News Kannada
Sunday, September 25 2022

ಮೈಸೂರು

ಕೊರೋನ ವಿರುದ್ದ ಹೋರಾಟಕ್ಕೆ ಜನತೆಯ ಸಹಕಾರ ಬೇಕಿದೆ: ಡಿಸಿ ಅಭಿರಾಂ  ಶಂಕರ್‌   - 1 min read

Photo Credit :

ಕೊರೋನ ವಿರುದ್ದ ಹೋರಾಟಕ್ಕೆ ಜನತೆಯ ಸಹಕಾರ ಬೇಕಿದೆ: ಡಿಸಿ ಅಭಿರಾಂ  ಶಂಕರ್‌  

ಮೈಸೂರು: ಜಿಲ್ಲೆಯಲ್ಲಿ   ಹೋಂ ಕ್ವಾರೆಂಟೈನ್ ನಲ್ಲಿರುವ ಸಂಖ್ಯೆ ಹೆಚ್ಚುತ್ತಿದ್ದು ಜನತೆಯ ಮತ್ತು ಸಮಾಜದ ಸಹಕಾರ ಇನ್ನೂ ಹೆಚ್ಚೂ ಬೇಕಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

 ಇಂದು  ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಮೊದಲು ವರದಿಯಾಗಿದ್ದ ೯೦ ಸೋಂಕು ಪ್ರಕರಣಗಳು ಗುಣಮುಖವಾಗಿವೆ . ನಿನ್ನೆ  ಪಾಸಿಟಿವ್ ಬಂದ ಇನ್ನೊಬ್ಬ ವ್ಯಕ್ತಿ ಐರ್ಲ್ಯಾಂಡ್ ನಿಂದ ಬಂದಿದ್ದರು. ಆ ವ್ಯಕ್ತಿ ಆ್ಯಂಬುಲೆನ್ಸ್ ನಲ್ಲಿ ಬೆಂಗಳೂರು ಏರ್ ಪೋರ್ಟ್ ನಿಂದ ಆಸ್ಪತ್ರೆಗೆ ಬಂದಿದ್ದರು. ಇಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆಯಲ್ಲಿದ್ದಾಗ ಪಾಸಿಟಿವ್ ಬಂದಿದೆ. ಅವರು ಕ್ಲಿನಿಕಲ್ ಆಗಿ ಇಲ್ಲಿನ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆಯ ವೈದ್ಯರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಸೂಪರ್ ಸ್ಪೆಶಾಲಿಟಿ ಕೇರ್ ಬೇಕಾಗತ್ತೆ ಅಂತ ಅಲ್ಲಿ ಶಿಫ್ಟ್ ಮಾಡಿದ್ದಾರೆ. ಪಾಸಿಟಿವ್ ನಮ್ಮ ಜಿಲ್ಲೆಯಲ್ಲೇ ದಾಖಲಾಗಿದೆ. ಈಗ ಚಿಕಿತ್ಸೆ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

 

ಕೆಲವರ ಟೆಸ್ಟ್ ಆಗಿದೆ ಇವತ್ತು ಫಲಿತಾಂಶ ಬರಬಹುದು. ಹೋಂ ಕ್ವಾರೆಂಟೈನ್ ನಲ್ಲಿ ಇರುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. 500ಕ್ಕೂ ಹೆಚ್ಚು ಮಂದಿ ಇದ್ದಾರೆ. ಇನ್ಸಟಿಟ್ಯೂಶನ್ ನಲ್ಲಿ ಇರುವವರ ಸಂಖ್ಯೆ ಕಡಿಮೆ ಆಗಿದೆ. ಯಾಕೆಂದರೆ ಒಂದು ವಾರ ಇದ್ದು ಟೆಸ್ಟ್ ಮಾಡಿ ನೆಗೆಟಿವ್ ಬಂದರೆ ಹೋಂ ಕ್ವಾರೆಂಟೈನ್ ಮಾಡಬಹುದು ಎಂದು ಹೇಳಿರೋದರಿಂದ ನಮ್ಮಲ್ಲಿ ಹೋಂಕ್ವಾರೆಂಟೈನ್ ನಲ್ಲಿ ಇರುವವರ ಸಂಖ್ಯೆ ಜಾಸ್ತಿ ಆಗ್ತಿದೆ. ಅದಕ್ಕಾಗಿ ನಮ್ಮ ತಂಡಗಳಿಗೂ ತರಬೇತಿ ನೀಡಿದ್ದೇವೆ, ಗ್ರಾಮಾಂತರ ಪ್ರದೇಶಗಳಿಗೂ ಅಕ್ಕಪಕ್ಕದ ಮನೆಯಲ್ಲಿರುವವರು, ಬಡಾವಣೆಯಲ್ಲಿರುವವರು ಸ್ವಲ್ಪ ನಿಗಾ ಇಡಬೇಕಾಗಲಿದೆ. ಯಾರು ಕ್ವಾರೆಂಟೈನ್ ನಲ್ಲಿದ್ದಾರೆ ಅವರು ತಪ್ಪಿಸಿಕೊಂಡು ಓಡಾಡ್ತಿದ್ದಾರಾ? ಕ್ವಾರೆಂಟೈನ್ ನಲ್ಲಿ  ಇದ್ದಾರಾ ಎನ್ನುವುದು ಮುಖ್ಯ. ಈಗ ಜನರ ಮತ್ತು ಸಮಾಜದ ಸಹಕಾರ ಇನ್ನೂ ಹೆಚ್ಚಾಗುವಂತಹ ಸಮಯ ಬರುತ್ತಿದೆ. ಈಗ ಎಲ್ಲ ಕಡೆ ಸಡಿಲಿಕೆ ಆರಂಭವಾಗಿ ಓಡಾಟ ಆರಂಭವಾಗಿದ್ದು ಜಾಗೃತಿ ಇರಿಸಿಕೊಳ್ಳಬೇಕು ಎಂದರು.

 

ಲಾಕ್ ಡೌನ್  ಕುರಿತು ಪ್ರತಿಕ್ರಿಯಿಸಿದ ಅವರು ಸಡಿಲಿಕೆ ನಿಯಮಾವಳಿಗಳು  ಕೇಂದ್ರದಿಂದ ಬರತ್ತೆ.  ಕೇಂದ್ರದಿಂದ ಏನು ಬರಲಿದೆ ಅದು 100% ರಾಜ್ಯದಲ್ಲಿ ಅನ್ವಯವಾಗಬೇಕು ಎನ್ನುವುದೇನಿಲ್ಲ. ರಾಜ್ಯ ಸರ್ಕಾರದಿಂದ ನಮಗೆ ಅನುಕೂಲವಾಗುವಂತಹ ,ಪ್ರತ್ಯೇಕವಾದ ಕೆಲವು ವಿಚಾರಗಳನ್ನಿಟ್ಟುಕೊಂಡು ರಾಜ್ಯ ಸರ್ಕಾರದಲ್ಲೂ ತೀರ್ಮಾನ ತೆಗೆದುಕೊಳ್ತಾರೆ. ಬಹುಶಃ ಒಂದೆರಡು ದಿನಗಳು ಬೇಕಾಗಬಹುದು ಎಂದರು.

See also  ಕೊರೋನಾ ತಡೆಗೆ ತಿ.ನರಸೀಪುರದಲ್ಲಿ ಬಿಗಿ ಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು