News Kannada
Thursday, December 01 2022

ಮೈಸೂರು

ಮೈಸೂರಿನಲ್ಲಿ ಕ್ರಿಸ್‍ಮಸ್-ಹೊಸವರ್ಷಕ್ಕೆ ಕೇಕ್ ಪ್ರದರ್ಶನ

Photo Credit :

ಮೈಸೂರಿನಲ್ಲಿ ಕ್ರಿಸ್‍ಮಸ್-ಹೊಸವರ್ಷಕ್ಕೆ ಕೇಕ್ ಪ್ರದರ್ಶನ

ಮೈಸೂರು: ಕ್ರಿಸ್ ಮಸ್ ಮತ್ತು ಹೊಸವರ್ಷ ಹತ್ತಿರ ಬರುತ್ತಿರುವುದರಿಂದ ಕೇಕ್ ಪ್ರಿಯರ ಮನತಣಿಸುವ ಸಲುವಾಗಿ ಕೇಕ್ ಪ್ರದರ್ಶನವನ್ನು ಮೈಸೂರಿನಲ್ಲಿ 12 ದಿನಗಳ ಕಾಲ ಏರ್ಪಡಿಸಲಾಗಿದೆ.

ಮೈಸೂರು ಮೂಲದ ¨ ಇಟಾಲಿಯನ್ ಕೆಫೆ ಮತ್ತು ಫ್ರೊಸ್ಟಿಂಗ್ ಕೆಫೆ ಸಹಯೋಗದಲ್ಲಿ ವಾರ್ಷಿಕ ಕೇಕ್ ಪ್ರದರ್ಶನ ಮತ್ತು ಥೈಲ್ಯಾಂಡ್ ಸವಿಯ “ಟೇಸ್ಟ್‍ಆಫ್‍ಥಾಯ್” ಆಹಾರ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಲಾಗಿದ್ದು, ಜನವರಿ 2ರವರೆಗೆ ಪ್ರದರ್ಶನವಿರಲಿದೆ.

ಕೇಕ್‍ಗಳ ಪ್ರದರ್ಶನದಲ್ಲಿ ಬಗೆಬಗೆಯ ಕೇಕ್‍ಗಳು ಕಣ್ಣುಗಳಿಗೆ ಮೋಡಿ ಮಾಡುವ ಜೊತೆಗೆ, ರುಚಿ ಮೊಗ್ಗುಗಳಿಗೂ ವಿಶಿಷ್ಟ ಅನುಭವವನ್ನು ನೀಡಲಿವೆ. ಫ್ರೊಸ್ಟಿಂಗ್ ಕೆಫೆಯ ಶೆಫ್‍ಗಳು ತಯಾರಿಸಿದ ಇಲ್ಲಿನ ಪ್ರತಿಯೊಂದು ಕೇಕ್‍ಗಳು ವಿಶೇಷ ಸ್ವಾದದಿಂದ ಕೂಡಿವೆ.

ಇನ್ನು ಫ್ರೊಸ್ಟಿಂಗ್ ಕೆಫೆಯು ಆಹಾರಥಾಯ್ ಉತ್ಸವದ ಮೂಲಕ ಥೈಲಾಂಡ್ ರುಚಿಯನ್ನು ಪರಿಚಯಿಸುತ್ತಿದ್ದು, ಥಾಯ್ ಸ್ಪ್ರಿಂಗ್ ರೋಲ್, ತೋಫು ಮತ್ತು ನಿಂಬೆ ಹುಲ್ಲಿನ ತರಕಾರಿ ನೂಡಲ್ಸ್ ಸೂಪ್, ಥಾಯ್‍ಗ್ಲಾಸ್ ನೂಡಲ್ ಸಲಾಡ್, ಕಡಲೆಕಾಯಿ ಬೆಣ್ಣೆ ಸಾಸ್‍ನೊಂದಿಗೆ ಬೇಯಿಸಿದ ತೋಫು, ಥಾಯ್‍ರಾ ಮಾವಿನ ಚಿಕನ್‍ಕರಿ ಮೊದಲಾದ ರುಚಿಯನ್ನು ಸವಿಯಲು ಅವಕಾಶ ಮಾಡಿಕೊಡಲಾಗಿದೆ.

See also  ಮೈಸೂರಿನಲ್ಲಿ ಮೇ 4 ರಂದು ಟಿಪ್ಪು ಸುಲ್ತಾನ್ ನೆನಪಿನ ಬೃಹತ್ ಸಮಾವೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು