News Kannada
Wednesday, October 05 2022

ಮೈಸೂರು

ಮನೆ ಮನೆಗಳಲ್ಲೇ ಮುಸ್ಲಿಮರಿಂದ ರಂಜಾನ್ ಅಚರಣೆ - 1 min read

Photo Credit :

 ಮನೆ ಮನೆಗಳಲ್ಲೇ ಮುಸ್ಲಿಮರಿಂದ ರಂಜಾನ್ ಅಚರಣೆ

ಮೈಸೂರು:- ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಮುಸ್ಲಿಮರ ಪವಿತ್ರ ಹಬ್ಬವಾದ ಈದುಲ್ ಫಿತ್ರ್ (ರಂಜಾನ್) ವಿಶೇಷ ಪ್ರಾರ್ಥನೆಯನ್ನು ತಮ್ಮ ಮನೆ-ಮನೆಗಳಲ್ಲಿ ಇಂದು ಆಚರಿಸಿದರು.

ಈದ್ ನಮಾಜ್ ನ್ನು ವಿಶೇಷವಾಗಿ ಈದ್ಗಾ ಮೈದಾನದಲ್ಲಿ ಅಥವಾ ಮಸೀದಿಗಳಲ್ಲಿ ಸಾಮೂಹಿಕ ಪ್ರರ್ಥನೆಯ ಮೂಲಕ ಆಚರಿಸುವ‌ ಸಂಪ್ರದಾಯವಿದ್ದು, ಲಾಕ್ ಡೌನ್ ಕಾರಣ ಇದಕ್ಕೆ ಅವಕಾಶವಿರಲಿಲ್ಲ. ಈ ಕಾರಣದಿಂದ ಮುಸಲ್ಮಾನ ಬಾಂಧವರು ‌ತಮ್ಮ ತಮ್ಮ ಮನೆಗಳಲ್ಲಿ ಈದ್ ನಮಾಜ್ ಆಚರಿಸಿದರು.

ಗೆಳೆಯರು, ಬಂಧು ಬಾಂಧವರ ಜತೆ ಈದ್ಗಾ ಮೈದಾನದಲ್ಲಿ ಸಂಭ್ರಮದಿಂದ ನಮಾಜ್ ಆಚರಿಸುವ ಮುಸಲ್ಮಾನರಿಗೆ ಈ ಬಾರಿ ಇಂತಹ ಅವಕಾಶ ದೊರೆಯಲಿಲ್ಲ. ಇದರಿಂದ ಸಂಭ್ರಮದ ಕೊರತೆ ಎದ್ದು ಕಾಣುತ್ತಿತ್ತು. ಆದಾಗ್ಯೂ ಮನೆಗಳಲ್ಲಿ ನಮಾಜ್ ಆಚರಿಸಿ ಕುಟುಂಬದವರ ಜತೆ ಸಂತಸ ಹಂಚಿಕೊಂಡರು. ಈದುಲ್ ಫಿತ್ರ್ ನಮಾಜ್ ಬಳಿಕ ಮುಸಲ್ಮಾನರು ಈದ್ಗಾ ಅಥವಾ ಮಸೀದಿಯಿಂದ ನೇರವಾಗಿ ಖಬರಸ್ತಾನ್ (ಸ್ಮಶಾನ) ಗೆ ಆಗಮಿಸಿ ಮೃತ ಪಟ್ಟಿರುವ ತಮ್ಮ ಬಂಧು ಬಾಂಧವರ ಸಮಾಧಿ ಬಳಿ ಪ್ರಾರ್ಥನೆ ನಡೆಸುವುದು ವಾಡಿಕೆ. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ.

ಟಿಪ್ಪು ಸರ್ಕಲ್ ಬಳಿಯ ಬಡಾ ಮಕಾನ್ ಸೇರಿದಂತೆ ನಗರದ ಬಹುತೇಕ ಮುಸ್ಲಿಂ ಸ್ಮಶಾನದ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಬಹುತೇಕ ಮುಸಲ್ಮಾನರು ಸ್ಮಶಾನದ ಬಳಿ ಆಗಮಿಸಿ ಪೊಲೀಸರನ್ನು ಕಂಡು ದೂರದಿಂದಲೇ ಸ್ಮಶಾನಕ್ಕೆ ನಮಿಸಿ ಹಿಂತಿರುಗಿದ್ದು ಕಂಡು ಬಂತು.

ನಮಾಜ್ ವೇಳೆ‌ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು ಕಂಡು ಬಂತು. ಪ್ರಾರ್ಥನೆಯಲ್ಲಿ ಕೋವಿಡ್ 19 ಮಹಾಮಾರಿ ಜಗತ್ತಿನಿಂದ ದೂರ ಹೋಗುವಂತೆ ಪ್ರಾರ್ಥಿಸಲಾಯಿತು.

See also  ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಗೆ ಮದ್ಯ ಬೆರೆಸಿದ್ರಾ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು