News Kannada
Tuesday, November 29 2022

ಮೈಸೂರು

ಮೈಸೂರಿನಲ್ಲಿ ದಸರಾ ಕಾರ್ಯಕ್ರಮಗಳ ಸಿದ್ಧತಾ ಪರಿಶೀಲನೆ - 1 min read

Photo Credit :

ಮೈಸೂರಿನಲ್ಲಿ ದಸರಾ ಕಾರ್ಯಕ್ರಮಗಳ ಸಿದ್ಧತಾ ಪರಿಶೀಲನೆ

ಮೈಸೂರು: ಮೈಸೂರು ದಸರಾವನ್ನು ಈ ಬಾರಿ ಯಶಸ್ವಿಗೊಳಿಸುವ ಸಲುವಾಗಿ ಹಲವು ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಇದನ್ನು ವೀಕ್ಷಿಸಿ ಸಲಹೆಗಳನ್ನು ನೀಡುತ್ತಿದ್ದಾರೆ.

ಮೊದಲಿಗೆ ಚಾಮುಂಡಿ ಬೆಟ್ಟದ ನಂದಿ ವಿಗ್ರಹವಿರುವ ಸ್ಥಳಕ್ಕೆ ತೆರಳಿದ ಅವರು, ಸುತ್ತಮುತ್ತ ಪರಿಶೀಲಿಸಿ ಮಾತನಾಡಿದ ಅವರು, ನಂದಿ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದ್ದರಿಂದ ನಂದಿಯ ಸುತ್ತ ಮುತ್ತ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ದಸರಾ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಸ್ವಚ್ಛತೆಗೆ ಮಹತ್ವ ನೀಡುವುದು. ಪಾದದ ಮೆಟ್ಟಿಲು ಹತ್ತುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಚಾಮುಂಡಿ ಬೆಟ್ಟದ ನಿಧಿಯಿಂದ ಸುಮಾರು ರೂ. 7.50ಲಕ್ಷ ರೂ. ವೆಚ್ಚದಲ್ಲಿ ನಂದಿ ಮತ್ತು ವೀವ್ ಪಾಯಿಂಟ್ ಬಳಿ ನಿರ್ಮಿಸಿರುವ ಹೈಮಾಸ್ಟ್ ದೀಪಕ್ಕೆ ಚಾಲನೆಯನ್ನು ನೀಡಿದರು. ಬೆಟ್ಟದ ಪಾದದ ತಪ್ಪಲಿನಲ್ಲಿ ನೂತನವಾಗಿ ಸುಮಾರು 6.58 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೀರಿನ ಕೇಂದ್ರವನ್ನು ವೀಕ್ಷಣೆ ಮಾಡಿ ತುರ್ತಾಗಿ ಪೂರ್ಣಗೊಳಿಸುವಂತೆಯೂ ಹಾಗೂ ನಗರದ ಹೊರ ವರ್ತುಲ ರಸ್ತೆಯ ಸುತ್ತ ದಿನಕ್ಕೆ 4 ಬಸ್‍ಗಳನ್ನು ನಿಯೋಜಿಸಿದರೆ ದಸರಾ ಸಂದರ್ಭದಲ್ಲಿ ಪ್ರವಾಸಿಗರು ಓಡಾಡಲು ಅನುಕೂಲವಾಗುತ್ತದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.

ಆ ನಂತರ ಸ್ಕೌಟ್ಸ್ ಅಂಡ್ ಗ್ಲೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದ ಸ್ಟಾಲ್ ಹಾಗೂ ಕಾರ್ಯಕ್ರಮ ವೇದಿಕೆ ಸೇರಿದಂತೆ ಹಲವು ಸ್ಥಳಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಯುವ ದಸರಾ ನಡೆಯುವ ಮಹಾರಾಜ ಮೈದಾನವನ್ನು ಪರಿಶೀಲಿಸಿದರು. ಇದಾದ ಬಳಿಕ ಜೆ.ಕೆ.ಗ್ರೌಂಡ್‍ಗೆ ಭೇಟಿ ನೀಡಿ ಮಹಿಳಾ ದಸರಾ, ರೈತ ದಸರಾ ವೇದಿಕೆ ಮತ್ತು ಮಳಿಗೆಗಳನ್ನು ಸಿದ್ಧತೆ ಮಾಡಲು ತಿಳಿಸಿದರು. ಅಲ್ಲಿರುವ ಶತಮಾನೋತ್ಸವ ಭವನಕ್ಕೆ ಸುಣ್ಣ ಬಣ್ಣ ಬಳಿಯುವಂತೆ ಮತ್ತು ಕಾರ್ಯಕ್ರಮ ನಡೆಯುವ ವೇದಿಕೆಗಳು ಆವರಣದಲ್ಲಿಯೇ ನಡೆಸುವಂತೆ ಸೂಚಿಸಿದರು. ಬಳಿಕ ದಸರಾ ಫಲಪುಷ್ಪ ಪ್ರದರ್ಶನ ನಡೆಯುವ ಕುಪ್ಪಣ್ಣ ಪಾರ್ಕ್ ಮತ್ತು ಗಾಜಿನ ಮನೆಯನ್ನು ವೀಕ್ಷಿಸಿದರು.

See also  ಮೈಸೂರು ಜಿಲ್ಲೆಗೆ ಮಂತ್ರಿ ಸ್ಥಾನ ಕೊಡದ್ದಕ್ಕೆ ಮಾಜಿ ಸಚಿವ ವಿಶ್ವನಾಥ್‌ ಬೇಸರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು