News Kannada
Saturday, November 26 2022

ಮೈಸೂರು

ಚಾಮುಂಡಿಬೆಟ್ಟದಲ್ಲಿ ಅಕ್ರಮ ಅಂಗಡಿ ಮಳಿಗೆ ತೆರವು - 1 min read

Photo Credit :

ಚಾಮುಂಡಿಬೆಟ್ಟದಲ್ಲಿ ಅಕ್ರಮ ಅಂಗಡಿ ಮಳಿಗೆ ತೆರವು

ಮೈಸೂರು: ಚಾಮುಂಡಿಬೆಟ್ಟದಲ್ಲಿ ಮಹಿಸಾಸುರನ ಪ್ರತಿಮೆಯಿಂದ ಚಾಮುಂಡೇಶ್ವರಿ ದೇವಾಲಯದವರೆಗಿನ ರಸ್ತೆಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಅಂಗಡಿ ಮಳಿಗೆಗಳನ್ನು ಗುರುವಾರ ಬೆಳಿಗ್ಗೆ ತೆರವುಗೊಳಿಸಲಾಗಿದೆ.

 

ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ಡಿಸಿಪಿ(ಕಾನೂನು ಸುವ್ಯವಸ್ಥೆ) ಮುತ್ತುರಾಜು ಅವರ ಮೇಲ್ವಿಚಾರಣೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮೂರು ಜೆಸಿಬಿಗಳ ಸಹಾಯದಿಂದ ಸುಮಾರು 140ಕ್ಕೂ ಹೆಚ್ಚು ಅಕ್ರಮ ಮಳಿಗೆಗಳನ್ನು ತೆರವುಗೊಳಿಸಲಾಗಿದೆ.

 

ಈಗಾಗಲೇ ಚಾಮುಂಡಿಬೆಟ್ಟದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಚಾಮುಂಡೇಶ್ವರಿ ದೇವಾಲಯಕ್ಕೆ ಅನತಿ ದೂರದಲ್ಲಿ ವ್ಯಾಪಾರಸ್ಥರಿಗಾಗಿಯೇ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಅದರ ಉದ್ಘಾಟನೆ ಸೆ.19ರಂದು ನಡೆಯಲಿದೆ. ಇದೀಗ  ತೆರವುಗೊಳಿಸಲಾದವರಿಗೆ ಇಲ್ಲಿ ಅಂಗಡಿ ಮಳಿಗೆಗಳನ್ನು ನೀಡಲಾಗುತ್ತದೆ. ಹೀಗಾಗಿ ಈ ಹಿಂದೆಯೇ ಅಂಗಡಿ ಮಾಲೀಕರಿಗೆ ನೋಟೀಸ್ ಜಾರಿ ಮಾಡಲಾಗಿತ್ತು. ವಿಷಯ ತಿಳಿದಿದ್ದರಿಂದ ಹೆಚ್ಚಿನ ಅಂಗಡಿ ಮಾಲೀಕರು ವಸ್ತುಗಳನ್ನು ತೆರವುಗೊಳಿಸಿದ್ದರು.

 

ಇಲ್ಲಿದ್ದ ಅಂಗಡಿ ಮಳಿಗೆಗಳ ಪೈಕಿ 40 ಮಳಿಗೆಗಳು ಮಾತ್ರ ಅಧಿಕೃತವಾಗಿದ್ದವಾದರೂ ಉಳಿದಂತೆ ಹೆಚ್ಚಿನವು ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಮಳಿಗೆಗಳಾಗಿದ್ದವು. ಅಲ್ಲದೆ ಒಬ್ಬರೇ ನಾಲ್ಕೈದು ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ಪಡೆಯುತ್ತಿದ್ದರು ಎಂಬ ಆರೋಪವೂ ಇದೆ.

 

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ವಹಿಸಿಕೊಂಡ ವಿ.ಸೋಮಣ್ಣ ಅವರು ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದ ವೇಳೆ ಅಕ್ರಮ ಮಳಿಗೆಗಳ ನಿರ್ಮಾಣ ಮತ್ತು ಅಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿದು ಬಂದಿದ್ದರಿಂದ ಅಕ್ರಮ ಮಳಿಗೆಗಳ ತೆರವು ಮಾಡುವ ನಿರ್ಧಾರಗಳನ್ನು ಕೈಗೊಂಡರಲ್ಲದೆ, ಈ ಸಂಬಂಧ ಸಾಧಕ ಬಾಧಕಗಳ ಚರ್ಚೆ ನಡೆಸಿ ಅಂತಿಮವಾಗಿ ಅಕ್ರಮ ಅಂಗಡಿ ಮಳಿಗೆಗಳ ತೆರವುಗೊಳಿಸುವ ತೀರ್ಮಾನ ಮಾಡಿದರು ಎನ್ನಲಾಗಿದೆ. ಜತೆಗೆ ಈಗ ವ್ಯಾಪಾರ ಮಾಡಿಕೊಂಡಿರುವ ಕುಟುಂಬಗಳಿಗೆ ತಲಾ ಒಂದರಂತೆ ಮಳಿಗೆಗಳನ್ನು ನೀಡುವ ತೀರ್ಮಾನ ಮಾಡಿದ್ದಾರೆ.

 ಇದೀಗ ಇಬ್ಬರು ಎಸಿಪಿ, ಹನ್ನೆರಡು  ಇನ್ಸ್ ಪೆಕ್ಟರ್, ಹನ್ನೆರಡು ಸಬ್ ಇನ್ಸ್ ಪೆಕ್ಟರ್, ಇಪ್ಪತ್ತು ಎಎಸ್‍ಐ ಹಾಗೂ 20 ಸಿಬ್ಬಂದಿ ಕೆಎಸ್‍ಆರ್‍ಪಿಯ ನಾಲ್ಕು ತುಕಡಿಯನ್ನು ಬಂದೋಬಸ್ತ್‍ಗೆ ನಿಯೋಜಿಸುವ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.

See also  ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರಿಂದ ಗೂಂಡಾಗಿರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು