News Kannada
Sunday, September 25 2022

ಮೈಸೂರು

ಮೈಸೂರಿನಲ್ಲಿ 300ರ ಗಡಿದಾಟಿದ ಕೊರೋನಾ ಪ್ರಕರಣ - 1 min read

Photo Credit :

ಮೈಸೂರಿನಲ್ಲಿ 300ರ ಗಡಿದಾಟಿದ ಕೊರೋನಾ ಪ್ರಕರಣ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾಮಾರಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬುಧವಾರ ಒಂದೇ ದಿನ 51 ಮಂದಿಗೆ ಸೋಂಕು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 300ರ ಗಡಿದಾಟಿರುವುದು ಜನ ಬೆಚ್ಚಿ ಬೀಳುವಂತೆ ಮಾಡಿದೆ.

ಇದೀಗ ದಾಖಲಾದ ಪ್ರಕರಣಗಳನ್ನು ಗಮನಿಸಿದರೆ ಪ್ರಾಥಮಿಕ ಸಂಪರ್ಕದಿಂದ 20, ಬೆಂಗಳೂರಿನ ಪ್ರವಾಸದ ಹಿನ್ನೆಲೆ ಹೊಂದಿರುವ 21 ಕೆಎಸ್ಆರ್ ಪಿ ಫೋಲೀಸ್ ಸಿಬ್ಬಂದಿ, ಅಂತರರಾಜ್ಯ ಪ್ರವಾಸದ ಹಿನ್ನೆಲೆ ಹೊಂದಿರುವ ಓರ್ವ, ಅಂತರಜಿಲ್ಲಾ ಪ್ರವಾಸ ಮಾಡಿದ್ದ ಮೂವರು ಹಾಗೂ 6 ಐಎಲ್ಐ, ಸರಿ ಪ್ರಕರಣಗಳಾಗಿವೆ. ಸೋಂಕಿತರÀಲ್ಲಿ ಕೆಎಎಸ್ ಅಧಿಕಾರಿಯ ಮಗಳು ಹಾಗೂ 2 ವರ್ಷದ ಮಗುವೂ ಸೇರಿದೆ. ಸೋಂಕಿತರೆಲ್ಲರೂ ಕ್ವಾರಂಟೈನ್‍ನಲ್ಲಿದ್ದರು. ಹೀಗಾಗಿ ಹೆಚ್ಚಿನ ಆತಂಕ ಪಡುವ ಅಗತ್ಯ ಇಲ್ಲ.

ಎನ್.ಆರ್.ಮೊಹಲ್ಲಾದ ಕೆಸರೆಯ ಕೆಇಬಿ ಕ್ವಾಟ್ರಸ್, ಪಿರಿಯಾಪಟ್ಟಣದ ಜ್ಯೋತಿನಗರದಲ್ಲಿ 2, ವಿಶ್ವೇಶ್ವರನಗರ ತಪೆÇೀವನ ಅಪಾರ್ಟ್‍ಮೆಂಟ್‍ನಲ್ಲಿ 6, ಯಾದವಗಿರಿ 1ನೇ ಮುಖ್ಯ ರಸ್ತೆ, ಕ್ರಿಶ್ಚಿಯನ್ ಕಾಲೋನಿ ಎರಡನೇ ಹಂತ, ರಜನಿ ನಗರ್, ಕುವೆಂಪುನಗರ 1ನೇ ಕ್ರಾಸ್, ರಾಜೀವ್‍ನಗರದ ಎಂಎಂಸಿ ಪದವಿಪೂರ್ವ ಪುರುಷರ ಹಾಸ್ಟೆಲ್ ನಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ನಂಜನಗೂಡು ತಾಲೂಕಿನ ಹುರ ಗ್ರಾಮದಲ್ಲಿ 3, ಚಾಮಲಾಪುರದಹುಂಡಿಯಲ್ಲಿ 5, ದೇವರಸನಹಳ್ಳಿ 1, ದೇವಿನಕೇರಿ ಗ್ರಾಮದಲ್ಲಿ 1 ಹುಣಸೂರಿನ ದಳಲಕೊಪ್ಪಲು, ಕೆ.ಆರ್.ನಗರದ ಸಾಲಿಗ್ರಾಮ ಮತ್ತು ವಾಸು ಲೇಔಟ್ ಹಾಗೂ ಮೈಸೂರಿನ ರಾಮಕೃಷ್ಣನಗರದಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣ ದಾಖಲಾಗಿದೆ. ಪಶ್ಚಿಮ ಬಂಗಾಳದಿಂದ ವಾಪಸ್ಸಾಗಿದ್ದ ಹೆಬ್ಬಾಳದ ಬಸವನಗುಡಿಯ ವ್ಯಕ್ತಿಗೂ ಸೋಂಕು ತಗುಲಿದೆ. ಸೋಂಕಿತರೆಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದುವರೆಗೂ ಮೈಸೂರಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಸೋಂಕಿನ ಪ್ರಕರಣಗಳು ದಾಖಲಾಗುತ್ತಿದ್ದವು. ಪ್ರತಿದಿನ ಹೊಸ ಪ್ರಕರಣ ದಾಖಲಾದರೂ 30ರ ಗಡಿ ದಾಟಿರಲಿಲ್ಲ. ಒಂದೇ ದಿನ 26 ಪ್ರಕರಣ ದಾಖಲಾಗಿ ಅಧಿಕವಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಒಂದೇ ದಿನ 51 ಮಂದಿಗೆ ಪಾಸಿಟಿವ್ ಆಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 321ಕ್ಕೆ ಏರಿಕೆಯಾಗಿದೆ. ಇಂದು 13 ಮಂದಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ 191ಕ್ಕೆ ಏರಿಕೆಯಾದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 127ಕ್ಕೆ ಏರಿಕೆಯಾಗಿದೆ.

ಇಲ್ಲಿತನಕ 12622 ಮಂದಿಯನ್ನು ಕ್ವಾರಂಟೈನ್ ಮಾಡಿದ್ದು, 9603 ಮಂದಿ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 2772 ಮಂದಿ 14 ದಿನಗಳ ಕ್ವಾರಂಟೈನ್ ನಲ್ಲಿದ್ದರೆ, 120 ಮಂದಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದಾರೆ. 127 ಸಕ್ರಿಯ ಪ್ರಕರಣಗಳಲ್ಲಿ 126 ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ, ಓರ್ವ ಸೋಂಕಿತ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 20531 ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಿದ್ದು, 20210 ನೆಗೆಟಿವ್ ಬಂದಿದೆ. 321 ಪಾಸಿಟವ್ ಆಗಿದ್ದು, 191 ಮಂದಿ ಗುಣಮುಖರಾಗಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ.

See also  ನಮ್ಮ ಸಂಸ್ಕೃತಿಯನ್ನು ಇಂದಿನ ಹಾಗೂ ಮುಂದಿನ ಪೀಳಿಗೆಯವರಿಗೆ ತಿಳಿಸಿ : ಶಾಸಕ ಎಸ್.ಎ.ರಾಮದಾಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು