News Kannada
Friday, December 09 2022

ಮೈಸೂರು

ರಸ್ತೆಯಲ್ಲಿ ರೈತರಿಂದ ಒಕ್ಕಣೆ ತಡೆಗೆ ಆಗ್ರಹ!

Photo Credit :

ರಸ್ತೆಯಲ್ಲಿ ರೈತರಿಂದ ಒಕ್ಕಣೆ ತಡೆಗೆ ಆಗ್ರಹ!

ಮೈಸೂರು: ಸಾರ್ವಜನಿಕ ರಸ್ತೆಯಲ್ಲಿ ಹುಲ್ಲು ಹಾಕಿ ರೈತರು ಒಕ್ಕಣೆ ಮಾಡುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ನಿರಂತರವಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ಹಾಯ್ದು ಹೋಗಿರುವ ಪ್ರಮುಖ ರಸ್ತೆಗಳಲ್ಲಿ ಭತ್ತ, ರಾಗಿ, ಹುರಳಿ, ಹುಚ್ಚೆಳ್ಳು ಸೇರಿದಂತೆ ಹಲವು ಬೆಳೆಗಳ ಒಕ್ಕಣೆಯನ್ನು ರೈತರು ಮಾಡುತ್ತಿದ್ದು ಇದರಿಂದ ವಾಹನ ತೆರಳಲು ಕಷ್ಟವಾಗುತ್ತಿದೆ.

ಕೆಲವು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲಿ ರೈತರು ಇದೇ ರೀತಿ ರಸ್ತೆಯಲ್ಲಿ ಹುರಳಿ ಒಕ್ಕಣೆ ಮಾಡಿದ ಹಿನ್ನೆಲೆಯಲ್ಲಿ ವಾಹನವೊಂದು ಬೆಂಕಿಗೆ ಆಹುತಿಯಾಗಿದ್ದ ಘಟನೆ ನಡೆದಿತ್ತು. ಈ ಘಟನೆ ಹಸಿರಾಗಿದ್ದರೂ ಕೂಡ ರೈತರು ಎಚ್ಚೆತ್ತುಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ.

ತಾಲೂಕಿನ ರಸ್ತೆಯಲ್ಲಿ ಒಕ್ಕಣೆ ಮಾಡಬಾರದು ಎಂಬ ಎಚ್ಚರಿಕೆಯನ್ನು ರೈತರಿಗೆ ನೀಡಿದರೂ ಕೂಡ ತಪ್ಪುಗಳು ಮುಂದುವರಿಯುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಇನ್ನಿತರೆ ಇಲಾಖೆಗಳು ಒಗ್ಗೂಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

See also  ಉಪಚುನಾವಣೆ ಪ್ರಚಾರಕ್ಕೆ ಸಿಎಂ 10 ದಿನ ಮೈಸೂರಿನಲ್ಲಿ ವಾಸ್ತವ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು