ಮೈಸೂರು: ಉಪಚುನಾವಣೆಯಲ್ಲಿ ಗೆಲ್ಲಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದುಡ್ಡಿನ ಸುರಿಮಳೆ ಸುರಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಆರೋಪಿಸಿದರು.
ಬುಧವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದೇವೇಗೌಡ ಅವರು, ಪ್ರತಿಯೊಂದು ಕ್ಷೇತ್ರಕ್ಕೆ ಬಿಜೆಪಿ ಅವರು ಉಸ್ತುವಾರಿ ನೇಮಿಸಿದ್ದಾರೆ. ಅವರು ತಮಗೆ ಬೇಕೆಂದಾಗ ಹಣ ತರಿಸಿಕೊಳ್ಳಬಹುದು. ಇದನ್ನು ಕೇಳುವವರು ಇಲ್ಲ ಎಂದು ಗಂಭೀರವಾಗಿ ಆರೋಪ ಮಾಡಿದರು.
ದುಡ್ಡಿನ ಬಲದ ಮೇಲೆ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಹೀಗೆ ಇದ್ದರೆ ನಮಗೆ ಏನೂ ಮಾಡಲು ಆಗಲ್ಲ ಎಂದರು.