News Kannada
Thursday, October 06 2022

ಮೈಸೂರು

`ಗ್ರಂಥಗಳ ಸ್ನೇಹದಿಂದ ಜ್ಞಾನಾಭಿವೃದ್ಧಿ ಸಾಧ್ಯ’ - 1 min read

Photo Credit :

`ಗ್ರಂಥಗಳ ಸ್ನೇಹದಿಂದ ಜ್ಞಾನಾಭಿವೃದ್ಧಿ ಸಾಧ್ಯ’

ಮೈಸೂರು: ಗ್ರಂಥಾಲಯ, ಗ್ರಂಥ ಭಂಡಾರ, ಗ್ರಂಥಾಲಯದ ಸ್ನೇಹ ಮಾಡಿದರೆ ನಾವು ಎಲ್ಲ ರೀತಿಯಲ್ಲಿ ಅಭಿವೃದ್ಧಿಯಾಗಿ ಜ್ಞಾನವನ್ನು ಸಂಪಾದನೆ ಮಾಡಬಹುದು ಎಂದು ಮೈಸೂರು ಮಹಾನಗರಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಅಭಿಪ್ರಾಯಪಟ್ಟರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಚಾಮುಂಡಿಪುರಂ ಶಾಖೆಯಲ್ಲಿ ಇಂದು ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ  2019 ಪ್ರಯುಕ್ತ ಆಯೋಜಿಸಿದ್ದ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗ್ರಂಥಾಲಯಗಳು ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತವೆ. ಅದರ ಉಪಯೋಗ ಪಡೆಯುವುದರ ಮೂಲಕ ಸದ್ಭಳಕೆ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಚಾಮುಂಡಿಪುರಂ ಗ್ರಂಥಾಲದಲ್ಲಿ ಇ-ಲೈಬ್ರಿ ಸದ್ಯದಲ್ಲೇ ಪ್ರಾರಂಭಿಸಲಾಗುವುದು, ಇದರಿಂದ ವಿದ್ಯಾರ್ಥಿಗಳಿಗೆ ತುಂಬ ಉಪಯೋಗವಾಗಲಿದೆ. ಪ್ರತಿ ವಾರ್ಡ್‍ಗಳಲ್ಲಿ ಎರಡೆರಡು ಗ್ರಂಥಾಲಯಗಳು ತೆರೆಯಬೇಕೆಂದು ಆಗ್ರಹಿಸಿದರು. ಅದು ಸಫಲವಾಗಬೇಕಾದರೆ ಓದುಗರ ಸಂಖ್ಯೆ ಜಾಸ್ತಿಯಾಗಬೇಕು. ಓದಿನ ಹವ್ಯಾಸ ಬೆಳೆಸಿಕೊಂಡರೆ ಆರೋಗ್ಯವಂತರು, ಬುದ್ಧಿವಂತರು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇಂದು ಟಿ.ವಿ., ಮೊಬೈಲ್ ಹಾವಳಿಯಿಂದಾಗಿ ಕಾದಂಬರಿಗಳು ನಶಿಸಿಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಮಹಿಳೆಯರಿಗೂ ಅದರ ಬಗ್ಗೆ ಆಸಕ್ತಿ ಕಡಿಮೆಯಾಗಿ ಟಿ.ವಿ. ಧಾರಾವಾಹಿಗಳಿಗೆ ದಾಸರಾಗಿದ್ದಾರೆ. ಉಷಾನವರತ್ನರಾಂ, ವಾಣಿ, ಸಿ.ಎನ್. ಮುಕ್ತ, ಅನುಪಮ ನಿರಂಜನ ಮುಂತಾದ ಕಾದಂಬರಿಗಳು ಇಂದಿಗೂ ಜನಪ್ರಿಯವಾಗಿವೆ ಎಂದು ತಿಳಿಸಿದರು.

ಸಾಹಿತಿ ನ ನಾಗಚಂದ್ರ, ನಿಮ್ಮ ಮಕ್ಕಳನ್ನು ಅವರ ಪಠ್ಯದ ಜೊತೆಗೆ ಬೇರೆ ಬೇರೆ ಕ್ಷೇತ್ರಗಳ ಬಗ್ಗೆ (ಯೋಗ, ಕ್ರೀಡೆ, ಸಂಗೀತ, ಸಾಹಿತ್ಯ ಇತ್ಯಾದಿ) ಮಾಹಿತಿ ಪಡೆಯಲು ಗ್ರಂಥಾಲಯಕ್ಕೆ ಕರೆದುಕೊಂಡು ಬನ್ನಿ. ಇಂದು ನಾವು ಜಾಗತೀಕರಣದ ಹಂತದಲ್ಲಿದ್ದೇವೆ. ನಾವು ಎಲ್ಲ ಕ್ಷೇತ್ರದಲ್ಲೂ ಪಾಶ್ಚಿಮಾತ್ಯ ದೇಶಗಳನ್ನು ಮಣಿಸುವ ದಿಕ್ಕಿನಲ್ಲಿದ್ದೇವೆ. ಗ್ರಂಥಾಲಯದಲ್ಲಿ ನಾವು ಅನೇಕ ಲೇಖಕರು, ಸಾಹಿತಿಗಳು ಕೊಟ್ಟ ಅತ್ಯಮೂಲ್ಯ ಕೊಡುಗೆಗಳನ್ನು ಮೈಗೂಡಿಸಿಕೊಳ್ಳಬೇಕಿದೆ

ಈ ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಶಿವಕುಮಾರ್, ಶಾಖಾ ಪ್ರಭಾರಕರಾದ ಎನ್ ಆರ್ ಮಂಜುಳ, ಭವ್ಯ, ರಾಧಮಣಿ, 55ನೇ ವಾರ್ಡಿನ ಅಧ್ಯಕ್ಷರಾದ ಸಿ ಸಂದೀಪ್, ಮುಖಂಡರುಗಳಾದ ಮಂಜುನಾಥ್, ಧರ್ಮೇಂದ್ರ ಹಾಗೂ ಗ್ರಂಥಾಲಯದ ಸಿಬ್ಬಂದಿ, ಓದುಗರು, ಸಾರ್ವಜನಿಕರು ಭಾಗವಹಿಸಿದ್ದರು.

See also  ಮೈಸೂರು ವಿಶ್ವವಿದ್ಯಾಲಯದಿಂದ 10 ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು