News Kannada
Tuesday, September 27 2022

ಮೈಸೂರು

ಕನ್ನಡ ಚಿತ್ರರಂಗದ ಮೂವರು ಧ್ರುವತಾರೆಯರಿಗೆ ಗೌರವ - 1 min read

Photo Credit :

ಕನ್ನಡ ಚಿತ್ರರಂಗದ ಮೂವರು ಧ್ರುವತಾರೆಯರಿಗೆ ಗೌರವ

ಮೈಸೂರು: ಕನ್ನಡ ಚಿತ್ರರಂಗದ ಮೇರು ನಟರಾದ ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ಹಾಗೂ ರೆಬೆಲ್‍ಸ್ಟಾರ್ ಡಾ.ಅಂಬರೀಶ್ ಅವರ ಹೆಸರಿನಲ್ಲಿ ಎರಡು ಆನೆಗಳು ಹಾಗೂ ಸಾಹಸಸಿಂಹ  ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ಒಂದು ಸಿಂಹವನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆಯುವ ಮೂಲಕ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಈ ಮೂವರು ಧ್ರುವತಾರೆಯರಿಗೆ ಗೌರವ ಸೂಚಿಸಿದ್ದಾರೆ.

ಮೂರು ತಿಂಗಳ ಬಳಿಕ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಚಾಲನೆ ನೀಡಿದ ಸಚಿವರು, ಮೈಸೂರು ಮೂಲದ ಮೂವರು ನಟರಿಗೆ ಗೌರವ ಸೂಚಿಸಲು ಇದು ಸಕಾಲ. ಈ ನಿಟ್ಟಿನಲ್ಲಿ ಇವರ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆಯುತ್ತಿರುವುದಾಗಿ ತಿಳಿಸಿದರು.

ವರನಟ ಡಾ. ರಾಜ್ ಕುಮಾರ್ ಅವರ ಹೆಸರಿನಲ್ಲಿ ಇಂಡಿಯನ್ ಆನೆ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹೆಸರಿನಲ್ಲಿ ಆಫ್ರಿಕನ್ ಆನೆ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಒಂದು ಸಿಂಹವನ್ನು ಸಹಕಾರ ಸಚಿವರು ದತ್ತು ಪಡೆದಿದ್ದಾರೆ.

ಕೊರೊನಾ ಹಿನ್ನೆಲೆ ಮೂರು ತಿಂಗಳ ಕಾಲ ಲಾಕ್‍ಡೌನ್ ಆಗಿದ್ದರಿಂದ ಮೃಗಾಲಯಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಇಲ್ಲದೆ ಮೃಗಾಲಯಕ್ಕೆ ಆದಾಯ ಇರಲಿಲ್ಲ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವಿಲ್ಲದೆ ನಿರ್ವಹಣೆ ಮಾಡುವುದೂ ಕಷ್ಟಕರವಾಗಿದ್ದ ಸನ್ನಿವೇಶದಲ್ಲಿ ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಸಚಿವರು ಸ್ಪಂದಿಸಿದ ರೀತಿ ನಿಜಕ್ಕೂ ಮಾದರಿ. ಸಚಿವರು ಈಗಾಗಲೇ ಅವರ ಕ್ಷೇತ್ರದ ಜನತೆಯಿಂದ, ಆಪ್ತರಿಂದ ಹಾಗೂ ಜನಪ್ರತಿನಿಧಿಗಳಿಂದ ಮೃಗಾಲಯಕ್ಕೆ ಒಟ್ಟು 3.23 ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ಹಸ್ತಾಂತರಿಸಿದಂತಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿದರು.

ಅಮೆರಿಕದ ಅಕ್ಕ ಸಂಸ್ಥೆಯಿಂದ ಮೃಗಾಲಯದ ನಿರ್ವಹಣೆಗೆಂದು ಒಟ್ಟು 40 ಲಕ್ಷ ರೂಪಾಯಿ ಒದಗಿಸಿದ್ದು, ಸೋಮವಾರ 25 ಲಕ್ಷ ರೂಗಳ ಚೆಕ್ ಅನ್ನು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ಅಕ್ಕ ಸಂಘಟನೆಯ ಮಾಜಿ ಅಧ್ಯಕ್ಷರಾದ ಶಿವಮೂರ್ತಿ ಕೀಲಾರ ಅವರು ಮೃಗಾಲಯಕ್ಕೆ ಹಸ್ತಾಂತರಿಸಿದರು.

ಸಂಕಷ್ಟದ ಕಾಲದಲ್ಲಿ ಮೃಗಾಲಯಕ್ಕೆ 3.23 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿಕೊಟ್ಟಂತಹ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಗೆ ಗೌರವಾರ್ಥವಾಗಿ ಅವರ ಹೆಸರಿನಲ್ಲಿ ಮೃಗಾಲಯದ ಮುಖ್ಯ ಪ್ರವೇಶದ್ವಾರದ ಎದುರು ಫಲಕವೊಂದನ್ನು ನಿರ್ಮಾಣ ಮಾಡಲಾಗಿದೆ. ಅದನ್ನು ಮೃಗಾಲಯದ ಪುನಾರಂಭಗೊಳಿಸುವ ಸಂದರ್ಭದಲ್ಲಿ ಖ್ಯಾತನ ಚಿತ್ರನಟಿ ಹಾಗೂ ಸಂಸದರಾದ ಸುಮಲತಾ ಅವರು ಈ ಫಲಕ ಅನಾವರಣ ಮಾಡಿದರು.

ಮೃಗಾಲಯದ ಪ್ರವೇಶದ್ವಾರ ಬಳಿಯ ಚಾಮುಂಡೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರಾದ ಸುಮಲತಾ ಅಂಬರೀಶ್ ಅವರು, ಬಳಿಕ ಮೃಗಾಲಯ ಪುನಾರಂಭಕ್ಕೆ ಚಾಲನೆ ನೀಡಿದರು.

ಇತ್ತೀಚೆಗೆ ಜನಿಸಿದ ಜಿರಾಫೆ ಮರಿಗಳಿಗೆ ಇದೇ ವೇಳೆ ಆದ್ಯಯಧುವೀರ ಹಾಗೂ ಬಾಲಾಜಿ ಎಂದು ನಾಮಕರಣ ಮಾಡಲಾಯಿತು. ನಾಮಫಲಕವನ್ನು ಸಚಿವರಾದ ಸೋಮಶೇಖರ್ ಹಾಗೂ ಸಂಸದರಾದ ಸುಮಲತಾ ಅಂಬರೀಶ್ ಪ್ರದರ್ಶನ ಮಾಡಿದರು.

See also  ಪೊಲೀಸ್ ವಸತಿಗೃಹದಲ್ಲಿ ಸಿಲಿಂಡರ್ ಸ್ಪೋಟ: ತಪ್ಪಿದ ಅನಾಹುತ

ಅಪರೂಪದ ತಳಿಯಾಗಿರುವ ಬಿಳಿ ಹುಲಿ ಸಂಚರಿಸಲು ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಲಾಗಿರುವ ಎನ್‍ಕ್ಲೋಶರ್ ಅನ್ನು ಸಚಿವರು ಹಸಿರು ಬಾವುಟ ತೋರ್ಪಡಿಸುವ ಮೂಲಕ ಅನಾವರಣಗೊಳಿಸಿದರು. ಇಲ್ಲಿ ಪ್ರಸ್ತುತ ಸಾರಾ ಎಂಬ ಹೆಣ್ಣು ಬಿಳಿ ಹುಲಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು