News Kannada
Thursday, October 06 2022

ಮೈಸೂರು

ಕೃಷಿ ಸಾಲ ಬಡ್ಡಿ ಮನ್ನಾ ಯೋಜನೆ ಅವಧಿ ವಿಸ್ತರಣೆಗೆ ಮನವಿ - 1 min read

Photo Credit :

ಕೃಷಿ ಸಾಲ ಬಡ್ಡಿ ಮನ್ನಾ ಯೋಜನೆ ಅವಧಿ ವಿಸ್ತರಣೆಗೆ ಮನವಿ

ಮೈಸೂರು: ರಾಜ್ಯದ ಭೂ ಅಭಿವೃದ್ಧಿ ಬ್ಯಾಂಕ್‍ಗಳಲ್ಲಿ ಕೃಷಿ ಸಾಲ ಪಡೆದಿದ್ದ ರೈತರಿಗೆ ಬಡ್ಡಿ ಮನ್ನಾ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ರೈತರು ಕೊರೋನಾ ಸಂಕಷ್ಟದಲ್ಲಿ ಸಿಲುಕಿರುವ ಕಾರಣ ಸಾಲದ ಅಸಲು ಮತ್ತು ಬಡ್ಡಿ ಪಾವತಿಸಲು ಸಾಧ್ಯವಾಗುತ್ತಿಲ್ಲದ ಕಾರಣ ಈ ಯೋಜನೆಯ ಅವಧಿಯನ್ನು 2021ರ ಮಾರ್ಚ್ 31ರ ತನಕ ಮುಂದೂಡುವಂತೆ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್‍ ಗೆ ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿಯ ಮುಖಂಡ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮನವಿ ಸಲ್ಲಿಸಿದ್ದಾರೆ.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಸಚಿವರನ್ನು ಭೇಟಿ ಮಾಡಿ ಒತ್ತಾಯ ಪತ್ರ ಸಲ್ಲಿಸಿದರು. ಒತ್ತಾಯ ಪತ್ರ ಸ್ವೀಕರಿಸಿದ ಸಚಿವ ಸೋಮಶೇಖರ್ ಮಾತನಾಡಿ ಆಗಸ್ಟ್ 31ರ ತನಕ ಈಗಾಗಲೇ ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ಅವಧಿ ವಿಸ್ತ್ತರಿಸಿದೆ. ಆದರೆ ಡಿಸೆಂಬರ್ ತನಕ ವಿಸ್ತರಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು. ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಮಾಡಬಾರದು ರೈತರಿಗೆ ಮಾರಕವಾಗುತ್ತದೆ. ಈ ಬಗ್ಗೆ ಸರ್ಕಾರದ ನಿರ್ಧಾರ ಬದಲಿಸಬೇಕು ಎಂದು ಒತ್ತಾಯಿಸಿದಾಗ ಈಗಾಗಲೇ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ. ಸಾಧಕ-ಬಾಧಕಗಳ ಚರ್ಚಿಸಿ ಕೃಷಿ ಕ್ಷೇತ್ರಕ್ಕೆ ತೊಂದರೆ ಬಾರದಂತೆ ಮತ್ತೊಂದು ಭಾರಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದರು.

ಇದೇ ವೇಳೆ ಎಪಿಎಂಸಿ ತಿದ್ದುಪಡಿ ಕಾಯ್ದೆಯಲ್ಲಿ ಹಲವಾರು ಲೋಪದೋಷಗಳಿವೆ ಮುಂದಿನ ದಿನಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರೈತರನ್ನು ರಕ್ಷಿಸುವ ಯಾವುದೇ ಕ್ರಮಗಳು ಈ ಕಾಯ್ದೆಯಲ್ಲಿಲ್ಲ ಅದಕ್ಕಾಗಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಬಾರದು. ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಖಾಸಗೀಕರಣ ಮಾಡಲು ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇಳಿರುವುದರಿಂದ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಖಾಸಗೀಕರಣವಾದರೆ ರೈತರ ಪಂಪ್‍ಸೆಟ್‍ಗಳಿಗೆ ನೀಡುವ ಉಚಿತ ವಿದ್ಯುತ್ ನಿಲ್ಲಿಸಿ ಮೀಟರ್ ಅಳವಡಿಸಲಾಗುತ್ತದೆ. ಆಗ ರೈತರು ಕೃಷಿ ಮಾಡುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಆದ್ದರಿಂದ ಕೇಂದ್ರದ ನಿರ್ಧಾರವನ್ನು ವಿರೋಧಿಸಬೇಕು ಎಂದು ಕುರುಬೂರ್ ಶಾಂತಕುಮಾರ್ ಸಚಿವರಿಗೆ ತಿಳಿಸಿದರು.

 ರೈತ ಮುಖಂಡರಾದ  ಅತ್ತಹಳ್ಳಿದೇವರಾಜ್, ಹಳ್ಳಿಕೆರೆಹುಂಡಿಭಾಗ್ಯರಾಜ್, ಬರಡನಪುರನಾಗರಾಜ್, ರೇವಣ್ಣ, ರಾಮೇಗೌಡ, ವೆಂಕಟೇಶ್, ರಾಜು, ಮಂಜುನಾಥ್, ಆರ್.ಕೆ.ಧನಂಜಯ್‍ಕುಮಾರ್ ಇನ್ನು ಮುಂತಾದವರಿದ್ದರು. 

See also  ಖೇಣಿ ಸೇರ್ಪಡೆ ಕಾಂಗ್ರೆಸ್ ನ ಅವನತಿ: ಬಿಎಸ್ ವೈ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು