News Kannada
Friday, December 09 2022

ಮೈಸೂರು

ಮನೆಮನೆಗಳಲ್ಲೂ ಮೇಳೈಸುತ್ತಿದೆ ಮೈಸೂರು ದಸರಾ ಸಡಗರ..

Photo Credit :

ಮನೆಮನೆಗಳಲ್ಲೂ ಮೇಳೈಸುತ್ತಿದೆ ಮೈಸೂರು ದಸರಾ ಸಡಗರ..

ಮೈಸೂರು ದಸರಾ ಅಂದರೆ ಸಾಂಸ್ಕೃತಿಕ ಸುಗ್ಗಿ ಅಷ್ಟೇ ಅಲ್ಲ ಮನೆ,ಮನೆಗಳಲ್ಲೂ ಸಡಗರ ಸಂಭ್ರಮದ ಅನಾವರಣ.. ಹಳ್ಳಿಯಲ್ಲಿದ್ದವರು ನಗರದತ್ತ ಹೆಜ್ಜೆಯಿಡುವ..

ಸಂಬಂಧಿಕರ ಮನೆಯಲ್ಲಿ ಬೀಡುಬಿಟ್ಟು ದಸರಾದಲ್ಲಿ ಮಿಂದೇಳುವ ಖುಷಿ.. ನಗರದಲ್ಲಿದ್ದವರಿಗೆ ಹಳ್ಳಿಗಳಿಂದ ದಸರಾ ವೀಕ್ಷಿಸಲು ಬರುವ ಸಂಬಂಧಿಕರಿಗೆ ಬೇಕಾದ ಅಗತ್ಯಗಳನ್ನು ಪೂರೈಸುವ ಚಡಪಡಿಕೆ.. ವ್ಯಾಪಾರಸ್ಥರಿಗೆ ದಸರಾದಲ್ಲಿ ಒಂದಷ್ಟು ವ್ಯಾಪಾರ ಮಾಡಿ ಲಾಭಗಿಟ್ಟಿಸುವ ಬಯಕೆ.. 

ನಗರಕ್ಕೊಂದು ಸುತ್ತು ಹೊಡೆದರೆ ದಸರಾ ಕಳೆ ಎಲ್ಲೆಲ್ಲೂ ಪಸರಿಸಿದ ಅನುಭವವಾಗುತ್ತದೆ. ದೂರದ ಊರುಗಳಿಂದ ಬಂದ ಪ್ರವಾಸಿಗರು ಎಲ್ಲೆಲ್ಲೂ ಓಡಾಡುತ್ತಿದ್ದರೆ, ಮನೆಗಳಲ್ಲಿ ಹಬ್ಬದ ಸಡಗರವೂ ಕಾಣಿಸುತ್ತಿದೆ. 

ಸಿರಿವಂತರು ಬೊಂಬೆ ಪ್ರದರ್ಶನ, ತೋಟಗಳ ಹಬ್ಬ ಮಾಡುತ್ತಾರೆ. ಕೇರಿಕೇರಿಯ ಬಡಜನರು ಪೂರ್ವಿಕರನ್ನು ಸ್ಮರಿಸಿ ತಮ್ಮ ಶಕ್ತ್ಯಾನುಸಾರ ಹಬ್ಬದ ಆಚರಣೆ ಮಾಡುತ್ತಾರೆ. ಕೆಲವರು ಇದೇ ವೇಳೆ ಬಾಳೆ ಎಲೆಯ ಮೇಲೆ  ತಾಮ್ರ, ಹಿತ್ತಾಳೆ, ಅಥವಾ ಮರದಿಂದ ಮಾಡಿದ ದೇವರುಗಳ ಹಾಗೂ ಫೋಟೋ  ಇಟ್ಟು ಪೂಜಿಸಿ ಕೃತಾರ್ಥರಾಗುತ್ತಾರೆ.

 ಒಕ್ಕಲು ಮನೆತನದ ಜನ, ವ್ಯಾಪಾರಸ್ಥರು, ಉದ್ದಿಮೆದಾರರು ಆಯುಧ ಪೂಜೆಯೊಂದಿಗೆ ಇಡೀ ದಸರಾದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸುತ್ತಾರೆ.

 ಇನ್ನು ನವರಾತ್ರಿಯ ಒಂಭತ್ತು ದಿನವೂ ನಗರದ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆಯುತ್ತವೆ.  ಜೊತೆಗೆ ಅರಮನೆ ಸೇರಿದಂತೆ ವಿವಿಧೆಡೆ ಹಲವು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.  ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಪಾದ್ರಿ ಸೇರಿದಂತೆ ಎಲ್ಲಾ ವರ್ಗಗಳ  ಸಿರಿಜನ, ಬಡಜನ ದಸರೆಯಲ್ಲಿ ಸಂಭ್ರಮಿಸುತ್ತಾರೆ.

 ಚಿತ್ರಮಂದಿರಗಳು, ಹೋಟೆಲ್‍ಗಳು, ರೆಸಾರ್ಟ್‍ಗಳು, ಹೋಂಸ್ಟೇಗಳು ಭರ್ತಿಯಾಗುತ್ತವೆ. ಹಳ್ಳಿಗಳಿಂದ, ದೂರದ ಊರುಗಳಿಂದ ಬರುವ ಜನ ನಗರದಲ್ಲಿರುವ ಬಂಧುಗಳ ಮನೆಯಲ್ಲಿ ಠಿಕಾಣಿ ಹೂಡುತ್ತಾರೆ. ಸಂಜೆಯಾಗುತ್ತಿದ್ದಂತೆಯೇ ಮನೆ ಮಂದಿಯೆಲ್ಲಾ ಒಟ್ಟಾಗಿ ಆಹಾರ ಮೇಳ, ಫಲಪುಷ್ಪಪ್ರದರ್ಶನ, ವಸ್ತುಪ್ರದರ್ಶನ, ಅರಮನೆ, ಕಲಾಮಂದಿರ, ಹೀಗೆ ನಗರದಲ್ಲೆಲ್ಲಾ ಸುತ್ತಾಡುತ್ತಾ ಹಬ್ಬದ ಸವಿಯುಣ್ಣುವ ದೃಶ್ಯ ಸಾಮಾನ್ಯವಾಗಿರುತ್ತದೆ.

 ಮನೆಗಳು, ಕಟ್ಟಡಗಳು, ವೃತ್ತಗಳು ಸುಣ್ಣ ಬಣ್ಣಗಳಿಂದ ಮಿರಮಿರನೆ ಮಿಂಚುತ್ತವೆ. ರಸ್ತೆಗಳುದ್ದಕ್ಕೂ ವಿದ್ಯುದ್ದೀಪ ಜಗಮಗಿಸುತ್ತಿದ್ದರೆ ಅದರ ಮುಂದೆ ನಿಂತು ಸೆಲ್ಪಿ ತೆಗೆದುಕೊಳ್ಳುವ, ವಿವಿಧೆಡೆ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ, ಆಹಾರಮೇಳಕ್ಕೆ ತೆರಳಿ ಹೊಟ್ಟೆ ತುಂಬ ತಿಂದು, ಯುವದಸರಾದಲ್ಲಿ ಕುಣಿದು ಕುಪ್ಪಳಿಸುತ್ತಾರೆ.

 ದಸರಾ ದಿನದಂದು ಜಂಬೂಸವಾರಿ ನೋಡಲು ಜನಸಾಗರವೇ ಹರಿದು ಬರುತ್ತದೆ.  ರಾಜಕಾರಣಿಗಳ, ಅಧಿಕಾರಿಗಳ ಕುಟುಂಬದ ಸದಸ್ಯರು ದಸರಾ ಪಾಸ್ ಹಿಡಿದು ನೆರಳಲ್ಲಿ ಕುಳಿತರೆ, ಹಣವಿದ್ದರೂ ಸಾವಿರಾರು ರೂಪಾಯಿ ನೀಡಿ ಪಾಸ್ ಖರೀದಿಸಿ ಜಂಬೂ ಸವಾರಿ ನೋಡುತ್ತಾರೆ. ಅದ್ಯಾವುದೂ ಸಾಧ್ಯವಾಗದವರು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆಯ ಫುಟ್‍ಪಾತ್, ತಗ್ಗುದಿಣ್ಣೆ, ಕಟ್ಟಡ, ಮರಗಳನ್ನೇರಿ ಕುಳಿತು ಆ ಸುಂದರ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುತ್ತಾರೆ. 

ಆ ನಂತರ ದಸರಾ ಕಳೆದರೂ ಸಂಭ್ರಮ ಮಾತ್ರ ಮೈಸೂರಲ್ಲಿ ಕೆಲವು ಸಮಯಗಳ ಕಾಲ ಹಾಗೆಯೇ ಉಳಿಯುತ್ತದೆ. ಕಾರಣ ವಸ್ತುಪ್ರದರ್ಶನ ವರ್ಷದ ಕೊನೆವರೆಗೂ ನಡೆಯುವುದರಿಂದ ಜನ ಸಂಜೆಯ ಸಮಯ ವಸ್ತು ಪ್ರದರ್ಶನಕ್ಕೆ ತೆರಳಿ ಬೇಕಾದನು ಖರೀದಿಸುತ್ತಾರೆ. ವಿವಿಧ ಆಟಗಳನ್ನು ಆಡುತ್ತಾರೆ. ತಮಗಿಷ್ಟವಾದ ಖಾದ್ಯಗಳನ್ನು ಸವಿಯುತ್ತಾರೆ. ಬಹುಶಹ ಮೈಸೂರು ದಸರಾದ ಸಂಭ್ರಮವನ್ನು ಅನುಭವಿಸಿದವರು ಆ ಕ್ಷಣಗಳನ್ನು ಸದ್ಯಕ್ಕೆ ಮರೆಯಲಾರರು ಎಂದರೆ ತಪ್ಪಾಗಲಾರದು.

See also  ಬಸ್‌ ಸಂಚಾರ ಸ್ಥಗಿತದ ನಡುವೆಯೂ ಒಂದೊಂದು ಬಸ್‌ ಸಂಚಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು