News Kannada
Sunday, November 27 2022

ಮೈಸೂರು

ಮೈಸೂರಲ್ಲಿ ರಾಷ್ಟ್ರಕವಿ ಕುವೆಂಪು ಸ್ಮರಣೆ ಕಾರ್ಯಕ್ರಮ - 1 min read

Photo Credit :

ಮೈಸೂರಲ್ಲಿ ರಾಷ್ಟ್ರಕವಿ ಕುವೆಂಪು ಸ್ಮರಣೆ ಕಾರ್ಯಕ್ರಮ

ಮೈಸೂರು: ನಗರದ ವಿಜಯ ವಿಠಲ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ‘ವಿಶ್ವಮಾನವ ದಿನ’ ಎಂದು ಆಚರಿಸಲಾಯಿತು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಡಾ. ವೈ.ಡಿ. ರಾಜಣ್ಣರವರು ಕುವೆಂಪು ಹಾಗೂ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು.

ಬಳಿಕ ಮಾತನಾಡಿ ಕುವೆಂಪು ಅವರು 20ನೇ ಶತಮಾನದ ಸ್ವತಂತ್ರ ಪ್ರವೃತ್ತಿಯ ಕವಿ. ಅವರು ಮನುಜಮತದಲ್ಲಿ ಅಪಾರ ನಂಬಿಕೆ ಇಟ್ಟು ಸಮಾನತೆಯಿಂದ ಸಮಾಜದ ಸರ್ವೋದಯಕ್ಕೆ ಶ್ರಮಿಸಿ  ವಿಶ್ವಪಥದೆಡೆಗೆ ಸಾಗಬೇಕು ಎಂದು ಜನರಲ್ಲಿ ಸ್ಫೂರ್ತಿ ತುಂಬಿದರು. ಅವರು ಕನ್ನಡ ಸಾಹಿತ್ಯಕ್ಕೆ ಮೊದಲ ಬಾರಿ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟು, ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಖ್ಯಾತಿಗೊಳಿಸಿದರು. ಅವರ ಸರಳಜೀವನ ಸರ್ವರಿಗೂ ಮಾದರಿ. ಅವರ ವಿಚಾರಶೀಲ ವ್ಯಕ್ತಿತ್ವ, ಕ್ರಾಂತಿಕಾರಕ ಮನೋಭಾವ. ಸಮಾಜದಲ್ಲಿನ ಎಲ್ಲಾ ವಿಧವಾದ ಅಸಮಾನತೆಗಳು ಹೋಗಬೇಕು ಎಂದು ಹೃದಯಂಗಮವಾಗಿ ಪದ್ಯದಲ್ಲಿ, ಗದ್ಯದಲ್ಲಿ ಪ್ರಸ್ತುತಪಡಿಸಿದ್ದಾರೆ. ಅವರು ಮೌಢ್ಯದ ವಿರುದ್ಧ ನಿಲುವಿನಿಂದ ಮಾನವತೆಯೇ ಜೀವನದ ಧರ್ಮವಾಗಲಿ ಎಂದು ಸಾರಿದವರು. ಕಾವ್ಯ, ನಾಟಕ, ಕಥೆ, ಕಾದಂಬರಿ, ವಿಮರ್ಶೆ ಮೊದಲಾದ ಹಲವಾರು ಕ್ಷೇತ್ರಗಳಲ್ಲಿ ಕುವೆಂಪುರವರ ಸಾಧನೆ ಅವಿಸ್ಮರಣೀಯ ಎಂದು ಹೇಳಿದರು.

ಪೇಜಾವರ ಶ್ರೀಗಳನ್ನುದ್ದೇಶಿಸಿ ಮಾತನಾಡುತ್ತಾ ಅವರ ಕ್ರಿಯಾಶೀಲತೆ ಮತ್ತು ಅಗಾಧವಾದ ಜ್ಞಾನಶೀಲತೆ ಸರ್ವರಿಗೂ ಅನುಕರಣೀಯ, ಸರ್ವಧರ್ಮ ಸಮಾನತೆಯನ್ನು ಸಾರಿದಂತಹ ವಿಶ್ವಸಂತ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಎಚ್. ಸತ್ಯಪ್ರಸಾದ್ ಅವರು ಮಾತನಾಡುತ್ತಾ ಕುವೆಂಪು ಅವರು ಮೇರು ವ್ಯಕ್ತಿತ್ವದ ಜಗದ ಕವಿ ಹಾಗೂ ಯುಗದ ಕವಿ. ಅವರು ಸಾಮಾಜಿಕ ಜವಾಬ್ದಾರಿ ಇರುವ ಸಾಹಿತಿಯಾಗಿ, ವಿಶ್ವಮಾನವ ಕವಿಯಾಗಿ ಸಾಹಿತ್ಯ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದವರಾಗಿದ್ದಾರೆ. ಅವರೊಬ್ಬ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಚೈತನ್ಯಶೀಲರಾಗಿ ಬೇರೆಯವರೂ ಬೆಳೆಯಬೇಕೆಂದು ಬಯಸಿದವರು. ಜಡತ್ವ ಎಂದೂ ವ್ಯಕ್ತಿಯ ಬೆಳವಣಿಗೆಗೆ ತೊಡಕಾಗಬಾರದು. ಕನ್ನಡ ಭಾಷೆಯನ್ನು ವಿಶ್ವದ ಭಾಷೆಗಳ ಜೊತೆಗೆ ಪ್ರತಿಸ್ಪರ್ಧಿ ಭಾಷೆಯಾಗಿ ಬೆಳೆಸಬೇಕೆಂದು ಬಯಸಿದ್ದರು. ಕುವೆಂಪು ಅವರನ್ನು ಹೊರತುಪಡಿಸಿ ಕನ್ನಡ ಸಾಹಿತ್ಯ ಅಧ್ಯಯನ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಅವರು ಮೇರು ಕೃತಿಗಳನ್ನು ರಚಿಸಿ, ಕನ್ನಡಕ್ಕೆ ರಾಷ್ಟ್ರಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದ್ದಾರೆ. ಕಾವ್ಯ, ನಾಟಕ, ಕಥೆ, ಕಾದಂಬರಿ, ವಿಮರ್ಶೆ ಮೊದಲಾದ ಹಲವಾರು ಕ್ಷೇತ್ರಗಳಲ್ಲಿ ಕುವೆಂಪುರವರ ಸಾಧನೆ ಅವಿಸ್ಮರಣೀಯ. ಅವರ ಬದುಕು ಬರಹಗಳು ಮುಂದಿನ ಜನಾಂಗಕ್ಕೆ ಮಾರ್ಗದರ್ಶನವಾಗಿರಬೇಕು. ಅವರ ಕೃತಿಗಳನ್ನು ಓದುವ ಹವ್ಯಾಸವನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು. ಪೇಜಾವರ ಶ್ರೀಗಳವರ ಕಾರ್ಯಶ್ರದ್ಧೆ ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಸದಾ ತಮ್ಮನ್ನು ತಾವು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಜೀವನಶೈಲಿಯನ್ನು ಸ್ಮರಿಸಿದರು.

ಕನ್ನಡ ಉಪನ್ಯಾಸಕರಾದ ಎಸ್.ಎಸ್. ರಮೇಶ್, ಎನ್. ಅನಿತಾರವರು ಉಪಸ್ಥಿತರಿದ್ದರು.  ಕುವೆಂಪು ಅವರ ರಚನೆಯ ಗೀತೆಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕುವೆಂಪು ಗೀತಗಾಯನ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ರಾಮನಾಥ್ ಕಿಣಿ ಪ್ರಥಮ ಬಹುಮಾನ ಮತ್ತು ವಿಧಾತ್ರಿ ಭಟ್ ದ್ವಿತೀಯ ಬಹುಮಾನ, ಕಾಲೇಜು ವಿಭಾಗದಲ್ಲಿ ವೈಷ್ಣವಿ.ಟಿ.ಎಂ. ಪ್ರಥಮ ಬಹುಮಾನ ಮತ್ತು ಸಾಗರ್.ಎಸ್ ಅವರಿಗೆ ದ್ವಿತೀಯ ಬಹುಮಾನ ವಿತರಿಸಲಾಯಿತು.

See also  ಮೈಸೂರಿನಲ್ಲಿ ಪ್ರಧಾನ ಮಂತ್ರಿ ಮೋದಿ ಹುಟ್ಟುಹಬ್ಬ ಆಚರಣೆಗೆ ನಿರ್ಧಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು