News Kannada
Sunday, November 27 2022

ಮೈಸೂರು

ಮೈಸೂರಿನಲ್ಲಿ ಜಯಚಾಮರಾಜೇಂದ್ರ ಒಡೆಯರ ಸ್ಮರಣೆ - 1 min read

Photo Credit :

ಮೈಸೂರಿನಲ್ಲಿ ಜಯಚಾಮರಾಜೇಂದ್ರ ಒಡೆಯರ ಸ್ಮರಣೆ

ಮೈಸೂರು: ಬೇರು ಫೌಂಡೇಷನ್ ವತಿಯಿಂದ ಮೈಸೂರು ಸಂಸ್ಥಾನದ ಕಡೆಯ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರ 101ನೇ ಜಯಂತಿ ಅಂಗವಾಗಿ ಜಯಚಾಮರಾಜೇಂದ್ರ ಒಡೆಯರ ಒಂದು ನೆನಪು ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಂಗವಾಗಿ ನಗರದ  ಜಯಲಕ್ಷ್ಮೀಪುರಂ ಮಹಾಜನ ಕಾಲೇಜಿನ ಮುಂಭಾಗದಲ್ಲಿರುವ ಎಸ್ ಬಿ ಐ  ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಹಾಗೂ ಪೌರ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಸುಮಾರು 200 ಮಾಸ್ಕ್ ಗಳನ್ನು  ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ವೈ ಡಿ. ರಾಜಣ್ಣ ಅವರು, ಜಯಚಾಮರಾಜ ಒಡೆಯರ್ ಜನಮುಖಿ ಆಡಳಿತಗಾರರು, ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವವನ್ನು ಒಪ್ಪಿ ಅರಮನೆಯ ಸಿಂಹಾಸನದಿಂದ ಇಳಿದು ನಿಜ ಅರ್ಥದಲ್ಲಿ ಮಹಾರಾಜರೆನಿಸಿಕೊಂಡವರು. ಸದಾ ಪ್ರಜಾಪ್ರಭುತ್ವದ ಮಾದರಿಯಲ್ಲಿ ತಮ್ಮ ಸಂಸ್ಥಾನದ ಅಭಿವೃದ್ಧಿ ಆದ್ಯತೆಗಳನ್ನು ಗುರುತಿಸಿ ಜನಮುಖಿ ಆಡಳಿತಗಾರ ಎನ್ನುವ ರೀತಿ ಜನಮಾನಸದಲ್ಲಿ ನೆಲೆನಿಂತರು. ಇದಕ್ಕೆ ಪ್ರಮುಖ ಕಾರಣ ಅವರು ತಮ್ಮ ಶಿಕ್ಷಣವನ್ನು ಜನಸಾಮಾನ್ಯರೊಂದಿಗೆ ಕುಳಿತು ಪಡೆದಿದ್ದೆ  ಆಗಿದೆ ಎಂದರು.

ಸಮಾಜ ಸೇವಕರಾದ ಡಾ ಕೆ ರಘುರಾಂ ವಾಜಪೇಯಿ ಮಾತನಾಡಿ  ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮೊದಲ ಅಧ್ಯಕ್ಷರಾಗಿ ಇಡೀ ದೇಶಕ್ಕೆ ವನ್ಯಜೀವಿ ಸಂರಕ್ಷಣೆ ಮಹತ್ವ ಭೋದಿಸಿದ ಮೈಸೂರು ಸಂಸ್ಥಾನದ ಕಡೆಯ ಮಹಾರಾಜರಾಗಿದ್ದ ಶ್ರೀ ಜಯ ಚಾಮರಾಜೇಂದ್ರ ಒಡೆಯರ್  ತಮ್ಮ ಸಂಸ್ಥಾನದಲ್ಲಿ ಮೋಜಿಗಾಗಿ ಹುಲಿ ಬೇಟೆಯಾಡುವುದನ್ನು 1931ರಲ್ಲೇ ನಿಷೇಧಿಸಿದ್ದರು. ಗ್ರಾಮೀಣ ಭಾರತದ ಕಲ್ಪನೆಯನ್ನು ಖಂಡಿತ ಅವರು ಕೃಷಿಕರಾಗಿ ಬದುಕು ಕಟ್ಟಿಕೊಳ್ಳುವ ದೂರದರ್ಶಿತ್ವ  ದಿಂದ ನೀರಾವರಿ ಯೋಜನೆಗಳಿಗೆ ಹೆಚ್ಚು ಮಹತ್ವ ನೀಡಿದರು. ಭದ್ರಾ ಜಲಾಶಯ ನುಗು ಜಲಾಶಯ ಕಣ್ವ ಜಲಾಶಯ ಶಿವಮೊಗ್ಗ ಜಿಲ್ಲೆಯ ಕರ್ನಲ್ ಅಣೆಕಟ್ಟು ಕೆಲವು ಪ್ರಮುಖ ಜಲಾಶಯಗಳ ರೂವಾರಿ ಜಯಚಾಮರಾಜ ಒಡೆಯರ್ ಆಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್, ನಗರಪಾಲಿಕೆ ಸದಸ್ಯರಾದ ಭಾಗ್ಯ ಮಾದೇಶ್, ಮಾಜಿ ನಗರ ಪಾಲಿಕೆ ಸದಸ್ಯರಾದ ಡಾ ಎಂ.ಕೆ.ಅಶೋಕ್, ಬೇರು ಫೌಂಡೇಶನ್ ಅಧ್ಯಕ್ಷರಾದ ಮಧು ಎನ್ ಪೂಜಾರ್, ಪ್ರಧಾನ ಕಾರ್ಯದರ್ಶಿ ಜೈ ಅರ್ಜುನ್, ಮುಖಂಡರಾದ ಕೇಬಲ್ ಮಹೇಶ್, ವಿಜಿಲೆನ್ಸಿ ಸದಸ್ಯರಾದ ಶಿವಪ್ರಕಾಶ್ ಹಾಗೂ ಪೌರ ಕಾರ್ಮಿಕರು ಸಾರ್ವಜನಿಕರು, ಬೇರು ಫೌಂಡೇಷನ್‍ನ ಸದಸ್ಯರು ಭಾಗವಹಿಸಿದ್ದರು

See also  ವೀರನಹೊಸಳ್ಳಿಯಿಂದ ಮೈಸೂರಿಗೆ ದಸರಾ ಗಜಪಯಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು