News Kannada
Tuesday, December 06 2022

ಮೈಸೂರು

ಮೈಸೂರು ದಸರಾದಲ್ಲಿ ಮನಸೆಳೆಯುತ್ತಿರುವ ಮತ್ಸ್ಯ ಲೋಕ

Photo Credit :

ಮೈಸೂರು ದಸರಾದಲ್ಲಿ ಮನಸೆಳೆಯುತ್ತಿರುವ ಮತ್ಸ್ಯ ಲೋಕ

ಮೈಸೂರು: ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ನಗರದ ಜೆ.ಕೆ. ಮೈದಾನದಲ್ಲಿ ಅನಾವರಣಗೊಂಡಿರುವ ಮತ್ಸ್ಯ ಲೋಕ ಜಲಾಂತರಾಳದ ಲೋಕಕ್ಕೆ ಕೊಂಡೊಯ್ದು ನೋಡುಗರನ್ನು ವಿಸ್ಮಯಗೊಳಿಸುತ್ತಿದೆ.

ಮತ್ಸ್ಯ ಪ್ರೇಮಿಗಳು ಇದನ್ನೊಮ್ಮೆ ನೋಡಿದ್ದೇ ಆದರೆ ಖುಷಿಪಡುವುದರಲ್ಲಿ ಎರಡು ಮಾತಿಲ್ಲ. ಈ ಬಾರಿ ಜಿಲ್ಲಾಡಳಿತ, ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮತ್ಸ್ಯಮೇಳ ಅ.6ರವರೆಗೆ ನಡೆಯುತ್ತಿದ್ದು, ಇಲ್ಲಿರುವ ವಿಶಿಷ್ಟ ಮತ್ತು ವಿಭಿನ್ನ ಬಗೆಯ ಬಣ್ಣಬಣ್ಣದ ಮೀನುಗಳು ಎಲ್ಲರನ್ನು ತನ್ನತ್ತ ಸೆಳೆಯುತ್ತಿವೆ.

ದೇಶ, ವಿದೇಶಗಳ ಮೀನುಗಳು, ಅಲಂಕಾರಿಕ ಮೀನುಗಳನ್ನು ವಿವಿಧ ಅಕ್ವೇರಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಮೀನುಗಾರಿಕೆಗೆ ಬಳಸುವ ವಸ್ತುಗಳ ಬಲೆ, ತೆಪ್ಪ ಸೇರಿದಂತೆ ಹಲವು ವಸ್ತುಗಳು ಪ್ರದರ್ಶನದಲ್ಲಿ ಕಾಣಸಿಗುತ್ತಿದೆ. ಈ ಬಾರಿಯ ಮತ್ಸ್ಯ ಮೇಳಕ್ಕೆ ಹಿಂದಿನ ಮತ್ಸ್ಯಮೇಳದಲ್ಲಿ ಸಿಕ್ಕ ಉತ್ತಮ ಪ್ರತಿಕ್ರಿಯೆ ಕಾರಣ ಎಂದರೆ ತಪ್ಪಾಗಲಾರದು.

ಮತ್ಸ್ಯ ಪ್ರದರ್ಶನದಲ್ಲಿ 60 ಅಡಿ ಉದ್ದದ ಗುಹೆ ಮಾದರಿಯ ಒಳಭಾಗದಲ್ಲಿ ಬಗೆ ಬಗೆಯ ಮೀನುಗಳನ್ನು ಪ್ರದರ್ಶಿಸಲಾಗಿದ್ದು, ಪ್ರವೇಶದ್ವಾರದಲ್ಲೇ ಬಗೆ ಬಗೆಯ ಬಣ್ಣ ಬಣ್ಣದ ಮೀನುಗಳು ವೀಕ್ಷಕರನ್ನು ಸ್ವಾಗತಿಸುತ್ತವೆ. ಇಲ್ಲಿ ದೇಶ ವಿದೇಶದ 65ಕ್ಕೂ ಹೆಚ್ಚು ತಳಿಯ ಮೀನುಗಳನ್ನು ಪ್ರದರ್ಶಿಸಲಾಗಿದ್ದು, ಅಪರೂಪದ ಅಕ್ಸೊಲೊಟ್ಸ್ ಮೀನು ಸೇರಿದಂತೆ, ಅತ್ಯಂತ ಸುಂದರವಾದ ಸಮುದ್ರ ಮೀನುಗಳಾದ ಸಾಲ್ಟ್ ವಾಟರ್ ಪಫ್ಫರ್ ಮೀನು, ಲಿಯೊನ್, ಕೌ ಫಿಶ್, ಕೋರಲ್ ರೀಫ್, ಸೀ ಹನಿಮೂನ್, ಡಸ್ಕಿ ಬ್ಯಾಟ್‍ಫಿಶ್, ಬ್ಲ್ಯೂ ಡ್ಯಾಮ್‍ಸೆಲ್, ಟೊಮ್ಯಾಟೊ ಕ್ಲೌನ್‍ಫಿಶ್, ಬ್ಲ್ಯೂ ಟ್ರಿಗರ್, ಲಯನ್ ಫಿಶ್, ಸಾಲ್‍ಫಿನ್ ಟಾಂಗ್, ಟೈಗರ್ ಬಾರ್ಬ್, ಬ್ಲ್ಯಾಕ್ ಫ್ಯಾಂಟಮ್ ಟೆಟ್ರಾ, ಲೆಮನ್ ಟೆಟ್ರಾ, ರೆಡ್ ಪ್ಯಾರೋಟ್ ಫಿಶ್ ಹೀಗೆ ನೂರಾರು ಬಗೆಯ ಮೀನುಗಳು ಗಮನಸೆಳೆಯುತ್ತಿವೆ.

ಗ್ರಾಂಗಳಿಂದ ಹಿಡಿದು ಸುಮಾರು ಎರಡು ಕೆ.ಜಿ.ವರೆಗಿನ ತೂಕದ ಮೀನುಗಳನ್ನು ಪ್ರದರ್ಶನದಲ್ಲಿಡಲಾಗಿದೆ. ಇವುಗಳೆಲ್ಲವೂ ಅಕ್ವೇರಿಯಂಗಳಲ್ಲಿ ಅಡ್ಡಾಡುತ್ತಿದ್ದರೆ ಅದನ್ನು ನೋಡಿ ಜನ ಖುಷಿ ಪಡುತ್ತಿದ್ದಾರೆ. 50 ಸಿಹಿ ನೀರಿನ, 10 ಉಪ್ಪು ನೀರಿನ ಮೀನುಗಳ ಅಕ್ವೇರಿಯಂನಲ್ಲಿವೆ. ಇನ್ನು 5 ಪ್ಲಾಂಟೆಡ್ ಅಕ್ವೇರಿಯಂ ಸೇರಿದಂತೆ 65ಕ್ಕೂ ಹೆಚ್ಚು ಅಕ್ವೇರಿಯಂಗಳಲ್ಲಿ ಮೀನುಗಳನ್ನಿಡಲಾಗಿದೆ.

ಸಮುದ್ರದ ಒಳಭಾಗದಲ್ಲಿ ಸುಂದರವಾಗಿ ಕಾಣುವ ವಿವಿಧ ಸಸ್ಯಗಳನ್ನಿಟ್ಟು ಅಕ್ವೇರಿಯಂಗಳಲ್ಲಿಡಲಾಗಿದ್ದು ಅರ್ಧ ಭಾಗ ನೀರಿನ ಒಳಭಾಗದಲ್ಲಿ ಹಾಗೂ ಅರ್ಧ ಸಸ್ಯ ನೀರಿನಿಂದ ಹೊರಗೆ ಇರುವ ಅಕ್ವೇರಿಯಂಗಳು ಇಲ್ಲಿದ್ದು, ಎಲ್ಲವೂ ವಿಭಿನ್ನವಾಗಿ ಮನಸೆಳೆಯುತ್ತಿವೆ.

See also  ಚಾಮುಂಡೇಶ್ವರಿಯಲ್ಲಿ ಸಿಎಂ ಭರ್ಜರಿ ರೋಡ್ ಶೋ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು