News Kannada
Tuesday, November 29 2022

ಮೈಸೂರು

ಫೇಸ್‍ಬುಕ್‍ನಲ್ಲಿ ಡಾ.ಸುಮಾಹರಿನಾಥ್ ಸಂಗೀತಧಾರೆ - 1 min read

Photo Credit :

ಫೇಸ್‍ಬುಕ್‍ನಲ್ಲಿ ಡಾ.ಸುಮಾಹರಿನಾಥ್ ಸಂಗೀತಧಾರೆ

ಮೈಸೂರು: ಬೆಂಗಳೂರಿನ ಸಂಜೀವಕುಮಾರ್, ಹರಿದಾಸ ಕೀರ್ತನ ಪ್ರಾಜಕ್ಟ್ ರವರ ಪ್ರಾಯೋಜಕತ್ವದಲ್ಲಿ ಸಿದ್ದಾರ್ಥನಗರದ ವಿನಯ ಮಾರ್ಗದಲ್ಲಿರುವ ಬೃಂದಾವನ ಸಭಾಂಗಣದಲ್ಲಿ ‘ಸ್ವರಾಲಯ’ ಸಂಗೀತ ಸಂಸ್ಥೆಯ ಅಧ್ಯಕ್ಷೆ ವಿದುಷಿ ಡಾ.ಸುಮ ಹರಿನಾಥ್‍ರವರು ಫೇಸ್‍ಬುಕ್ ನೇರ ಪ್ರಸಾರದಲ್ಲಿ ದಾಸರ ಪದಗಳ ಕಾರ್ಯಕ್ರಮವನ್ನು ನಡೆಸಿಕೊಡುವುದರೊಂದಿಗೆ ಗಮನಸೆಳೆದಿದ್ದಾರೆ.

ಸುಮಾರು 1 ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ‘ನಾರಾಯಣ ನಿನ್ನ ನಾಮ ಸ್ಮರಣ’, ‘ಇನ್ನು ದಯಬಾರದೇ’, ‘ಇಷ್ಟು ದಿನ ಈ ವೈಕುಂಠ’, ‘ರಾಘವೇಂದ್ರ ರಾಯ’, ‘ಹೆಜ್ಜೆ ನೋಡೋಣ ಬಾರೇ’ ಹೀಗೆ ಹತ್ತು ಹಲವು ಕೀರ್ತನೆಗಳನ್ನು ಹಾಡಿ ಫೇಸ್‍ಬುಕ್ ಸಂಗೀತ ಪ್ರಿಯರ ಕಣ್ಮನ ಸೆಳೆದರು.

ಇವರಿಗೆ ಪಕ್ಕವಾದ್ಯದಲ್ಲಿ ತಬಲಾದಲ್ಲಿ ವಿದ್ವಾನ್ ವಿ.ಶ್ಯಾಮು, ವಯಲಿನ್‍ನಲ್ಲಿ ‘ಪಿಟೀಲು ವಾದನ ಪ್ರವೀಣ’ ವಿದ್ವಾನ್ ಸಿ.ಚೇತನ್ ಸಹಕಾರ ನೀಡಿದರು. ಕೋವಿಡ್-19, ಕೊರೊನಾ ಸಾಂಕ್ರಾಮಿಕ ಮಹಾಮಾರಿ ರೋಗದ ಹಿನ್ನೆಲೆಯಲ್ಲಿ ಫೇಸ್‍ಬುಕ್‍ನಲ್ಲಿ ತಾವಿದ್ದ ಸ್ಥಳದಲ್ಲಿಯೇ ಸುಮಾರು 10,000ಕ್ಕೂ ಅಧಿಕ ಸಂಗೀತಾಸಕ್ತರು ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.

See also  ಪೋಲಿಸ್ ಪೇದೆ ಹುದ್ದೆಗೆ ಹಣ ನೀಡಿ ಮೋಸ ಹೋಗಬೇಡಿ: ಡಾ.ಎ ಸುಬ್ರಹ್ಮಣ್ಯೇಶ್ವರರಾವ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು