News Kannada
Friday, September 30 2022

ಮೈಸೂರು

ಆಟ ನಿಲ್ಲಿಸಿದ  ಮೈಸೂರಿನ  ಹಳೆಯ ಉತ್ತಮ ಚಿತ್ರಮಂದಿರ  - 1 min read

Photo Credit :

ಆಟ ನಿಲ್ಲಿಸಿದ  ಮೈಸೂರಿನ  ಹಳೆಯ ಉತ್ತಮ ಚಿತ್ರಮಂದಿರ 

ಮೈಸೂರು:  ನಗರದ ಉತ್ತಮ   ಮನರಂಜನಾ ಕೇಂದ್ರವಾಗಿ ಮನೆ ಮಾತಾಗಿದ್ದ ಶಾಂತಲಾ ಚಿತ್ರಮಂದಿರ ಈಗ ತನ್ನ ಆಟ ನಿಲ್ಲಿಸಿದೆ. ಶಾಂತಲಾ ಚಿತ್ರಮಂದಿರವನ್ನು ಬಂದ್ ಮಾಡುವ ನಿರ್ಧಾರಕ್ಕೆ ಮಾಲೀಕರು ಬಂದಿದ್ದಾರೆ.

 

ಶಾಂತಲಾ ಚಿತ್ರಮಂದಿರ ಶುರುವಾದದ್ದು ಸುಮಾರು 46 ವರ್ಷಗಳ ಹಿಂದೆ ೧೯೭೪ ರಲ್ಲಿ . ನಗರದ ಹೃದಯ ಭಾಗವಾದ  ಚಾಮರಾಜ  ಜೋಡಿ ರಸ್ತೆಯಲ್ಲೆ  ಇದ್ದ ಖಾಲಿ  ಜಾಗವನ್ನು ಭೋಗ್ಯಕ್ಕೆ ಪಡೆದು ಚಿತ್ರಮಂದಿರವನ್ನು ಆರಂಭಿಸಲಾಗಿತ್ತು. ಆಗಿನಿಂದ ಈಗಿನವರೆಗೂ ಭೋಗ್ಯದ ಜಾಗದಲ್ಲೇ ಚಿತ್ರಮಂದಿರ ನಡೆಯುತ್ತಿತ್ತು. ಈಗ ಭೋಗ್ಯದ ಅವಧಿ ಮುಗಿದಿದ್ದು, ಮುಂದೆ ಆ ಜಾಗವನ್ನು ಬೇರೆ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು ಎಂದು ಜಾಗದ ಮಾಲೀಕರು ಹೇಳಿದ ಕಾರಣ ಶಾಂತಲಾ ಚಿತ್ರಮಂದಿರದ ಮಾಲೀಕರು ಚಿತ್ರ ಪ್ರದರ್ಶನ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ʻಈಗ ಚಿತ್ರಪ್ರದರ್ಶನ ನಡೆಯುತ್ತಿಲ್ಲ, ಆದಾಯ ಬರುತ್ತಿಲ್ಲ. ವಿದ್ಯುತ್ ಶುಲ್ಕ, ನಿರ್ವಹಣೆ ಶುಲ್ಕ ಮತ್ತಿತರ ಶುಲ್ಕಗಳನ್ನು ಪಾವತಿಸಲು ಹಣ ಸಾಲುತ್ತಿಲ್ಲ. ಸಿಬ್ಬಂದಿಗೆ ಸಂಬಳ, ಚಿತ್ರಮಂದಿರದ ನಿರ್ವಹಣೆ, ಬಾಡಿಗೆ, ಕಂದಾಯ ಕಟ್ಟಲು ಹಣದ ಕೊರತೆ ಎದುರಾಗಿದೆ. ಈ ತಿಂಗಳು ಸಂಬಳ ಕೊಟ್ಟು ಬಂದ್ ಮಾಡುತ್ತೇವೆ. ಇನ್ನು ಮುಂದೆಯಂತೂ ಮತ್ತೆ ಚಿತ್ರಮಂದಿರ ಆರಂಭಿಸುವ ಯೋಚನೆ ಇಲ್ಲ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಆರಂಭಿಸಿದರೂ ಲಾಭವಿಲ್ಲʼ ಎನ್ನುತ್ತಾರೆ ಶಾಂತಲಾ ಚಿತ್ರಮಂದಿರದ ಮಾಲೀಕ ಎನ್.ಪಿ.ಪದಕಿ.

ದಶಕಗಳಿಂದ ಮೈಸೂರಿನಲ್ಲಿದ್ದು, ಮಲ್ಟಿಪ್ಲೆಕ್ಸ್‌ಗಳು ಬರುವ ಮುನ್ನ ಚಿತ್ರಮಂದಿಗಳಲ್ಲಿ ಚಲನಚಿತ್ರಗಳನ್ನು ಆಸ್ವಾದಿಸುತ್ತಿದ್ದ ಸಿನಿಪ್ರಿಯರು ಚಿತ್ರಮಂದಿರ ಮುಚ್ಚುತ್ತಿರುವ ಸುದ್ದಿ ಕೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಹಲವು ಹಿರಿಯರು ತಾವು ಸಾಲಿನಲ್ಲಿ ನಿಂತು ನೂಕುನುಗ್ಗಲಿನಲ್ಲಿ ಟಿಕೆಟ್ ಪಡೆದು ಚಿತ್ರ ನೋಡುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ದಶಕಗಳ ಕಾಲ ಜನರನ್ನು ಮನರಂಜಿಸಿ ಜನರ ಮನೆಮಾತಾಗಿದ್ದ ಚಿತ್ರಮಂದಿರ ಈಗ ಇತಿಹಾಸದ ಪುಟ ಸೇರುತ್ತಿರುವುದು ವಿಷಾದನೀಯ.

ಚಿತ್ರಮಂದಿರಗಳ ಮಾಲೀಕರಿಗೆ ಈಗಾಗಲೇ ಸಾಕಷ್ಟು ಸಮಸ್ಯೆಗಳಿವೆ. ಲಾಕ್‌ಡೌನ್‌ನಿಂದಾಗಿ ಹೊರೆ ಮತ್ತೂ ಹೆಚ್ಚಾಗಿದೆ. ಶಾಂತಲಾ ಚಿತ್ರಮಂದಿರವನ್ನು ಅನಿವಾರ್ಯವಾಗಿ ಮುಚ್ಚಬೇಕಾದ ಪರಿಸ್ಥಿತಿ ಬಂದಿದೆ. ಮೈಸೂರು ನಗರಪಾಲಿಕೆಗೆ ಸಾಕಷ್ಟು ಬಾರಿ ನಾವು ಮನವಿ ಮಾಡಿದ್ದೇವೆ. ನಮ್ಮ ಆರ್ಥಿಕ ಸಂಕಷ್ಟ ಬಗೆಹರಿಯುವ ಕಾಲ ಇನ್ನೂ ಒದಗಿಲ್ಲ ಎಂದು   ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಉಪಾದ್ಯಕ್ಷ  ಎಂ ಆರ್‌ ರಾಜಾರಾಂ ಹೇಳುತ್ತಾರೆ

See also  ಲೋಕಾಯುಕ್ತ ಉಳಿಸಿ: ಸಿಎಂಗೆ ತಲೆ ಕೂದಲು ಪರ್ಸಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು