News Kannada
Friday, December 02 2022

ಮೈಸೂರು

ಮೈಸೂರಿನಲ್ಲೊಂದು  ಸಂಚಾರಿ  ಪಂಚರ್‌ ಶಾಪ್‌

Photo Credit :

ಮೈಸೂರಿನಲ್ಲೊಂದು  ಸಂಚಾರಿ  ಪಂಚರ್‌ ಶಾಪ್‌

ಮೈಸೂರು: ದ್ವಿಚಕ್ರ, ಚತುಷ್ಚಕ್ರ ಅಥವಾ ಯಾವುದೇ ರೀತಿಯ  ವಾಹನ ಹೊಂದಿದವರೆಲ್ಲ ಟೈರ್‌ ಗಳು ತೂತಾದಾಗ ಪಂಚರ್‌ ಶಾಪ್‌ ಗಳಿಗೆ ಹೋಗಲೇಬೇಕು. ಆರು ಮತ್ತು ನಾಲ್ಕು ಚಕ್ರದ  ವಾಹನಗಳಾದರೆ ಒಂದು ಸ್ಟೆಪ್ನಿ ಇರುತ್ತದೆ.  ಟೈರ್‌ ಬದಲಾಯಿಸಿದರೆ  ಹೇಗೋ ಸಮೀಪದ ಪಂಚರ್‌ ಶಾಪ್‌ ತಲುಪಬಹುದು.  ದ್ವಿಚಕ್ರ ವಾಹನಗಳಾದರೆ  ಅದಕ್ಕಿಂತ ದೊಡ್ಡ ಪಜೀತಿ ಇಲ್ಲ. ವಾಹನವನ್ನು ತಳ್ಳಿಕೊಂಡೇ ರಿಪೇರಿಗೆ ಹೋಗಬೇಕು. ಅದರಲ್ಲೂ ರಾತ್ರಿ ಮತ್ತು ಗ್ರಾಮೀಣ ಪ್ರದೇಶಗಳಾದರೆ  ಮುಗಿಯಿತು.  ರಸ್ತೆ ಬದಿಯೇ ಜಾಗರಣೆ ಮಾಡಬೇಕಾಗುತ್ತದೆ.

ಆದರೆ ಮೈಸೂರಿನ ಸಮೀಪದ ವಾಹನಗಳ ಮಾಲೀಕರು ಇನ್ನು ವಾಹನಗಳು ಪಂಚರ್‌ ಆದರೆ ಜಾಸ್ತಿ ಭಯಪಡಬೇಕಿಲ್ಲ.  ನಿಮ್ಮ ವಾಹನ ಪಂಚರ್‌ ಆದ ಸ್ಥಳಕ್ಕೆ ಬಂದು  ಪಂಚರ್‌ ಹಾಕಿಕೊಡುವ ಮೊಬೈಲ್‌ ಸಂಚಾರಿ ಶಾಪ್‌ ಒಂದು ಕಾರ್ಯ  ನಿರ್ವಹಿಸುತ್ತಿದೆ. ಬಹುಶಃ ಈ ಕಲ್ಪನೆಯೇ ವಿನೂತನವಾಗಿದೆ ಏಕೆಂದರೆ  ಮಾರುತಿ ವ್ಯಾನ್‌ ಒಂದನ್ನು  ಮಾರ್ಪಾಡು ಮಾಡಿಕೊಂಡು  ಸಂಚಾರಿ ಶಾಪ್‌ ಮಾಡಲಾಗಿದೆ. 

ಈ ಮೊಬೈಲ್‌ ಪಂಚರ್‌ ಶಾಪ್‌ ಮಾಲೀಕನ ಹೆಸರು ಮಂಜುನಾಥ್.‌ ಇವರು ಈ ಸಂಚಾರಿ ಶಾಪ್‌ ಮಾಡಿ ಒಂದು ವರ್ಷವಾಗಿದೆ ಅಷ್ಟೆ. ಕಳೆದ ವಾರ  ವಾಟ್ಸ್‌ ಅಪ್‌ ನಲ್ಲಿ  ಇವರ ಮೊಬೈಲ್‌ ಪಂಚರ್‌ ಶಾಪ್‌ ಕುರಿತು ಇವರಿಂದ ಸೇವೆ ಪಡೆದ ಗ್ರಾಹಕರೊಬ್ಬರು  ಚಿತ್ರ ಸಹಿತ  ಮಾಹಿತಿ ಪ್ರಕಟಿಸಿದ್ದರು. ಅದು ಎಲ್ಲೆಡೆ ವೈರಲ್‌ ಆಗಿದೆ. ಈ  ಮಾಹಿತಿ ನಿಜವೇ ಸುಳ್ಳೇ ಎಂದು ಖಚಿತಪಡಿಸಿಕೊಳ್ಳಲು ನಿತ್ಯ 20 ರಿಂದ 25 ಜನರು ಫೋನ್‌ ಮಾಡುತಿದ್ದಾರೆ  ಸಾರ್‌ ಎಂದು ಮಂಜುನಾಥ್‌ ತಿಳಿಸಿದರು.

ತುಂಬಾ ಜನ ಗ್ರಾಹಕರಿಗೆ ಅವರಿದ್ದಲ್ಲೇ ಬಂದು ಪಂಚರ್‌ ರಿಪೇರಿ ಮಾಡುವ ವಿಚಾರವೇ ಗೊತ್ತಿರಲಿಲ್ಲ, ಈಗ ವಿಷಯ ತಿಳಿದಿದ್ದು  ಬಿಸಿನೆಸ್‌ ಚೆನ್ನಾಗಿ ಆಗುತ್ತಿದೆ ಸಾರ್‌ ಎಂದು ಹರ್ಷ ವ್ಯಕ್ತಪಡಿಸಿದರು.

ಮಂಜುನಾಥ್‌  ಅವರ ಮನೆ  ಬೋಗಾದಿಯ  ರಿಂಗ್‌ ರೋಡ್‌ ನಲ್ಲಿದ್ದು  ನಗರದ ಸಮೀಪದಲ್ಲಿ  ವಾಹನಗಳು ಎಲ್ಲಿಯೇ ಪಂಕ್ಚರ್‌ ಆದರೂ ಒಂದು ಫೋನ್‌ ಕರೆ ಮಾಡಿದರೆ ಸಾಕು ಸ್ಥಳಕ್ಕೆ ಹೋಗಿ   ರಿಪೇರಿ ಮಾಡುತ್ತಾರೆ. ಈ ರೀತಿಯ ವಿಶೇಷ ವ್ಯವಸ್ಥೆ ಬೆಂಗಳೂರಿನಲ್ಲಿತ್ತು. ಈಗ ಮೈಸೂರಿನಲ್ಲೂ ಸಾಧ್ಯ ಎಂಬುದನ್ನು ಮಂಜುನಾಥ್‌ ತೋರಿಸಿಕೊಟ್ಟಿದ್ದಾರೆ. ಇವರ ಸಂಚಾರಿ ಶಾಪ್‌  ಪ್ರತಿದಿನ ಬೆಳಿಗ್ಗೆ 8ರಿಂದ ರಾತ್ರಿ 8ಗಂಟೆವರೆಗೆ ಕಾರ್ಯ ನಿರ್ವಹಿಸುತ್ತದೆ.  ಪರಿಚಯಸ್ಥರಾದರೆ  ರಾತ್ರಿಯೂ  ಸೇವೆ ಲಭ್ಯವಿದೆ. ಗ್ರಾಹಕರ ಸ್ಥಳಕ್ಕೆ  ತೆರಳಬೇಕಾದರೆ  ಕಿ.ಮೀ. ಆಧಾರದಲ್ಲಿ ಹೆಚ್ಚುವರಿ ಹಣ ಪಡೆಯುತ್ತಾರೆ. ಇವರನ್ನು   ಮೊ.ಸಂ.96112 47331 ಸಂಕಪರ್ಕಿಸಿ ಸೇವೆ ಪಡೆಯಬಹುದಾಗಿದೆ.

See also  ಸಿಲಿಂಡರ್ ಸ್ಫೋಟ: ಮನೆಗೆ ಹತ್ತಿಕೊಂಡ ಬೆಂಕಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು