News Kannada
Tuesday, November 29 2022

ಮೈಸೂರು

ಮೈಸೂರು: ಕಾನೂನು ಬಾಹಿರವಾಗಿ ಮರ ಕಡಿದ ಅಧಿಕಾರಿಗಳ ವಿರುದ್ಧ ದೂರು - 1 min read

Photo Credit :

ಮೈಸೂರು: ಕಾನೂನು ಬಾಹಿರವಾಗಿ ಮರ ಕಡಿದ ಅಧಿಕಾರಿಗಳ ವಿರುದ್ಧ ದೂರು

ಮೈಸೂರು: ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಮರವನ್ನು ಕಡಿದಿದ್ದ ಪಾಲಿಕೆಯ ಅಧಿಕಾರಿ ಸೇರಿದಂತೆ ಇಬ್ಬರ ವಿರುದ್ಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ.

ಪಾಲಿಕೆಯ ತೋಟಗಾರಿಕಾ ಅಧಿಕಾರಿ ಮಣಿಕಂಠ ಎಂಬವರು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆ ಮುಬಾರಕ್ ಎಂಬವರಿಂದ ಸಿದ್ಧಾರ್ಥ ನಗರದ ಡೈರಿ ಸಮೀಪದಲ್ಲಿದ್ದ ಬೃಹತ್ ಗಾತ್ರದ ರೈನ್ ಟ್ರೀ ಮರವನ್ನು ನಿನ್ನೆ ಮಧ್ಯಾಹ್ನ ಕತ್ತರಿಸುತ್ತಿದ್ದರು. ಇದನ್ನು ನೋಡಿದ ಸಾರ್ವಜನಿಕರೋರ್ವರು ಕರೆ ಮಾಡಿ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮರದ ತುಂಡುಗಳನ್ನು ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಪಾಲಿಕೆ ಅಧಿಕಾರಿ ಮಣಿಕಂಠ ಹಾಗೂ ಮರ ಕತ್ತರಿಸುತ್ತಿದ್ದ ಮುಬಾರಕ್ ಎಂಬವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಆರ್ ಎಫ್ ಓ ದೇವರಾಜ್ ತಿಳಿಸಿದ್ದಾರೆ

See also  ಬೆಟ್ಟದಪುರ ಬಳಿ ಅಪರಿಚಿತ ವ್ಯಕ್ತಿಯ ಕೊಲೆಗೈದು ಎಸೆದರೇ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು