News Kannada
Sunday, October 02 2022

ಮೈಸೂರು

ಕೊರೋನಾ ತಡೆಗೆ ತಿ.ನರಸೀಪುರದಲ್ಲಿ ಬಿಗಿ ಕ್ರಮ - 1 min read

Photo Credit :

ಕೊರೋನಾ ತಡೆಗೆ ತಿ.ನರಸೀಪುರದಲ್ಲಿ ಬಿಗಿ ಕ್ರಮ

ತಿ.ನರಸೀಪುರ:  ಕೊರೋನಾ ಪ್ರಕರಣ ವ್ಯಾಪಕ ರೀತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ತಿ.ನರಸೀಪುರ ಪುರಸಭಾ ವ್ಯಾಪ್ತಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಪುರಸಭಾ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ನಡೆಸುವ ವರ್ತಕರು, ಬೀದಿ ಬದಿ ವ್ಯಾಪಾರಿಗಳು ಕಡ್ಡಾಯವಾಗಿ ಕೋವಿಡ್-19 ನಿಯಮ ಪಾಲಿಸಬೇಕು, ಸಾರ್ವಜನಿಕರು ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕೆ ಹೊರತು ಅನಾವಶ್ಯಕ ಓಡಾಟ ಮಾಡಬಾರದೆಂದು ಪುರಸಭಾ ಮುಖ್ಯಾಧಿಕಾರಿ ಆರ್.ಅಶೋಕ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕೊರೋನಾ  ಪಾಸಿಟಿವ್ ಇಲ್ಲದೆ  ಹಸಿರು ವಲಯದಲ್ಲಿದ್ದ ನರಸೀಪುರ ತಾಲ್ಲೂಕು ಇದೀಗ ಕೊರೋನಾ ವೈರಸ್ ಸೊಂಕಿನ ಪಟ್ಟಿಯಲ್ಲಿ ಖಾತೆ ತೆರದಿದ್ದು ಇದು ಮುಂದುವರೆಯಲು ಬಿಡದ ರೀತಿಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಮನವಿ ಮಾಡಿದ ಅವರು, ಪಟ್ಟಣ ಮತ್ತು ಪುರಸಭಾ ವ್ಯಾಪ್ತಿಯಲ್ಲಿ ದಿನಸಿ ಅಂಗಡಿ, ಹೋಟೆಲ್ ಉದ್ದಿಮೆ ನಡೆಸುವವರು ತಮ್ಮ ಸ್ಥಳಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ತಮ್ಮ ಬಳಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರನ್ನು ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಬೇಕು. ಕೆಲಸಗಾರರು ಮಾಸ್ಕ್ ಮತ್ತು ಕೈ ಗ್ಲೌವ್ಸ್ ಗಳನ್ನು ಧರಿಸಿರುವಂತೆ ನೋಡಿಕೊಳ್ಳಬೇಕು. ತಮ್ಮ ಅಂಗಡಿ ಮತ್ತು ಹೋಟೆಲ್ ಬಳಿ ಗ್ರಾಹಕರ ಬಳಕೆಗೆ ಸ್ಯಾನಿಟೈಜರ್ ಇಡಬೇಕು ಹಾಗೂ ಸಾಮಾಜಿಕ ಅಂತರಕ್ಕೆ ಒತ್ತು ನೀಡುವುದರ ಜೊತೆಗೆ ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕೆಂದರು.

ಕ್ಷೌರಿಕ ಅಂಗಡಿ ಮಾಲೀಕರು ಹಾಗೂ ಅಂಗಡಿಯಲ್ಲಿ ಕ್ಷೌರಿಕ ವೃತ್ತಿ ಮಾಡುವವರು ಕೈ ಗ್ಲೌವ್, ಎನ್.95 ಮಾಸ್ಕ್   ಧರಿಸಬೇಕು ಸಾಧ್ಯವಿದ್ದಲ್ಲಿ ಆಸ್ಪತ್ರೆ ಮಾದರಿಯ ಗೌನ್ ಬಳಸಿದರೆ ಇನ್ನು ಉತ್ತಮವಾಗಿರುತ್ತದೆ. ಕ್ಷೌರಕ್ಕೆ ಬರುವವರಿಗೆ ಮಾಸ್ಕ್ ಧರಿಸಿ ಬರವಂತೆ ಅಲ್ಲದೆ ತಾವೇ ಸ್ವತಃ ಬಟ್ಟೆಯನ್ನು ತರುವಂತೆ ಹೇಳಬೇಕು ಹಾಗೂ ಸಾಮಾಜಿಕ ದೈಹಿಕ ಅಂತರ ಕಾಪಾಡಿಕೊಂಡು ಕ್ಷೌರ ಮಾಡಬೇಕು ಎಂದರು.

ರಸ್ತೆ ಬದಿಗಳಲ್ಲಿ ಫಾಸ್ಟ್ ಫುಡ್ ವ್ಯಾಪಾರ ಮಾಡುವವರು ಹಾಗೂ ಪುಟ್ ಪಾತ್ ಚಾಟ್ಸ್ ಸೆಂಟರ್ ಗಳಲ್ಲಿ ಸ್ವಚ್ಛತೆ ಮತ್ತು ಕೋವಿಡ್ 19 ನಿಯಮ ಪಾಲನೆ ಮಾಡುವುದು ತುಂಬಾ ತ್ರಾಸದಾಯಕವಾಗಿರುವುದರಿಂದ ತಾತ್ಕಾಲಿಕವಾಗಿ ಈ ವ್ಯಾಪಾರಗಳನ್ನು ನಿಲ್ಲಿಸಲು ಪುರಸಭೆ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದರು. ತೀರ ಅವಶ್ಯಕತೆ ಉಳ್ಳವರು ಕಚೇರಿಗಳಿಗೆ ಬಂದು ತಮ್ಮ ಕೆಲಸಗಳನ್ನು ಮಾಡಿಸಿಕೊಂಡು ಹೋಗಬೇಕು ಹಾಗೂ ಸಾಮಾನ್ಯ ಜನರು ಸಹ ಅನಾವಶ್ಯಕವಾಗಿ ಪಟ್ಟಣದತ್ತ ಬರಬಾರದು ಗರ್ಭಿಣಿಯರು, ವಯೋ ವೃದ್ದರು ಹಾಗೂ ಸಣ್ಣ ಮಕ್ಕಳು ಮನೆಯಿಂದ ಹೊರ ಬರ ಬಾರದು ಎಂದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಅನಾವಶ್ಯಕವಾಗಿ ಜನರು ಗುಂಪು ಗೂಡುವುದರಿಂದ ಹಾಗೂ ಬಸ್‍ಗಳು ಅನಾವಶ್ಯಕವಾಗಿ ನಿಲ್ಲಿಸುವುದರಿಂದ ಖಾಸಗಿ ಬಸ್ ನಿಲ್ದಾಣದ ಪ್ರವೇಶವನ್ನು ಬ್ಯಾರಿಕೇಡ್ ನಿಂದ ಮುಚ್ಚಿ ಪ್ರವೇಶ ನಿಲ್ಲಿಸಲಾಗುವುದು ಎಂದರು.  ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುವವರಿಗೆ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸಲಾಗುದು. ಸಾರ್ವಜನಿಕರು ಸಹ ಮಾಸ್ಕ್ ಧರಿಸಿದ ಪಟ್ಟಣ ಪ್ರವೇಶ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

See also  ಹನುಮನ ಮೆರವಣಿಗೆ ಮಾಡಿಯೇ ಸಿದ್ಧ: ಪ್ರತಾಪ ಸಿಂಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು