News Kannada
Sunday, September 25 2022

ಮೈಸೂರು

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತರ ಮರಣ ಶಾಸನ! - 1 min read

Photo Credit :

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತರ ಮರಣ ಶಾಸನ!

ಮೈಸೂರು: ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತರಿಗೆ ಬರೆದ ಮರಣಶಾಸನವಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ 1978ರ ಭೂ ಸುಧಾರಣೆ ಕಾಯ್ದೆ 79ಂ ಮತ್ತು 79 ಕಾಯ್ದೆಯನ್ನು ತಿದ್ದುಪಡಿ ಮಾಡಿ ಯಾರು ಬೇಕಾದರೂ ಯಾವ ಉದ್ದೇಶಕ್ಕಾದರೂ, ಎಷ್ಟು ಬೇಕಾದರೂ ಕೃಷಿ ಭೂಮಿಯನ್ನು ಖರೀದಿ ಮಾಡಬಹುದು ಎಂದು ತಿದ್ದುಪಡಿ ಮಾಡಿ ಶಾಸನ ರೂಪಿಸಲು ಮುಂದಾಗಿರುವುದು ರೈತರ ಮರಣಶಾಸನ ಬರೆದಂತಾಗಿದೆ ಎಂದಿದ್ದಾರೆ.

 

ವಿರೋಧಪಕ್ಷದಲ್ಲಿದಾಗ ಈ ಕಾಯ್ದೆ ತಿದ್ದುಪಡಿಗೆ ವಿರೋಧ ಮಾಡಿದ ಬಿ.ಎಸ್ ಯಡಿಯೂರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಈಗಾಗಲೇ ದೊಡ್ಡ ದೊಡ್ಡ ನಗರಗಳಾದ ಬೆಂಗಳೂರು-ಮೈಸೂರ್, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗ, ಬೆಳಗಾವಿ, ಕೋಲಾರ ನಗರಗಳ ಸುತ್ತಮುತ್ತ 20 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಕೃಷಿಭೂಮಿ ಈಗಾಗಲೇ ಪಾಳು ಭೂಮಿಯಾಗಿದೆ. ಇದರಿಂದ ಕೃಷಿ ಉತ್ಪಾದನೆ ಕುಂಠಿತವಾಗಿದೆ, ಹೊಸ ಕಾಯ್ದೆ ಜಾರಿಯಾದರೆ ಸಣ್ಣ ಸಣ್ಣ ರೈತರು ಹಣದಾಸೆಗಾಗಿ ಜಮೀನು ಮಾರಿ ನಗರಗಳಿಗೆ ಕೂಲಿ ಕೆಲಸಕ್ಕಾಗಿ ಹೋಗುವಂತಾಗುತ್ತದೆ. ಕಾಪೆರ್Çರೇಟ್ ಕೃಷಿ ಉದ್ಯಮ, ರಿಯಲ್ ಎಸ್ಟೇಟ್ ಉದ್ದಿಮೆ ನಿರಾತಂಕವಾಗಿ ಮುಂದುವರೆಯುತ್ತದೆ. ರೈತರನ್ನು ಒಕ್ಕಲೆಬ್ಬಿಸುವ ಈ ತಂತ್ರಗಾರಿಕೆ ಕಾನೂನು ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ, ಇಂದಿನ ಸರ್ಕಾರ ಶ್ರೀಮಂತರ, ಉದ್ಯಮಿಗಳ, ಕಾಪೆರ್Çರೇಟ್ ಸಂಸ್ಥೆಗಳ, ಹಿತ ರಕ್ಷಣೆಗಾಗಿ ಕಾನೂನುಗಳನ್ನು ರೂಪಿಸುವ ಕಾರ್ಯಕ್ಕೆ ಮುಂದಾಗಿರುವುದು ರೈತ ದ್ರೋಹಿ ಕಾರ್ಯವಾಗಿದೆ ಎಂದು ದೂರಿದ್ದಾರೆ.

 

ಇನ್ನು ಕಾವೇರಿ ನದಿ ನೀರು ಪ್ರಾಧಿಕಾರ ತಮಿಳುನಾಡಿಗೆ 41 ಟಿಎಂಸಿ ನೀರು ಬಿಡಬೇಕೆಂದು ಸೂಚಿಸಿರುವುದು ಅವೈಜ್ಞಾನಿಕವಾಗಿದೆ ಮೆಟ್ಟೂರು ಜಲಾಶಯದಲ್ಲಿ ಪ್ರಸ್ತುತ 110 ಆಡಿ ನೀರು ಇದ್ದರೂ ಸಹ ಪ್ರಸಕ್ತ ಸಾಲಿನ ನೀರು ಬಿಡುವಂತೆ ಆದೇಶಿಸಿರುವುದು ಸರಿಯಲ್ಲ. ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ಮಳೆ ಬಂದು ಜಲಾಶಯ ಪೂರ್ತಿಯಾದ ನಂತರ ನೀರು ಬಿಟ್ಟರೆ ಯಾರಿಗೂ ತೊಂದರೆ ಇಲ್ಲ. ಆದರೆ ನೀರು ಖಾಲಿ ಮಾಡಿ ಮಳೆ ಬಾರದಿದ್ದರೆ ಕುಡಿಯೋ ನೀರಿನ ಸಮಸ್ಯೆ ಆಗುತ್ತದೆ. ಆಗ ಹೇಗೆ ನಿಭಾಯಿಸುವುದು? ಎಂದು ಪ್ರಶ್ನಿಸಿರುವ ಅವರು ಇಂಥ ವಿಚಾರಗಳನ್ನು ಕಾವೇರಿ ಪ್ರಾಧಿಕಾರ ಚಿಂತನೆ ನಡೆಸಿ ಸೂಚನೆ ನೀಡಬೇಕು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಸೂಚನೆಯನ್ನು ಪಾಲಿಸಬಾರದು. ಕೆಆರ್‍ಎಸ್‍ನಿಂದ ನೀರು ಬಿಡಬಾರದು. ಇದರಲ್ಲಿ ನಿರ್ಲಕ್ಷ್ಯ ಮಾಡಿದರೆ ರೈತರು ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ

See also  ನಾಡಹಬ್ಬ ದಸರಾಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು