News Kannada
Friday, December 02 2022

ಮೈಸೂರು

ಕಬ್ಬು ಕಟಾವು ಯಂತ್ರದತ್ತ ಈಗ ರೈತರ ಚಿತ್ತ…  

Photo Credit :

ಕಬ್ಬು ಕಟಾವು ಯಂತ್ರದತ್ತ ಈಗ ರೈತರ ಚಿತ್ತ...   

ಚಾಮರಾಜನಗರ: ರಾಜ್ಯದಲ್ಲಿ ಹಳೇ ಮೈಸೂರು ವ್ಯಾಪ್ತಿಯ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನದ ಕೆಲವೆಡೆ ರೈತರು ಕಬ್ಬು ಬೆಳೆಯುತ್ತಿದ್ದು, ಕಟಾವು ವೇಳೆ ಕೂಲಿ ಕಾರ್ಮಿಕರು ಸಿಗದೆ ಪರದಾಡುವುದು ಪ್ರತಿವರ್ಷವೂ ನಡೆಯುತ್ತಲೇ ಬರುತ್ತಿದೆ. ಈಗಾಗಲೇ ರಾಜ್ಯದ ಬೆಳಗಾವಿಯಲ್ಲಿ ಕಬ್ಬು ಕಟಾವು ಮಾಡುವ ಯಂತ್ರ ಬಂದಿದ್ದು ಅದರ ಮೂಲಕವೇ ಹೆಚ್ಚಿನ ರೈತರು ಕಬ್ಬನ್ನು ಕಟಾವು ಮಾಡುತ್ತಿದ್ದಾರೆ.

 ಇದೇ ಮೊದಲ ಬಾರಿಗೆ ಹಳೇ ಮೈಸೂರು ಭಾಗದ ವ್ಯಾಪ್ತಿಯಲ್ಲಿ ಅಂದರೆ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಥಮ ಬಾರಿಗೆ ಕಬ್ಬು ಕಟಾವು ಮಾಡುವ ಯಂತ್ರ ಬಂದಿದ್ದು ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಕಬ್ಬು ಕಟಾವು ಮಾಡುವ ಪ್ರಥಮ ಪ್ರಯೋಗ ನಡೆದಿದೆ. 

ಕುಂತೂರು ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಷುಗರ್ಸ್ ಕಾರ್ಖಾನೆಯವರ ಕೋರಿಕೆಯ ಮೇರೆಗೆ ಇವರೊಂದಿಗೆ ಒಪ್ಪಂದ ಮಾಡಿಕೊಂಡು ಬೆಳಗಾವಿ ಜಿಲ್ಲೆಯಿಂದ ಕಬ್ಬನ್ನು ಕಟಾವು ಮಾಡುವ ಯಂತ್ರದ ಮಾಲೀಕ ಸುಪ್ರೀತ್ ಗನಿ ಇಲ್ಲಿಗೆ ತಮ್ಮ ತಂಡ ಹಾಗೂ ಯಂತ್ರಗಳ ಮೂಲಕ ಬಂದಿದ್ದಾರೆ. 

ಇದರಿಂದ ಕಬ್ಬು ಬೆಳೆಗಾರರಿಗೆ ತಲೆನೋವಾಗಿದ್ದ ಕಬ್ಬು ಕಟಾವು ಇನ್ನು ಮುಂದೆ ಸುಲಲಿತವಾಗಲಿದೆ. ಇದುವರೆಗೆ ಕಬ್ಬು ಕಟಾವು ಮಾಡಲು ಕೂಲಿ ಕಾರ್ಮಿಕರು ಸಿಗದೆ ಪರದಾಡುತ್ತಿದ್ದ ಬೆಳೆಗಾರರು ಇದೀಗ ಬಂದಿರುವ ಕಬ್ಬು ಕಟಾವು ಯಂತ್ರದತ್ತ ಒಲವು ತೋರುತ್ತಿದ್ದಾರೆ. 

ಈ ಯಂತ್ರ ರಾಜ್ಯಕ್ಕೆ ಪರಿಚಯವಾಗಿದ್ದು 2016ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಇದರ ಪ್ರಥಮ ಪ್ರಯೋಗವಾಗಿತ್ತು. ಇದನ್ನು ಹೊರತುಪಡಿಸಿ ಈ ಭಾಗಕ್ಕೆ ಇದು ಪ್ರಥಮವಾಗಿ ಬಂದಿದೆ. ಸಾಮಾನ್ಯವಾಗಿ ಕಬ್ಬನ್ನು ಆಳುಗಳ ಮೂಲಕ ಹರಿತವಾದ ಮಚ್ಚುಗಳಿಂದ ಕಟಾವು ಮಾಡಲಾಗುತ್ತದೆ. ಇದರಲ್ಲಿ ಸೋಗೆಯನ್ನು ಬಿಡಿಸಿ ಕಬ್ಬನ್ನು ಪಿಂಡಿ ಕಟ್ಟಿ, ಗದ್ದೆ ದೂರವಿದ್ದರೆ ಎತ್ತಿನಗಾಡಿಗಳ ಮೂಲಕ ಟ್ರ್ಯಾಕ್ಟರ್ ಅಥವಾ ಲಾರಿಗಳಿಗೆ ತುಂಬಿ ಸಕ್ಕರೆ ಕಾರ್ಖಾನೆಗೆ ಸಾಗಿಸುವುದು ವಾಡಿಕೆಯಾಗಿತ್ತು. ಯಂತ್ರದ ಮೂಲಕ ಕಬ್ಬನ್ನು ಕಟಾವು ಮಾಡುವುದು ಈಗ ಈ ಭಾಗದಲ್ಲಿ ಪರಿಚಯ ಮಾಡಲಾಗುತ್ತಿದ್ದು ಜನಪ್ರಿಯವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. 

ಇದರಲ್ಲಿ ಕಟಾವು ಮಾಡುವ ಯಂತ್ರ ಕಬ್ಬನ್ನು 8 ಇಂಚುಗಳಷ್ಟು ತುಂಡಾಗಿ ಕತ್ತರಿಸಿಕೊಳ್ಳುತ್ತದೆ. ಇದನ್ನು ತನ್ನೊಡಲಿನಲ್ಲೇ ಸಂಗ್ರಹಿಸುತ್ತದೆ. ಇದರ ಜೊತೆಯಲ್ಲೇ ಎನ್‍ಫೀಡರ್ ಎಂಬ ಟ್ರ್ಯಾಕ್ಟರ್ ಮಾದರಿಯ ವಾಹನಗಳು ಇದನ್ನು ಸಂಗ್ರಹಿಸಿಕೊಳ್ಳುತ್ತವೆ. ನಂತರ ಇದನ್ನು ತನ್ನ ಹೈಡ್ರಾಲಿಕ್ ಟ್ರಾಲಿಗಳ ಮೂಲಕ 10 ಟನ್ ತುಂಬುವ ಟ್ರ್ಯಾಕ್ಟರ್‍ಗೆ ತುಂಬಲಾಗುತ್ತದೆ. ನಂತರ ಇದನ್ನು ನೇರವಾಗಿ ಸಕ್ಕರೆ ಕಾರ್ಖಾನೆಗೆ ರವಾನಿಸಲಾಗುತ್ತದೆ.

 ಈ ಯಂತ್ರವು ಕಬ್ಬಿನ ಗದ್ದೆಗೆ ಹೋಗಲು ಗದ್ದೆ ಒಣಗಿರಬೇಕು. ತೇವಾಂಶ ಕಡಿಮೆ ಇರಬೇಕು. ಪ್ರತಿ ಗಂಟೆಗೆ ಇದು 20 ಟನ್ ಕಬ್ಬು ಕತ್ತರಿಸುವ ಸಾಮಥ್ರ್ಯ ಹೊಂದಿದೆ. ಇದಕ್ಕಾಗಿ ಪ್ರತಿ ಟನ್ ಕಬ್ಬಿಗೆ 430 ರೂ. ದರವನ್ನು ನಿಗಧಿಗೊಳಿಸಲಾಗಿದೆ. ಇದರೊಂದಿಗೆ ಸಾರಿಗೆ ವೆಚ್ಚವಾಗಿ 100 ರೂ. ದರ ನಿಗದಿ ಮಾಡಲಾಗಿದೆ. ಒಟ್ಟು ಪ್ರತಿಟನ್‍ಗೆ 530 ರೂ. ಕಟಾವು ಸಾರಿಗೆ ಸೇರಿ ಖರ್ಚಾಗುತ್ತದೆ. ಇದೇ ಕಬ್ಬನ್ನು ಆಳುಗಳ ಮೂಲಕ ಕತ್ತರಿಸಿದ್ದಲ್ಲಿ ಪ್ರತಿಟನ್‍ಗೆ 1000 ರೂ. ಹಣವನ್ನು ವ್ಯಯಿಸಬೇಕು.  ಇದರಲ್ಲಿ ರೈತರಿಗೆ 430 ರೂ. ಪ್ರತಿ ಟನ್‍ಗೆ ಹಣ ಉಳಿತಾಯವಾಗಲಿದೆ. ಜೊತೆಗೆ ಕೆಲಸವು ಬೇಗ ಪೂರ್ಣಗೊಳ್ಳುತ್ತದೆ. ಅಲ್ಲದೆ ಕಬ್ಬಿನ ಹಸಿ ಸೋಗನ್ನು ಪುಡಿ ಮಾಡಿ ಭೂಮಿಯಲ್ಲೇ ಯಂತ್ರ ಇದನ್ನು ಚೆಲ್ಲುವುದರಿಂದ ಇದೂ ಕೂಡ ಸಾವಯವ ಗೊಬ್ಬರವಾಗಲಿದ್ದು ರೈತರಿಗೆ ಸಹಕಾರಿಯಾಗಲಿದೆ.

See also  bghjj

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು