News Kannada
Thursday, December 08 2022

ಮೈಸೂರು

ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಸರ್ವ ಸಜ್ಜು

Photo Credit :

ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಸರ್ವ ಸಜ್ಜು

ಮೈಸೂರು: ಮೈಸೂರ್ ಸೈನ್ಸ್ ಫೌಂಡೇಷನ್ ಮತ್ತು ವಿಜಯ ಕರ್ನಾಟಕ, ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ಕಂಕಣ ಬದ್ಧರಾಗಿರಿ ಅಭಿಯಾನದ ಮೂಲಕ 2000 ವಿದ್ಯಾರ್ಥಿಗಳಿಗೆ ಮೈಸೂರುವಿಶ್ವವಿದ್ಯಾನಿಲಯದ ವೋವೆಲ್ ಗ್ರೌಂಡ್ ನಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶವನ್ನು ಮಾಡಿಕೊಡಲಾಗುತ್ತಿದೆ.

ಇದೇ ಡಿಸೆಂಬರ್ 26 ರಂದು ಬೆಳಿಗ್ಗೆ 8 ಗಂಟೆಯಿಂದ 11:20 ರವರೆಗೆ ನಡೆಯುವ ಖಗೋಳ ವಿಸ್ಮಯ ಮತ್ತು ಅಪರೂಪದ ವಿದ್ಯಮಾನ ಕಂಕಣ ಸೂರ್ಯಗ್ರಹಣ ಮಹತ್ವ ಪೂರ್ಣ ವಾಗಿದ್ದು ಪೂರ್ಣ ಕಂಕಣ ಗ್ರಹಣ ಕಾಣಿಸುವ ಕರ್ನಾಟಕದ ಚಾಮರಾಜನಗರದ ಮಂಗಲ ಗ್ರಾಮ, ಮಂಗಳೂರು, ಉಡುಪಿ, ವಿರಾಜಪೇಟೆಯ ಕುಟ್ಟ ಇಲ್ಲಿಗೆ ದೇಶದ ಬೇರೆ ಬೇರೆ ರಾಜ್ಯಗಳಿಂದ ವಿದ್ಯಾರ್ಥಿಗಳು, ವಿಜ್ಞಾನಾಸಕ್ತರು ಆಗಮಿಸುತ್ತಿದ್ದಾರೆ.

ಮೈಸೂರ್ ಸೈನ್ಸ್ ಫೌಂಡೇಷನ್ ಮತ್ತು ಪೂನದ ಮಿತಿ ಎಜುಕೇಷನ್ ಫೌಂಡೇಷನ್, ಅಸಿಮಿತಿ ಸ್ಪೇಸ್ ಮತ್ತು ಎನ್ವೈರೋನ್‍ಮೆಂಟ್ ಸಂಸ್ಥೆಗಳು ವಿರಾಜಪೇಟೆ ತಾಲ್ಲೂಕಿನ ಕುಟ್ಟ ಸಮೀಪದ ಕಾಯಿಮಾನಿ ಎಂಬ ಕಾಫಿ ತೋಟದ ಬಳಿಯ ಮೈದಾನದಲ್ಲಿ 2000 ವಿದ್ಯಾರ್ಥಿಗಳಿಗೆ ಪೂರ್ಣ ಗ್ರಹಣ ವೀಕ್ಷಣೆಗೆ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಅಪರೂಪದ ವಿದ್ಯಮಾನವನ್ನು ಎಲ್ಲಾ ವಿದ್ಯಾರ್ಥಿಗಳು ಕುಟ್ಟದಲ್ಲೇ ಹೋಗಿ ವೀಕ್ಷಣೆ ಮಾಡಲು ಸಾಧ್ಯವಿಲ್ಲದ ಕಾರಣ ಮತ್ತು ಮೈಸೂರಿನಲ್ಲೂ ಶೇ.80 ರಿಂದ 90 ಭಾಗದ ಗ್ರಹಣಗೋಚರಿಸುವುದರಿಂದ ಮೈಸೂರಿನ ವಿಶ್ವವಿದ್ಯಾನಿಲಯದ ವೋವಲ್ ಗ್ರೌಂಡ್ ನಲ್ಲಿ 2000ವಿದ್ಯಾರ್ಥಿಗಳಿಗೆ ವೀಕ್ಷಿಸುವ ಅವಕಾಶವನ್ನು ಮಾಡಲಾಗಿದೆ. ಈಗಾಗಲೇ 50ಕ್ಕೂ ಹೆಚ್ಚು ಶಾಲೆಗಳಿಂದ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ನೊಂದಾಯಿಸಿಕೊಂಡ ಶಾಲೆಯ ವಿಜ್ಞಾನ ಶಿಕ್ಷಕರಿಗೆ ಈಗಾಗಲೇ ವಿಜಯ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಪೂರ್ವಭಾವಿ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಸಂಪನ್ಮೂಲವ್ಯಕ್ತಿಗಳಾದ ಶ್ರೀಧರ್‍ರವರು ಗ್ರಹಣದ ವಿಧಗಳು, ಗ್ರಹಣದ ಹಿಂದೆ ಇರುವ ವಿಜ್ಞಾನ, ಕಂಕಣಸೂರ್ಯಗ್ರಹಣದ ಮಹತ್ವ, ಗ್ರಹಣ ಕುರಿತ ಸಾಕ್ಷ್ಯ ಚಿತ್ರ ತೋರಿಸಿದರು. ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇವುಗಳ ಕುರಿತು ಮಾಹಿತಿ ನೀಡಿ ಡಿ.26ರಂದು ವಿದ್ಯಾರ್ಥಿಗಳನ್ನು ಕರೆತರುವಂತೆ ಸೂಚಿಸಲಾಗಿದೆ.

ಗ್ರಹಣ ವೀಕ್ಷಣೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಗ್ರಹಣ ವೀಕ್ಷಣೆಗೆ ಬೇಕಾದ ಸೌರಕನ್ನಡಕಗಳು, ಪ್ರಮಾಣಪತ್ರಗಳು ಮತ್ತು ಗ್ರಹಣದ ಸಂದರ್ಭದಲ್ಲಿ ಏನನ್ನು ತಿನ್ನಬಾರದು ಎಂಬ ಮೌಢ್ಯ ಹೋಗಿಸಲು ವಿದ್ಯಾರ್ಥಿಗಳಿಗೆ ಬಿಸ್ಕೆಟ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಮೈಸೂರ್ ಸೈನ್ಸ್ ಫೌಂಡೇಷನ್ ಇದುವರೆಗೆ 8000 ಸೌರಕನ್ನಡಕಗಳನ್ನು ಮೈಸೂರಿನ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ಹಂಚಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಾಗಿರುವ ಶಾಲೆಗಳು, ಸಂಯೋಜಕರಾದ ಜಿ.ಬಿ.ಸಂತೋಷ್ ಕುಮಾರ್ ಮೊ: 8105503863, ಶ್ರೀಧರ್ ಮೊ: 7259225927, ಹರೀಶ್ ಸಿ.ವಿ ಮೊ:9964661825, ಎಚ್.ವಿ ಮುರಳೀಧರ್ ಮೊ: 8970909949 ಸಂಪರ್ಕಿಸ ಬಹುದಾಗಿದೆ.

See also  ಮೈಸೂರಿನ ತುಳಸಿ ಆಸ್ಪತ್ರೆಗೆ ಕಾಯಕಲ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು