News Kannada
Friday, December 02 2022

ಮೈಸೂರು

ಮೈಸೂರಿನಲ್ಲಿ ಕೊರೊನಾದಿಂದ ಇಂದು ಇಬ್ಬರು ಡಿಸ್ಚಾರ್ಜ್: ಇನ್ನಿಬ್ಬರು ಬಾಕಿ

Photo Credit :

ಮೈಸೂರಿನಲ್ಲಿ ಕೊರೊನಾದಿಂದ ಇಂದು ಇಬ್ಬರು ಡಿಸ್ಚಾರ್ಜ್: ಇನ್ನಿಬ್ಬರು ಬಾಕಿ

ಮೈಸೂರು: ಕೊರೋನಾ ಮುಕ್ತ ಜಿಲ್ಲೆಯಾಗುವತ್ತ ಮೈಸೂರು ಮುಂದುವರೆದಿದ್ದು , ಇಂದು ಮತ್ತಿಬ್ಬರು ಕೊರೋನಾ ವೈರಸ್ ಸೋಂಕಿತರು ಗುಣಮುಖ ರಾಗಿ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದೀಗ ಕೇವಲ 2 ಸಕ್ರಿಯ ಪ್ರಕರಣ ಮಾತ್ರ ಮೈಸೂರು ಜಿಲ್ಲೆಯಲ್ಲಿದೆ. ಒಟ್ಟು 90 ಪ್ರಕರಣ ಪತ್ತೆಯಾಗಿತ್ತು. ಇದೀಗ 88 ಮಂದಿ ಕೊರೋನಾ ವೈರಸ್ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ಪಿ-385ಟಿಜೆ,ಪಿ-204 ಡಿಸ್ಚಾರ್ಜ್ ಆಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಇನ್ನಿಬ್ಬರು ಡಿಸ್ಚಾರ್ಜ್ ಆದರೆ ಮೈಸೂರು ಸಂಪೂರ್ಣ ಕೊರೋನಾ ಮುಕ್ತ ಜಿಲ್ಲೆಯಾಗಲಿದೆ. ನಾಳೆಯಿಂದ ಕಿತ್ತಳೆ ವಲಯಕ್ಕೆ ಮೈಸೂರು ಶಿಫ್ಟ್ ಆಗಲಿದೆ. ಕಳೆದ 14 ದಿನಗಳಿಂದ ಯಾವುದೇ ಹೊಸ‌ ಕೇಸ್ ಪತ್ತೆಯಾಗಿಲ್ಲ. ಒಟ್ಟು 5538 ಸ್ಯಾಂಪಲ್ಸ್ ಗಳನ್ನು ಟೆಸ್ಟ್ ಮಾಡಲಾಗಿದ್ದು, 5448 ಸ್ಯಾಂಪಲ್ಸ್ ನೆಗೆಟಿವ್ ಬಂದಿದೆ. 521 ಮಂದಿ 14 ದಿನ ಐಸೋಲೇಟೆಡ್ ನಲ್ಲಿದ್ದು, 4742 ಮಂದಿ 14 ದಿನಗಳ ಐಸೋಲೇಶನ್ ಪೂರ್ತಿಗೊಳಿಸಿದ್ದಾರೆ. ಇಂದಿನವರೆಗೆ 5285 ಮಂದಿಯನ್ನು ಪರಿಶೀಲನೆ ಮಾಡಲಾಗಿದೆ

ಕಳೆದ 14 ದಿನದಿಂದ ಯಾವುದೇ ಪಾಸಿಟಿವ್ ಪ್ರಕರಣ ಬಾರದ ಕಾರಣ ಇಂದಿನಿಂದ ‌ ಮೈಸೂರಿನಲ್ಲಿ ಬುಧವಾರದಿಂದ ಮಹಾನಗರಪಾಲಿಕೆಯು ವ್ಯಾಪಾರಕ್ಕೆ ಅನುಮತಿ ನೀಡಿದೆ.

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಮೈಸೂರಿನ ಎಲ್ಲ ಅಂಗಡಿ, ವಾಣಿಜ್ಯ ವಹಿವಾಟನ್ನೂ ಮುಚ್ಚುವಂತೆ ಈ ಹಿಂದೆ ಆದೇಶಿಸಿಸಲಾಗಿತ್ತು. ಆದರೆ ನಿತ್ಯ ಬಳಕೆಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು . ಇದೀಗ ನಗರದ ಎಲ್ಲ 91 ರಸ್ತೆಗಳಲ್ಲಿ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದ್ದು ಬೆಳಿಗ್ಗೆ ೭ ರಿಂದ ಸಂಜೆ ೭ ರ ವರೆಗೆ ಎಲ್ಲ ಅಂಗಡಿಗಳಿಗೂ ವ್ಯಾಪಾರಕ್ಕೆ ಅನುಮತಿ ಕಲ್ಪಿಸಲಾಗಿದೆ. ಈ ಕುರಿತು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಆದೇಶ ಹೊರಡಿಸಿದ್ದಾರೆ.

ಆದರೆ ಸೆಲೂನ್ ,ಸ್ಪಾ, ಸಿನಿಮಾ ಮಂದಿರ, ಧಾರ್ಮಿಕ‌ ಕೇಂದ್ರಕ್ಕೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಅನುಮತಿ ನೀಡಿಲ್ಲ. ಆಟೋ, ಟ್ಯಾಕ್ಸಿ ಗಳ‌ ಸಂಚಾರಕ್ಕೂ ಅವಕಾಶ ಇಲ್ಲ. ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನೂತನ ಸಡಿಲಿಕೆಯ ಹಿನ್ನೆಲೆಯಲ್ಲಿ ನಗರವು ಜೀವಕಳೆ ಪಡೆಯಲಿದೆ.

See also  ಪತ್ನಿಯ ಕಾಟ ತಾಳಲಾರದೆ ಪತಿ ಮಾಡಿದ್ದೇನು ಗೊತ್ತಾ...?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು