News Kannada
Friday, December 02 2022

ಮೈಸೂರು

ಮೈಸೂರು ಅರಮನೆಯ ಆಯುಧಪೂಜೆ ಹೇಗಿರುತ್ತೆ ಗೊತ್ತಾ?

Photo Credit :

ಮೈಸೂರು ಅರಮನೆಯ ಆಯುಧಪೂಜೆ ಹೇಗಿರುತ್ತೆ ಗೊತ್ತಾ?

ಮೈಸೂರು: ಆಯುಧ ಪೂಜೆಯನ್ನು ಎಲ್ಲರೂ ಮಾಡುತ್ತಾರೆ. ಮನೆ, ಕಚೇರಿ, ಕಾರ್ಖಾನೆ ಹೀಗೆ ಎಲ್ಲೆಲ್ಲೂ ಆಯುಧ ಪೂಜೆಗಳು ನಡೆಯುತ್ತಿವೆ. ಕೆಲವರು ವಾಹನಗಳಿಗೆ ಮನೆಯಲ್ಲಿ ಮಾಡಿದರೆ ಮತ್ತೆ ಕೆಲವರು ದೇವಾಲಯಗಳಲ್ಲಿ ಮಾಡಿಸುತ್ತಾರೆ. ಆದರೆ ಇದೆಲ್ಲದರ ನಡುವೆ ಮೈಸೂರು ರಾಜ ಮನೆತನದವರು ಮೈಸೂರು ಅರಮನೆಯಲ್ಲಿ ನಡೆಸುತ್ತಿದ್ದ ಆಯುಧ ಪೂಜಾ ಕಾರ್ಯಕ್ರಮಗಳು ಮಾತ್ರ ವಿಭಿನ್ನ ಮತ್ತು ವೈಶಿಷ್ಟ್ಯಪೂರ್ಣವಾಗಿರುತ್ತವೆ.

ಆಯುಧ ಪೂಜಾ ದಿನದಂದು ಎಲ್ಲೆಡೆಯೂ ಜನ ಬೆಳಿಗ್ಗೆಯಿಂದಲೇ ವಾಹನಗಳನ್ನು ತೊಳೆದು ಪೂಜಾ ವಿಧಿವಿಧಾನಗಳನ್ನು ತಮ್ಮ ಮನೆಗಳಲ್ಲಿಯೇ ಮಾಡುತ್ತಾರೆ. ಮತ್ತೆ ಕೆಲವರು ದೇವಾಲಯಗಳಲ್ಲಿ ಪೂಜೆಯನ್ನು ಮಾಡಿಸುತ್ತಾರೆ. ಕಚೇರಿಗಳಲ್ಲಿ ಪೂಜೆ ಮಾಡಿ ಎಲ್ಲವೂ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುತ್ತಾರೆ. ರಾಜರ ಕಾಲದಲ್ಲಿ ಆಯುಧವೇ ಮುಖ್ಯವಾಗಿದ್ದರಿಂದ ಆಯುಧಗಳಿಗೆ ಪೂಜೆಯನ್ನು ಮಾಡಲಾಗುತ್ತಿತ್ತು. ಅದನ್ನು ಮೈಸೂರು ರಾಜವಂಶಸ್ಥರು ಮುಂದುವರೆಸಿಕೊಂಡು ಬಂದಿದ್ದಾರೆ.

ಮೈಸೂರಿನ ಐತಿಹಾಸಿಕ ಅರಮನೆಯಲ್ಲಿ ರಾಜವಂಶಸ್ಥರು ನಡೆಸಿಕೊಂಡು ಬಂಧ ಪೂಜಾ ವಿಧಿವಿಧಾನಗಳನ್ನು ಇದೀಗ ಯುವರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಂಬಾ ವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಸಂಪ್ರದಾಯದಂತೆ ಆಯುಧಗಳಿಗೆ ಸೇರಿದಂತೆ ತಮ್ಮಲ್ಲಿರುವ ವಾಹನ ಪಟ್ಟದ ಆನೆ, ಕುದುರೆ ಹಸುಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ.

ಇನ್ನೂ ಪೂಜಾ ಕೈಂಕರ್ಯ ಹೇಗಿರುತ್ತದೆ ಎಂದರೆ ಪ್ರಾತಃಕಾಲದಲ್ಲಿ ಆರಂಭವಾಗುವ ಪೂಜಾ ಕಾರ್ಯ ಮಧ್ಯಾಹ್ನದವರೆಗೂ ನಡೆಯುತ್ತದೆ. ಮೊದಲಿಗೆ  ಅರಮನೆಯ ಆವರಣದಲ್ಲಿ ಆಯುಧಪೂಜೆಯನ್ನು ರಾಜಪರಂಪರೆಯಂತೆ ಆರಂಭಿಸಲಾಗುತ್ತದೆ. ಇದೇ ವೇಳೆ ಸಾಲಿಗ್ರಾಮ ಪೂಜೆ ನಡೆಯುತ್ತದೆ. ಆ ನಂತರ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ಚಿನ್ನದ ಖಡ್ಗ, ಪಿಸ್ತೂಲು ಸೇರಿದಂತೆ ಅರಮನೆಯ ಆಯುಧಗಳನ್ನು ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಕೊಂಡೊಯ್ದು ಪುರಾತನ ಬಾವಿಯ ಗಂಗೆಯಿಂದ ಶುಚಿಗೊಳಿಸಿ ಬಳಿಕ ಪೂಜೆ ನೆರವೇರಿಸಲಾಗುತ್ತದೆ.

ಇದೇ ಸಮಯದಲ್ಲಿ ಅರಮನೆಯಲ್ಲಿ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಅವರು ವಿವಿಧ ಪೂಜೆ ಹೋಮ ಹವನಗಳನ್ನು ನೇರವೇರಿಸುತ್ತಾರೆ. ಇದೇ ವೇಳೆ ಕೋಡಿ ಸೋಮೇಶ್ವರ ದೇವಾಲಯದಿಂದ ಶುಚಿಗೊಳಿಸಿ ಪಲ್ಲಕಿಯಲ್ಲಿ ತಂದ ಆಯುಧ ಸೇರಿದಂತೆ ಇತರೆ ವಸ್ತುಗಳನ್ನು ಅರಮನೆಯ ಆನೆಬಾಗಿಲು ಮೂಲಕ  ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಜೋಡಿಸಲಾಗುತ್ತದೆ. ಆ ನಂತರ ಆಗಮಿಸಿದ ರಾಜಪುರೋಹಿತರು ನೀಡಿದ ಮಾರ್ಗದರ್ಶನದಂತೆ ಆಯುಧಗಳನ್ನು ಜೋಡಿಸಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಎಲ್ಲ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ಇದೆಲ್ಲದರ ನಡುವೆ ಖಾಸಗಿ ದರ್ಬಾರ್ ಆರಂಭವಾಗುವ ಮುನ್ನ ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಸಲ್ಲಿಸಿ ವಿಸರ್ಜಿಸಲಾಗುತ್ತದೆ.

ಬೆಳಗ್ಗೆ ಚಂಡಿಕಾ ಹೋಮ ಆರಂಭಿಸಿ  ಬಳಿಕ ಪೂರ್ಣಾಹುತಿ ನಡೆಯುತ್ತದೆ. ಇದಾದ ನಂತರ ಕರಿಕಲ್ಲು ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ  ಪೂಜೆಯ ವಿವಿಧ ಕ್ರಮಗಳನ್ನು ನೆರವೇರಿಸಿ, ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆಯನ್ನು ಮಾಡಲಾಗುತ್ತದೆ. ಆ ನಂತರ ಅರಮನೆಯಲ್ಲಿರುವ ಪಟ್ಟದ ಆನೆ, ಪಟ್ಟದ ಕುದುರೆಗಳು, ಪಟ್ಟದ ಒಂಟೆಗಳು, ಪಟ್ಟದ ಹಸುಗಳು ಹಾಗೂ ಅರಮನೆ ಆರು ಆನೆಗಳಿಗೂ ಹಿಂದಿನ ಕಾಲದಿಂದ ಬಂದಿರುವ ಸಂಪ್ರದಾಯದಂತೆಯೇ ಸಂಪ್ರದಾಯಬದ್ಧ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

See also  ಮುನ್ನೆಚ್ಚರಿಕೆಯೊಂದಿಗೆ ದಸರಾ ಆಚರಿಸಲು ಸಚಿವ ಸುಧಾಕರ್ ಸೂಚನೆ

ಒಟ್ಟಾರೆ ಮೈಸೂರು ಅರಮನೆಯಲ್ಲಿ ನಡೆಯುವ ಆಯುಧಪೂಜೆ ವೈಶಿಷ್ಟ್ಯಪೂರ್ಣವಾಗಿದ್ದು, ಇಂತಹದೊಂದು ಆಯುಧಪೂಜೆಯನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು