಾನಿಗಳಿಂದ ಪೂಜೆ

Photo Credit :

ಸಂಕಷ್ಟದಿಂದ ಪಾರಾಗುವಂತೆ ಡಿಕೆಶಿ ಅಭಿಮಾನಿಗಳಿಂದ ಪೂಜೆ

ಮೈಸೂರು: ಇಡಿ ಸಂಕಷ್ಟದಿಂದ ಡಿ.ಕೆ.ಶಿವಕುಮಾರ್ ಪಾರಾಗಲೆಂದು ಹಾರೈಸಿ ಎಂ.ಜಿ.ರಸ್ತೆಯಲ್ಲಿರುವ ಮಹಾಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಪೂಜೆ ಸಲ್ಲಿಸಿದರು. ಇದೇ ವೇಳೆ ಅಭಿಮಾನಿಗಳು ಡಿ.ಕೆ.ಶಿ.ಮುಖವಾಡ ಧರಿಸಿ ಘೋಷಣೆ ಕೂಗಿ ಆರೋಪದಿಂದ ಬೇಗ ಮುಕ್ತರಾಗಲೆಂದು ಪ್ರಾರ್ಥಿಸಿದರು.

ಕಾಂಗ್ರೆಸ್ ಮೈಸೂರು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಎಂ.ಕೆ.ಅಶೋಕ್ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತೆಗೆಯಲೇಬೇಕೆಂದು ಹೊರಟಿದ್ದ ಬಿಜೆಪಿಯವರಿಗೆ ಅಡ್ಡಿಯಾಗಿದ್ದು ಡಿ.ಕೆ.ಶಿವಕುಮಾರ್. ಎಲ್ಲ ಹಂತದಲ್ಲೂ ಅವರು ನಡೆಸಿದ ಷಡ್ಯಂತ್ರಗಳು, ಹೋರಾಟ ಹುಸಿಗೊಳಿಸಿ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಸದೃಢಗೊಳಿಸುತ್ತಾ ಬಂದಿದ್ದರು. ಅವರನ್ನೇ ರಾಜಕೀಯವಾಗಿ ಮುಗಿಸಿದರೆ ನಮ್ಮ ಕೆಲಸ ಸುಲಭವಾಗುತ್ತದೆ ಎಂದು ತಿಳಿದ ಬಿಜೆಪಿಯವರು ಡಿಕೆಶಿ ಅವರನ್ನು ಹಣಿಯಲು ಮುಂದಾಗಿದ್ದಾರೆ ಎಂದು ದೂರಿದರು.

ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ, ಐಟಿಯನ್ನು ದುರುಪಯೋಗ ಮಾಡಿಕೊಂಡು ಅವುಗಳ ಮೂಲಕ ಶಿವಕುಮಾರ್ ಬಗ್ಗಿಸಲು ಪ್ರಯತ್ನಿಸುತ್ತಿದ್ದು ವಿಚಾರಣೆ ನೆಪದಲ್ಲಿ ಕಿರುಕುಳ ಕೊಡುತ್ತಿದ್ದಾರೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯವಿದ್ದರೂ ಚುನಾವಣೆಯ ನಂತರ ಎಲ್ಲವನ್ನು ಮರೆತು ಅಭಿವೃದ್ಧಿಗೆ ಕೈ ಜೋಡಿಸುತ್ತೇವೆ. ಬಿಜೆಪಿ ಸರ್ಕಾರ ಕುತಂತ್ರಿ ಸರ್ಕಾರ, ಶಿವಕುಮಾರ್ ಏಳ್ಗೆಯನ್ನು ಸಹಿಸದೆ ಇಲ್ಲದ ಕೇಸುಗಳನ್ನು ಹಾಕಿ ಚಿತ್ರಹಿಂಸೆ ಕೊಡುತ್ತಿದ್ದಾರೆ. ಶಿವಕುಮಾರ್ ಅವರು ಸಾವಿರಾರು ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದರು. ಆದರೆ ಜಾರಿ ನಿರ್ದೆಶನಾಲಯದ ಅಧಿಕಾರಿಗಳು ಅದ್ಯಾವುದಕ್ಕೂ ಅವಕಾಶ ಕೊಡದೆ ಮೃಗದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಚಾರ ಸಮಿತಿ ಕೆ.ಆರ್.ಕ್ಷೇತ್ರದ ಅಧ್ಯಕ್ಷ ಧನಪಾಲ್, ಉಪ ಸಂಯೋಜಕ ಮೈಸೂರು ಬಸವಣ್ಣ, ಸಂಯೋಜಕ ದಿವಾಕರ್, ಚಾಮರಾಜ ಕ್ಷೇತ್ರದ ಉಪಾಧ್ಯಕ್ಷ ತಿಲಕ್ ನಗರ ನಾಗರಾಜ್, ನೇವಲ್ ಅಶೋಕ್ ಪ್ರಚಾರ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

See also  ದೇಶದ ಅಕ್ರಮ ವಲಸಿಗರನ್ನು ಹೊರಹಾಕಿ: ಆರೆಸ್ಸೆಸ್ ಅಭಿಮತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು