News Kannada
Monday, November 28 2022

ಮೈಸೂರು

ದಸರಾಗೆ ಪ್ರವಾಸಿಗರಿಗೆ ಕೆಎಸ್ ಆರ್ ಟಿಸಿಯಿಂದ ವಿಶೇಷ ಸೌಲಭ್ಯ - 1 min read

Photo Credit :

ದಸರಾಗೆ ಪ್ರವಾಸಿಗರಿಗೆ ಕೆಎಸ್ ಆರ್ ಟಿಸಿಯಿಂದ ವಿಶೇಷ ಸೌಲಭ್ಯ

ಮೈಸೂರು: ದಸರಾ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗಾಗಿಯೇ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯುವ ವಿಶೇಷ ಪ್ಯಾಕೇಜ್‍ಗಳನ್ನು ಘೋಷಣೆ ಮಾಡಿದ್ದು ದಸರಾ ಸಂದರ್ಭದಲ್ಲಿ ಅಂದರೆ ಸೆ. 29ರಿಂದ ಅ.13ರವರೆಗೆ ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.

 ದಸರಾ ನೋಡಲು ಬರುವ ಪ್ರವಾಸಿಗರು ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದು ಈ ವೇಳೆ ಮೈಸೂರು ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನುಕೂಲವಾಗಲಿದೆ. ಪ್ರವಾಸಿಗರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಐರಾವತದಿಂದ ಸಾಮಾನ್ಯ ವೇಗದೂತ ಬಸ್ ತನಕ ಪ್ಯಾಕೇಜ್‍ನ್ನು ಮಾಡಲಾಗಿದ್ದು ಅವರವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ.

 ಸಾಮಾನ್ಯವಾಗಿ ಮೈಸೂರು ದಸರಾಕ್ಕೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ, ದೇಶ, ವಿದೇಶಗಳಿಂದ ಪ್ರವಾಸಿಗರು ಬರಲಿದ್ದು, ಇವರೆಲ್ಲರ ದೃಷ್ಠಿಯನ್ನಿಟ್ಟುಕೊಂಡು ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದಕ್ಕಾಗಿ ಸಂಸ್ಥೆ ಐರಾವತ ಹಾಗೂ ಐರಾವತ ಕ್ಲಬ್ ಕ್ಲಾಸ್,  ರಾಜಹಂಸ, ವೇಗದೂತ ಬಸ್‍ಗಳನ್ನು ಬಳಸಿಕೊಳ್ಳುತ್ತಿದೆ.

 ಐರಾವತ ಕ್ಲಬ್ ಕ್ಲಾಸ್, ಮಡಿಕೇರಿ, ಊಟಿ, ಬಂಡೀಪುರ, ಶಿಂಷಾ ಪ್ಯಾಕೇಜ್ ಜತೆಗೆ ಗಿರಿದರ್ಶಿನಿ, ಜಲದರ್ಶಿನಿ ಮತ್ತು ದೇವದರ್ಶಿನಿ ಎಂಬ ವಿಶೇಷ ಪ್ಯಾಕೇಜ್‍ಗಳ ಸೌಲಭ್ಯವನ್ನು ನೀಡಲಾಗುತ್ತಿದೆ. 

ಇನ್ನು ಐರಾವತ ಕ್ಲಬ್ ಕ್ಲಾಸ್ ನ ಪ್ಯಾಕೇಜ್ ನಲ್ಲಿ  ಒಂದು ದಿನದ ವಿಶೇಷ ಪ್ರವಾಸ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು, ಇದರಲ್ಲಿ  ಮೈಸೂರಿನ ಸುತ್ತಮುತ್ತ ಪ್ರವಾಸಿತಾಣಗಳಾದ ಮಡಿಕೇರಿ, ನಿಸರ್ಗಧಾಮ, ಗೋಲ್ಡನ್ ಟೆಂಪಲ್, ತಲಕಾಡು, ಊಟಿ, ಬಂಡೀಪುರ, ಶಿಂಷಾ ಸೇರಿದಂತೆ ಹಲವು ತಾಣಗಳನ್ನು ಪ್ರವಾಸಿಗರಿಗೆ ತೋರಿಸಲಾಗುತ್ತದೆ. ಇದಕ್ಕಾಗಿ ಸಂಸ್ಥೆಯಿಂದ  ನಾಲ್ಕು ಐರಾವತ ಕ್ಲಬ್ ಕ್ಲಾಸ್  ಮಾದರಿಯ ಬಸ್‍ನ್ನು ಸಂಚಾರಕ್ಕೆ ಬಿಡಲಾಗುತ್ತಿದೆ.

 ಮಡಿಕೇರಿ ಪ್ಯಾಕೇಜ್‍ನಲ್ಲಿ ತೆರಳುವವರಿಗೆ ಗೋಲ್ಡನ್ ಟೆಂಪಲ್, ನಿಸರ್ಗಧಾಮ, ಹಾರಂಗಿ, ರಾಜಾಸೀಟ್, ಅಬ್ಬಿ ಜಲಪಾತವನ್ನು ತೋರಿಸಲಾಗುತ್ತದೆ. ಬಸ್ ಬೆಳಿಗ್ಗೆ  6.30ಕ್ಕೆ ಮೈಸೂರಿನ ಕೇಂದ್ರ ಬಸ್ ನಿಲ್ದಾಣದಿಂದ ಹೊರಡಲಿದ್ದು,  ಒಬ್ಬರಿಗೆ 1200ರೂ. ದರ ನಿಗದಿ ಮಾಡಲಾಗಿದೆ. 

ಊಟಿ ಪ್ಯಾಕೇಜ್‍ನಲ್ಲಿ ತೆರಳುವವರಿಗೆ ಊಟಿಯ ಸರಕಾರಿ ಬಟಾನಿಕಲ್ ಉದ್ಯಾನ, ರೋಸ್ ಮತ್ತು ಇಟಾಲಿಯನ್ ಉದ್ಯಾನ, ಬೋಟ್ ಹೌಸ್ ವೀಕ್ಷಣೆ ಮಾಡಬಹುದಾಗಿದೆ. ಬಸ್ ನಿಲ್ದಾಣದಿಂದ ಬೆಳಗ್ಗೆ 6ಕ್ಕೆ ಬಸ್ ಹೊರಡಲಿದೆ. ಒಬ್ಬರಿಗೆ  1600 ರೂ. ದರವನ್ನು ನಿಗದಿಪಡಿಸಲಾಗಿದೆ. 

ಇನ್ನು ಬಂಡೀಪುರ ಪ್ಯಾಕೇಜ್‍ನಲ್ಲಿ ಸೋಮನಾಥಪುರ, ತಲಕಾಡು, ಮುಡುಕುತೊರೆ, ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ರಾಷ್ಟ್ರೀಯ ಅರಣ್ಯ, ನಂಜನಗೂಡಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅವಕಾಶವಿದೆ. ಇದಕ್ಕೆ ಒಬ್ಬರಿಗೆ 1000 ರೂ. ದರವಿದ್ದು, ಬಸ್ ಬೆಳಿಗ್ಗೆ 6.30ಕ್ಕೆ  ಬಸ್ ನಿಲ್ದಾಣದಿಂದ ಹೊರಡಲಿದೆ.

 ಶಿಂಷಾ ಪ್ಯಾಕೇಜ್ ನಲ್ಲಿ ಪ್ರವಾಸಿಗರಿಗೆ ಶಿಂಷಾ (ಗಗನಚುಕ್ಕಿ ಮತ್ತು ಭರಚುಕ್ಕಿ), ನಿಮಿಷಾಂಬ ದೇವಸ್ಥಾನ, ಶ್ರೀರಂಗಪಟ್ಟಣ, ರಂಗನತಿಟ್ಟು ಪಕ್ಷಿಧಾಮ, ಬಲಮುರಿ, ಕೆಆರ್‍ಎಸ್.ನ್ನು ತೋರಿಸಲಾಗುತ್ತದೆ. ಬೆಳಿಗ್ಗೆ 6.30ಕ್ಕೆ ಬಸ್ ಮೈಸೂರಿನ ಬಸ್ ನಿಲ್ದಾಣದಿಂದ ಹೊರಡಲಿದ್ದು ಒಬ್ಬರಿಗೆ ದರ 800 ರೂ. ನಿಗದಿಪಡಿಸಲಾಗಿದೆ.

 ಇದಲ್ಲದೆ, ಸಾಮಾನ್ಯ ಬಸ್‍ನ ಪ್ಯಾಕೇಜ್ ಇದ್ದು ಮೂರು ರೀತಿಯಲ್ಲಿ ವಿಂಗಡಿಸಲಾಗಿದೆ. ಇದರಲ್ಲಿ ಎಲ್ಲ ಬಸ್‍ಗಳು ಬೆಳಿಗ್ಗೆ 6.30ರಿಂದ ಕೇಂದ್ರ ಬಸ್ ನಿಲ್ದಾಣದಿಂದ ಹೊರಡಲಿದ್ದು,  ಗಿರಿದರ್ಶಿನಿ ಯಲ್ಲಿ   ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ, ಬಂಡೀಪುರ ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಬಹುದಾಗಿದೆ. ಇದರಲ್ಲಿ ವಯಸ್ಕರಿಗೆ 350 ರೂ., ಮಕ್ಕಳಿಗೆ 175 ರೂ. ಇನ್ನು ಜಲದರ್ಶಿನಿಯಲ್ಲಿ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ ನಿಸರ್ಗ ಧಾಮ, ಅಬ್ಬಿ ಜಲಪಾತ, ರಾಜಾಸೀಟ್, ಹಾರಂಗಿ ಜಲಾಶಯ, ಕೆಆರ್‍ಎಸ್ ಜಲಾಶಯವನ್ನು ನೋಡಬಹುದಾಗಿದೆ. ವಯಸ್ಕರಿಗೆ 375, ಮಕ್ಕಳಿಗೆ 190 ರೂ. ನಿಗದಿ ಮಾಡಿದ್ದಾರೆ. ದೇವದರ್ಶಿನಿಯಲ್ಲಿ  ನಂಜನಗೂಡು, ತಲಕಾಡು, ಬ್ಲಫ್, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆಆರ್‍ಎಸ್ ತೆರಳಬಹುದಾಗಿದೆ. ವಯಸ್ಕರಿಗೆ 275, ಮಕ್ಕಳಿಗೆ 140 ರೂ. ನಿಗದಿಪಡಿಸಲಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗೆ  ಮೊಬೈಲ್ ಸಂಖ್ಯೆ 7760990822 ಸಂಪರ್ಕಿಸಬಹುದಾಗಿದೆ.

See also  ಸಿಎಂ ಸಿದ್ದರಾಮಯ್ಯ ರಾವಣ ರಾಜ್ಯ ನಡೆಸುತ್ತಿದ್ದಾರೆ: ಸಚಿವ ಅನಂತ್ ಕುಮಾರ್

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು