News Kannada
Monday, December 05 2022

ಮೈಸೂರು

ಸಿಡಿಮದ್ದಿನ ತಾಲೀಮಿಗೆ ಅರಮನೆ ಫಿರಂಗಿಗಳ ಸಿದ್ಧತೆ

Photo Credit :

ಸಿಡಿಮದ್ದಿನ ತಾಲೀಮಿಗೆ ಅರಮನೆ ಫಿರಂಗಿಗಳ ಸಿದ್ಧತೆ

ಮೈಸೂರು: ಮೈಸೂರು ದಸರಾ ಆಚರಣೆಯಲ್ಲಿ ಅರಮನೆಯಲ್ಲಿರುವ ಪ್ರತಿಯೊಂದು ವಸ್ತುಗಳಿಗೂ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅದರಂತೆ ಅರಮನೆಯಲ್ಲಿರುವ ಫಿರಂಗಿಗಳು ಕೂಡ ಸಿಡಿಮದ್ದು ತಾಲೀಮಿಗೆ ಬಳಸಲ್ಪಡುತ್ತಿದ್ದು, ಅದನ್ನು ಇದೀಗ ಅರಮನೆ ಆವರಣದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಗಳು ಸ್ವಚ್ಛಗೊಳಿಸಿ ಸಿಡಿಮದ್ದಿನ ತಾಲೀಮಿಗೆ ಅಣಿಗೊಳಿಸುತ್ತಿದ್ದಾರೆ.

ಈಗಾಗಲೇ ಫಿರಂಗಿಗಳ ಜವಾಬ್ದಾರಿಯನ್ನು ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ವಹಿಸಿಕೊಂಡಿದ್ದು, ಅವುಗಳನ್ನು ಶುಚಿಗೊಳಿಸಿ ಪೂಜೆ ಸಲ್ಲಿಸುವ ಮೂಲಕ ಮುಂದಿನ ಕಾರ್ಯಗಳ ಬಳಕೆಗೆ ಸಿದ್ದಗೊಳಿಸಲಾಗುತ್ತಿದೆ.

ಜಂಬೂ ಸವಾರಿಯ ವೇಳೆ ಇದೇ ಫಿರಂಗಿಗಳಿಂದ ಕುಶಾಲತೋಪು ಹಾರಿಸುವ ಸಂಪ್ರದಾಯವಿದೆ. ಈ ವೇಳೆ ಆನೆ-ಕುದುರೆಗಳು ಬೆಚ್ಚಿ ಬೀಳದಂತೆ ಇದಕ್ಕೆ ಮೊದಲೇ ಫಿರಂಗಿಗಳಲ್ಲಿ ಸಿಡಿಮದ್ದಿನ ತಾಲೀಮು ನಡೆಸಲಾಗುತ್ತದೆ.

ಈ ಫಿರಂಗಿಗಳ ಬಗೆಗಿನ ಇತಿಹಾಸವನ್ನು ಕೆದಕಿದರೆ ಒಂದಷ್ಟು ವಿಚಾರಗಳು ಹೊರಬರುತ್ತವೆ. ಒಂದು ಕಾಲದ ಮೈಸೂರು ಸಂಸ್ಥಾನದ ರಾಜರ ಯುದ್ಧದ ಶಕ್ತಿಯ ಕೇಂದ್ರವಾಗಿದ್ದವು. ಆದರೆ ಈಗ ದಸರಾದಲ್ಲಿ ಕುಶಾಲತೋಪು ಸಿಡಿಸಲು ಬಳಸಲಾಗುತ್ತಿದೆ.

ಫಿರಂಗಿಗಳನ್ನು ಗಜಪಡೆ ಮತ್ತು ಕುದುರೆಗಳು ಬೆದರದಂತೆ ಸಿಡಿಮದ್ದು ತಾಲೀಮಿಗೆ ಬಳಸಿಕೊಳ್ಳಲಾಗುವುದಲ್ಲದೆ, ದಸರಾ ಜಂಬೂಸವಾರಿ ಹೊರಡುವ ಸಂದರ್ಭ ಅಂಬಾರಿಯಲ್ಲಿ ವೀರಾಜಮಾನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಆರಂಭಿಸಿ ಅದು ಮುಗಿಯುವುದರೊಳಗಾಗಿ 21 ಕುಶಾಲ ತೋಪುಗಳನ್ನು ಇದೇ ಫಿರಂಗಿಯಿಂದ ಸಿಡಿಸಲಾಗುತ್ತದೆ. ಫಿರಂಗಿ ಮೂಲಕ ಕುಶಾಲತೋಪು ಸಿಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ತರಬೇತಿ ಬೇಕಾಗುತ್ತದೆ. ಇದನ್ನು ಸಿಎಆರ್ ಪೊಲೀಸರು ಚಾಚುತಪ್ಪದೆ ಮಾಡಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ.

ಸುಮಾರು ಮೂರೂವರೆ ಅಡಿ ಉದ್ದದ ಫಿರಂಗಿ ಕೊಳವೆಗೆ ಹದಮಾಡಿದ ಸುಮಾರು ಮೂರು ಕಿಲೋ ಗ್ರಾಂನಷ್ಟು ರಂಜಕದ ಪುಡಿಯನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಆಯತಕಾರದ ಪೊಟ್ಟಣದಂತೆ ಮಾಡಲಾಗುತ್ತದೆ. ಅದನ್ನು ಕೊಳವೆಗೆ ಹಾಕಿ ನಂತರ ಕಬ್ಬಿಣದ ಸಾಧನವೊಂದರ ಮೂಲಕ ತಳ್ಳಿ ಗಟ್ಟಿಗೊಳಿಸಲಾಗುತ್ತದೆ. ನಂತರ ಅದಕ್ಕೆ ಬೆಂಕಿ ಹಚ್ಚಿದಾಗ ಅದು ಭಾರೀ ಶಬ್ದದೊಂದಿಗೆ ಸ್ಫೋಟಗೊಳ್ಳುತ್ತದೆ.

ಬಳಿಕ ಆ ಬಿಸಿಯಿರುವ ಕೊಳವೆಯನ್ನು ಸಿಂಬ ಎಂಬ ಸಾಧನದಿಂದ ಸ್ವಚ್ಛಗೊಳಿಸುತ್ತಾರೆ. ಇದು ಸುಲಭದ ಕೆಲಸವಲ್ಲ, ಏಕೆಂದರೆ ಇಲ್ಲಿ ಒಂದೇ ಚಿಕ್ಕ ಕಿಡಿಯಿದ್ದರೂ ಮತ್ತೆ ಮದ್ದು ತುಂಬಿಸುವಾಗ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಕುಶಾಲ ತೋಪು ಸಿಡಿಸುವಾಗ ಅವಘಡಗಳು ಸಂಭವಿಸಿ ಅದನ್ನು ಸಿಡಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆಗಳೂ ಹಲವಷ್ಟು ನಡೆದ ನಿದರ್ಶನಗಳಿವೆ. ಅದು ಏನೇ ಇರಲಿ ದಸರಾದಲ್ಲಿ ಬಳಕೆಯಾಗುವ ಫಿರಂಗಿಗಳು ತನ್ನದೇ ಆದ ಇತಿಹಾಸದ ಕಥೆ ಹೇಳುತ್ತಿರುವುದಂತು ಸತ್ಯ.

See also  ಸಾಂಸ್ಕೃತಿಕ ನಗರಿಯಲ್ಲಿ ಪೌರಕಾರ್ಮಿಕರಿಂದ ಬರಿಗೈಯಲ್ಲೇ ಮ್ಯಾನ್ ಹೋಲ್ ಸ್ವಚ್ಛತಾ ಕಾರ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು