News Kannada
Sunday, November 27 2022

ಮೈಸೂರು

ಮೈಸೂರು ನಾಗರಿಕ ವೇದಿಕೆಯಿಂದ ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ - 1 min read

Photo Credit :

ಮೈಸೂರು ನಾಗರಿಕ ವೇದಿಕೆಯಿಂದ ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ

ಮೈಸೂರು: ಮೈಸೂರು ನಾಗರಿಕ ವೇದಿಕೆಯಿಂದ ಇಲ್ಲಿನ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಸಾಂಕೇತಿಕವಾಗಿ ಮೈಸೂರು ಜಿಲ್ಲೆಯ 80 ಮಂದಿ ಪತ್ರಕರ್ತರಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸಲಾಯಿತು.

ಕೋವಿಡ್-19ರ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿ ನಿಂತಿರುವ ಪತ್ರಕರ್ತರು ಮತ್ತು ದೃಶ್ಯ ಮಾಧ್ಯಮದ ಸಿಬ್ಬಂದಿಗಳಿಗೂ ಅನುಕೂಲವಾಗಲೆಂದು 400ಕ್ಕೂ ಹೆಚ್ಚು ಕುಟುಂಬಗಳಿಗೆ ಅಗತ್ಯವಾದ ಆಹಾರ ಧಾನ್ಯಗಳ ಕಿಟ್‍ಗಳನ್ನು ನೀಡಲಾಗುತ್ತಿದೆ.

ತಾಲ್ಲೂಕು ಕೇಂದ್ರಗಳ ಪ್ರತಿನಿಧಿಗಳಿಗೆ ಅಲ್ಲಿಯೇ ವಿತರಿಸಲಾಗುತ್ತದೆ. ಪ್ರತಿಯೊಂದು ಕಿಟ್‍ನಲ್ಲಿ 1 ಕೆ.ಜಿ. ಉಪ್ಪು,  1 ಕೆ.ಜಿ. ಬೇಳೆ, 1 ಲೀ. ಎಣ್ಣೆ, 1 ಕೆ.ಜಿ. ಸಕ್ಕರೆ, 1/4 ಕೆ.ಜಿ. ಟೀಪುಡಿ, 1 ಕೆ.ಜಿ. ರವೆ, 1/4 ಕೆ.ಜಿ. ಸಾಂಬಾರ್‍ಪುಡಿ, 100 ಗ್ರಾಂ ಮೆಣಸು, 1/4 ಕೆ.ಜಿ. ಜೀರಿಗೆ, 100 ಗ್ರಾಂ ಅರಿಶಿಣ ಪುಡಿ, 1/2 ಕೆ.ಜಿ. ಕಡ್ಲೆಬೇಳೆ ಇರುತ್ತದೆ. ಮೈಸೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ದಿನಪತ್ರಿಕೆಗಳ ಮತ್ತು ದೃಶ್ಯ ಮಾಧ್ಯಮದ ವರದಿಗಾರರು, ಛಾಯಾಚಿತ್ರಕಾರರು ಮತ್ತು ಕಛೇರಿ ಸಿಬ್ಬಂದಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಯರಾಜೇಂದ್ರರು, ಜೆಎಸ್‍ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ನಿರ್ದೇಶಕರಾದ ಆರ್. ಮಹೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಉಪಾಧ್ಯಕ್ಷರಾದ ಎಂ. ಸುಬ್ಬಣ್ಣ, ಕಾರ್ಯದರ್ಶಿ ಕೆ.ಜೆ. ಲೋಕೇಶ್‍ಬಾಬು ಮುಂತಾದವರು ಉಪಸ್ಥಿತರಿದ್ದರು.

See also  ತಮಿಳುನಾಡಿಗೆ ನೀರು: ಟವರ್ ಏರಿ ವಿನೂತನ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು