News Kannada
Saturday, December 03 2022

ಮೈಸೂರು

  ಸರ್ಕಾರ ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ: ಹೆಚ್‌ ವಿಶ್ವನಾಥ್‌

Photo Credit :

   ಸರ್ಕಾರ ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ: ಹೆಚ್‌ ವಿಶ್ವನಾಥ್‌

ಮೈಸೂರು: ಸರ್ಕಾರ ನನ್ನ ಕೈ ಹಾಗೂ ನನ್ನ ಬರವಣಿಗೆಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ನೂತನ ಮೇಲ್ಮನೆ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಎಚ್.ವಿಶ್ವನಾಥ್‍ ಅವರು ಹೇಳಿದರು..

ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ ವತಿಯಿಂದ ಮಂಗಳವಾರ ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತ್ಯಿಕ-ಸಾಂಸ್ಕೃತಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತಿಯ ಲೇಖನವನ್ನು ಯಾರು ತಡೆಯಲು ಆಗಲ್ಲ. ಜನತಂತ್ರ‌ ವ್ಯವಸ್ಥೆ ಯಾರು ತಡೆಯಲು ಆಗಲ್ಲ. ನಾವು ಮಾಡಿದ್ದು ಒಂದು ಮಾದರಿ ಆಯಿತು. ನಾವು ಆಡಳಿತ ಪಕ್ಷದಿಂದ ವಿರೋಧ ಪಕ್ಷದ ಕಡೆಗೆ ಹೋದವರು. ಇದೇ ರೀತಿ ವಿವಿಧ ಕಡೆ ನಡೆಯಿತು. ಇದನ್ನ ಜನರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯಬೇಕು‌. ನಾವು ಅನುಭವಿಸಿದ್ದನ್ನ ನಾವು ಬರೆಯಲೇಬೇಕಿರುವುದರಿಂದ ನಾನು ಪುಸ್ತಕ ಬರೆಯುತ್ತೇನೆ ಎಂದರು.

ಹೀಗಾಗಿ ಬಾಂಬೆ ಡೇಸ್ ಪುಸ್ತಕ ಬರೆಯೋದು ಹಾಗೂ ಬಿಡುಗಡೆ ಮಾಡೋದು ಎರಡು ಖಚಿತ. ಸರ್ಕಾರದಿಂದ ನನ್ನ ಕೈ ಮತ್ತು ಬರಹ ಕಟ್ಟಿಹಾಕಲು ಸಾಧ್ಯವಿಲ್ಲ. ಬಾಂಬೆ ಡೈರೀಸ್‍ನಿಂದ ನಾನು ಯಾವುದನ್ನು ಸಾಬೀತು ಮಾಡಲು ಹೊರಟಿಲ್ಲ. ಇದರಲ್ಲಿ ಸರ್ಕಾರಕ್ಕೆ ಮುಜುಗರ ಥರವಂತದ್ದು ಏನೂ ಇರುವುದಿಲ್ಲ. ಬದಲಿಗೆ ಯಾವ ಕಾರಣಕ್ಕೆ ನಾವು ಬಂಡೆದ್ದು ಹೋದೆವು, ಹೇಗೆ ಕಾನೂನನ್ನು ದುರುಪಯೋಗ ಪಡಿಸಿಕೊಂಡರು ಎಂಬ ಮಾಹಿತಿ ಪುಸ್ತಕದಲ್ಲಿ ಇರಲಿದೆ. ನಾನು ಬ್ಲ್ಯಾಕ್ ಮೇಲ್ ಮಾಡುವುದಕ್ಕಾಗಿ ಪುಸ್ತಕ ಬರೆದಿಲ್ಲ, ಬರೆಯುವುದಿಲ್ಲ. ಅಲ್ಲದೇ ನನ್ನ ಬರವಣಿಗೆ ಮಾರಾಟಕ್ಕೆ ಇಲ್ಲ. ನಾನು ಮಿಸ್ಟರ್ ಕ್ಲೀನ್, ಹೀಗಾಗಿ ಚಾಮುಂಡಿಬೆಟ್ಟಕ್ಕೆ ಒಬ್ಬರನ್ನು ಧೈರ್ಯದಿಂದ ಕರೆದಿದ್ದು. ಶಾಸಕರಾದವರು, ಸಚಿವರಾದವರಿಗೆ ಕನಿಷ್ಠ ಜ್ಞಾನ ಇರಬೇಕು ಎಂದರು.

ಸಂವಾದದಲ್ಲಿ ಮಾತನಾಡುತ್ತಾ ತಮ್ಮ ಸಾಧನೆಗೆ ನೆರವಾದ ನಾಯಕರನ್ನ ನೆನೆದ ಎಚ್.ವಿಶ್ವನಾಥ್, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ನೆನೆದರು. ಅಲ್ಲದೇ ದೇವರಾಜ ಅರಸು, ನನ್ನನ್ನ ಆವರಿಸಿದ್ದಾರೆ. ಮೈಸೂರು ಸಂಸ್ಥಾನ ನಮಗೆ ಅನ್ನ, ಅರಿವು ಹಾಗೂ ಅಧಿಕಾರವನ್ನ ಕೊಟ್ಟಿದೆ. 1978 ರಲ್ಲಿ ನಾನು ಶಾಸಕನಾದೆ. ಇದಕ್ಕೆ ದಿ. ಡಿ.ದೇವರಾಜ ಅರಸರು ಕಾರಣ. ಅವರ ಗರಡಿಯಲ್ಲಿ ಬೆಳೆದ ಹುಡುಗ ನಾನು. ಸಾಕಷ್ಟು ಕನ್ನಡಪರ ಹೋರಾಟದಲ್ಲಿ ಭಾಗಿಯಾಗಿದ್ದೆ. ಹಾಗಾಗಿ ನಾನು ಕನ್ನಡ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದೆ ಎಂದು ತಮ್ಮ ರಾಜಕೀಯ ಜೀವನವನ್ನು ಮೆಲುಕು ಹಾಕಿದರು.

ಸಂವಾದಕ್ಕೂ ಮುನ್ನ ಗಾಯನದ ಮೂಲಕ ಗಮನ ಸೆಳೆದ ವಿಶ್ವನಾಥ್, ಕುವೆಂಪು ಅವರ ರಚಿಸಿದ್ದ ಸಾಲುಗಳನ್ನು ಹಾಡಿದರು.

See also  ಕಬಿನಿ ತುಂಬುವ ಮೊದಲೇ ನೀರು ಬಿಟ್ಟಿದ್ದೇಕೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು