News Kannada
Friday, December 09 2022

ಮೈಸೂರು

ಅರಮನೆ ನಗರಿಯಲ್ಲಿ ರಂಗು ಚೆಲ್ಲಿದ ಮಾಗಿ ಉತ್ಸವ

Photo Credit :

ಅರಮನೆ ನಗರಿಯಲ್ಲಿ ರಂಗು ಚೆಲ್ಲಿದ ಮಾಗಿ ಉತ್ಸವ

ಮೈಸೂರು: ಮಾಗಿ ಚಳಿಗೆ ಅರಮನೆ ರಂಗು ರಂಗಾಗಿ ಕಾಣಿಸತೊಡಗಿದೆ. ಅರಮನೆ ಆವರಣದಲ್ಲಿ ಪುಷ್ಪ ರಾಶಿಯಲ್ಲಿ ಹೆಜ್ಜೆ ಹಾಕುತ್ತಾ ಮಜಾ ಉಡಾಯಿಸಲು ಮಾಗಿ ಉತ್ಸವವನ್ನು ಆಯೋಜಿಸಲಾಗಿದ್ದು, ಸಂಜೆ ಹೊತ್ತು ವಿದ್ಯುದೀಪ ಬೆಳಕಲ್ಲಿ ಸುಂದರ ಹೂವು, ಕಲಾಕೃತಿಗಳನ್ನು ನೋಡುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಾ ಮುನ್ನಡೆಯಲು ವರ್ಷದ ಕೊನೆಯ ದಿನವನ್ನು ಖುಷಿಯಾಗಿ ಕಳೆಯಲು ವೇದಿಕೆಯಾಗುತ್ತಿದೆ.

ಈಗಾಗಲೇ ಮಾಗಿ ಉತ್ಸವ ಆರಂಭವಾಗಿದ್ದು, ಇದೇ ತಿಂಗಳ ಅಂದರೆ ಡಿಸೆಂಬರ್ ಕೊನೆಯ ದಿನದವರೆಗೆ ನಡೆಯಲಿದೆ.

ಅರಮನೆ ಆವರಣದಲ್ಲಿ ಹೆಜ್ಜೆ ಹಾಕುತ್ತಾ ಹೋದರೆ ಲಕ್ಷಾಂತರ ಗುಲಾಬಿ ಹೂಗಳಿಂದ ಎದ್ದು ನಿಂತ ಬೆಂಗಳೂರು ಅರಮನೆ ಗಮನಸೆಳೆಯುತ್ತದೆ. ಇನ್ನು ಪ್ರವೇಶ ದ್ವಾರದಲ್ಲಿ ಸೊಂಡಿಲೆತ್ತಿ ನಮಸ್ಕರಿಸುತ್ತಿರುವ ಎರಡು ಗಜಗಳನ್ನು ಕೂಡ ಪುಷ್ಪಗಳಿಂದಲೇ ನಿರ್ಮಿಸಲಾಗಿದೆ.

ಇದಲ್ಲದೆ ನಿಂಬೆಹಣ್ಣು ಮತ್ತು ಬಿಲ್ವ ಪತ್ರೆಗಳಿಂದ ಅಲಂಕರಿಸಿದ ಶಿವಲಿಂಗ ಮಾದರಿ ಚಿತ್ರ, ಅರಮನೆ ಆವರಣದಲ್ಲಿರುವ ವರಾಹಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಂತೆ ಪಿಟೋನಿಯ ಹೂವಿನ ಗಿಡಗಳು ಹಾಗೂ ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಕಾಕ್ಸಕೂಂಬ್, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಲೋಷಿಯ, ನಸ್ಟರ್‍ಸಿಯಂ, ಆಂಟಿರೈನಂ, ಬೋನ್ಸಾಯ್ ಸೇರಿದಂತೆ ಹಲವು ಹೂವಿನ ಗಿಡಗಳಿಂದ ವರ್ಟಿಕಲ್ ಗಾರ್ಡನ್ ನಿರ್ಮಾಣವಾಗಿದೆ ಇದಲ್ಲದೆ ಕ್ರೈಸಾಂಥಿಮಮ್, ಪಿಂಗ್ ಪಾಂಗ್, ಕಾರ್ನೆಷನ್, ಆಸ್ಟ್ರಮೇರಿಯ, ಜರ್ಬೆರಾ, ಆಂಥೋರಿಯಮ್, ಆರ್ಕಿಡ್ಸ್, ಬ್ಲೂ ಡೈಸಿ, ಡ್ರೆಸಿನಾ ಹಾಗೂ ಇತರೆ ಅಲಂಕಾರಿಕ ಹೂವು, ಊಟಿ ಕಟ್ ಫ್ಲವರ್‍ಗಳು ಆಕರ್ಷಿಸುತ್ತಿವೆ.

 

ವಾಯುಸೇನೆ, ಭೂ ಸೇನೆ ಹಾಗೂ ನೌಕಾಸೇನೆಗೆ ಗೌರವ ಸಲ್ಲಿಸುವ ಮಾದರಿ ಚಿತ್ರಗಳು, ಇಸ್ರೋ ಉಪಗ್ರಹ ಉಡಾವಣೆಯ ಮಾದರಿ ಆಕೃತಿ, ಕಾಳಿಂಗ ಸರ್ಪದ ಪ್ರತಿಕೃತಿ, ಧ್ಯಾನಿಸುತ್ತಿರುವ ಸ್ವಾಮಿ ವಿವೇಕಾನಂದರನ್ನು ಹೂವು ಮತ್ತು ತರಕಾರಿಗಳಿಂದ ನಿರ್ಮಾಣ ಮಾಡಲಾಗಿದೆ. ಸಿಂಹಾಸನರೂಢರಾಗಿರುವ ಜಯಚಾಮರಾಜ ಒಡೆಯರ್, ತ್ರಿವಿಧÀ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಜತೆ ಜಯಚಾಮರಾಜ ಒಡೆಯರ್ ಇರುವ ಆಕೃತಿಯನ್ನು ಹೂವಿನಿಂದ ನಿರ್ಮಿಸಲಾಗಿದೆ.

ಮಾಗಿ ಉತ್ಸವದ ಅಂಗವಾಗಿ ಪಕ್ಷಿ ಉತ್ಸವವೂ ನಡೆಯುತ್ತಿದೆ. ಅರಮನೆ ವಿದ್ಯುದ್ದೀಪದಿಂದ ಬೆಳಗುತ್ತಿದ್ದರೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

ವರ್ಷದ ಕೊನೆಯಲ್ಲಿ ನಡೆಯುತ್ತಿರುವ ಮಾಗಿ ಉತ್ಸವ ಪ್ರವಾಸಿಗರನ್ನು ಸೆಳೆಯುವುದರೊಂದಿಗೆ ಹೊಸವರ್ಷಾರಂಭಕ್ಕೆ ಹರ್ಷದ ವಾತಾವರಣವನ್ನು ನಿರ್ಮಾಣ ಮಾಡಿರುವುದಂತು ನಿಜ.

See also  ಪಾದಚಾರಿಗೆ ಡಿಕ್ಕಿಯಾಗಿ ಮನೆಗೆ ನುಗ್ಗಿದ ಬಸ್: ಓರ್ವ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು