News Kannada
Sunday, December 04 2022

ಮೈಸೂರು

ಬಿಜೆಪಿ ನಾಯಕರ ಹೇಳಿಕೆಗಳು ಅಕ್ಷಮ್ಯ ಅಪರಾಧ: ಆರ್. ಧ್ರುವನಾರಾಯಣ್

Photo Credit :

ಬಿಜೆಪಿ ನಾಯಕರ ಹೇಳಿಕೆಗಳು ಅಕ್ಷಮ್ಯ ಅಪರಾಧ: ಆರ್. ಧ್ರುವನಾರಾಯಣ್

ಮೈಸೂರು: ಕ್ರಿಶ್ಚಿಯನ್ನರ ಭಾವನೆಗಳಿಗೆ ಬೆಲೆ ಕೊಡದ ಬಿಜೆಪಿ ನಾಯಕರ ಹೇಳಿಕೆಗಳು ಅಕ್ಷಮ್ಯ ಅಪರಾಧ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಮನಸ್ಸಲ್ಲಿ ಎಂಥ ವಿಷವಿದೆ ಎಂಬದು ಗೊತ್ತಾಗುತ್ತಿದ್ದು, ಮೃಗಗಳಿಗೆ ಮಾನವೀಯತೆಯಿದೆ. ಆದರೆ ಬಿಜೆಪಿ ನಾಯಕರಿಗೆ ಮಾನವೀಯತೆಯಿಲ್ಲ ಎಂದ ಅವರು ಡಿ.ಕೆ.ಶಿವಕುಮಾರ್ ಶಾಸಕರಾಗಿ ಸ್ಥಳೀಯ ಜನರ ಮನವಿಗೆ ಸ್ಪಂದಿಸೋದು ಕರ್ತವ್ಯವಾಗಿದೆ. ಹಾಗಾಗಿ ಸರ್ಕಾರದಿಂದ ಜಾಗ ಕೊಡಿಸಿ ತಾವು ಹಣ ನೀಡಿದ್ದಾರೆ. ಇದನ್ನು ಬಿಜೆಪಿ ನಾಯಕರು ಟೀಕಿಸೋದು ಸರಿಯಲ್ಲ. ಕ್ತೈಸ್ತ ಮಿಷನರಿಗಳು ಸ್ವಾತಂತ್ರ್ಯ ಪೂರ್ವದಿಂದಲೂ ಸೇವೆ ಮಾಡುತ್ತಿವೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದೆಷ್ಟು ಬಿಜೆಪಿ ನಾಯಕರು, ಅವರ ಮಕ್ಕಳು ಕ್ರೈಸ್ತ ಮಿಷನರಿ ಶಾಲೆಯಲ್ಲಿ ಓದಿಲ್ಲ ಎಂಬುದಾಗಿ ಪ್ರಶ್ನಿಸಿದ ಅವರು, ಡಿಕೆಶಿಯನ್ನು ಟೀಕಿಸುವ ಪ್ರತಾಪ್‍ಸಿಂಹ ಮಂಗಳೂರಿನಲ್ಲಿ ಓದಿದ ಕಾಲೇಜು ಯಾವುದು ಎಂದು ಹೇಳಲಿ ಎಂದು ಕೇಳಿದರಲ್ಲದೆ, ಇದಕ್ಕೆ ಸೋನಿಯಾ ಗಾಂಧಿ ಹೆಸರು ತಳುಕು ಹಾಕೋದು ಸರಿಯಲ್ಲ ಎಂದು ಹೇಳಿದರು.

ಬಿಜೆಪಿಯವರು ಮೊದಲು ಅಸೃಶ್ಯತೆ ಬಗ್ಗೆ ಮಾತನಾಡಲಿ. ಹಿಂದೂ ಧರ್ಮದಲ್ಲಿರುವ ಅಸಮಾನತೆ ಬಗ್ಗೆ ತಮ್ಮ ನಿಲುವು ಹೇಳಲಿ. ನಾನು ಶಾಸಕನಾಗಿದ್ದಾಗ ಸಿ.ಟಿ.ರವಿ ನನಗೆ ಹೇಳುತ್ತಿದ್ದರು. ಯಾಕೆ ಶಾಲೆ ಕಾಲೇಜಿನ ಫೈಲ್ ತರ್ತಿರಾ. ಅದನ್ಯಾಕೆ ಮಾಡೋಕೆ ಹೋಗ್ತಿರಿ. ನಾವು ನೋಡಿ ವರ್ಷಕ್ಕೊಮ್ಮೆ ದತ್ತ ಪೀಠ ಮೆರವಣಿಗೆ ಮಾಡಿ ಗೆದ್ದು ಬರ್ತೀವಿ. ನೀವು ಹಾಗೆ ಮಾಡಿ ಅಂತ ಸಲಹೆ ಕೊಟ್ಟಿದ್ರು. ನಳಿನ್ ಕುಮಾರ್ ಕಟೀಲ್ ಸಂಸತ್ ಗೆ ಬಾರದೆ ಉತ್ಸವದಲ್ಲಿ ಭಾಗಿಯಾಗ್ತಿದ್ರು. ಸಂಸತ್ ಬಿಟ್ಟು ಉತ್ಸವದಲ್ಲಿ ಭಾಗಿಯಾಗ್ತಿರಾ ಅಂತ ಕೇಳೀದ್ರೆ ನಮಗೆ ಸಂಸತ್ ಗಿಂತ ಉತ್ಸವನೇ ಹೆಚ್ಚು ಅಂತ ಹೇಳ್ತಿದ್ರು. ಇಂತಹ ಮನಸ್ಥಿತಿ ಇರುವಂತವರು ಬಿಜೆಪಿ ನಾಯಕರುಗಳು. ಇವರುಗಳಿಗೆ ಅಭಿವೃದ್ಧಿ ಬೇಡ. ಧರ್ಮದ ಮಧ್ಯ ಕಂದಕ ಸೃಷ್ಟಿಸುವುದೇ ಇವರ ಕೆಲಸ ಎಂದು ಕಿಡಿ ಕಾರಿದರು.

ಸಿಎಎ ಕಾಯ್ದೆಯನ್ನು ಧರ್ಮಾಧಾರಿತವಾಗಿ ಜಾರಿ ಮಾಡ್ತಿದ್ದಾರೆ. ಈಗ ಕ್ರಿಶ್ಚಿಯನ್ನರ ಭಾವನೆಗಳಿಗೆ ಬೆಲೆ ಕೊಡ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಮಾಡಲು ಹೋಗ್ತಿವೆ. ಆ ಈಶ್ವರಪ್ಪನವರಿಗಂತು ಮನುಷ್ಯತ್ವವೇ ಇಲ್ಲ. ಬಿಜೆಪಿಯವರದ್ದು ಧಮನಕಾರಿ ಮನಸ್ಥಿತಿ. ಹಿಂದೂ ಧರ್ಮ ಬಿಟ್ಟು ಬೇರೆ ಏನು ಇರಬಾರದು ಅನ್ನೋ ಭಾವನೆ ಇಟ್ಟುಕೊಂಡಿದ್ದಾರೆ. ಇವರ ಮೂಲ ಅಜೆಂಡ ಪ್ರಚೋದನಕಾರಿ ಹೇಳಿಕೆ ಮೂಲಕ ಮತ ಸೆಳೆಯೋದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

See also  ಸ್ವಯಂ ಸೇವಾ ವಿದ್ಯಾರ್ಥಿ ಮೇಲೆ ಹಲ್ಲೆ : ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು