News Kannada
Tuesday, December 06 2022

ಮೈಸೂರು

ನಕಲಿ ಚಿನ್ನ ನೀಡಿ ವಂಚಿಸಿದ್ದ ಇಬ್ಬರು ಕುಖ್ಯಾತರ ಬಂಧನ 

Photo Credit :

ನಕಲಿ ಚಿನ್ನ ನೀಡಿ ವಂಚಿಸಿದ್ದ ಇಬ್ಬರು ಕುಖ್ಯಾತರ ಬಂಧನ 

 ಮೈಸೂರು: ಪುರಾತನ ವಸ್ತುಗಳನ್ನು   ಸಂಗ್ರಹಿಸುವ ಹವ್ಯಾಸವುಳ್ಳ ವ್ಯಕ್ತಿಯೊಬ್ಬರಿಗೆ  ಪುರಾತನ ಕಾಲದ  ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿ ನಕಲಿ ಚಿನ್ನದ ಗುಂಡುಗಳನ್ನು ನೀಡಿ 30ಲಕ್ಷರೂ. ಹಣ ಪಡೆದು ವಂಚಿಸಿದ ಇಬ್ಬರು ಕುಖ್ಯಾತ ವ್ಯಕ್ತಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 

ಬಂಧಿತರನ್ನು ಕೆಆರ್ ಎಸ್ ನಿವಾಸಿಗಳಾದ ಭೀಮ್ ಅಲಿಯಾಸ್ ಡೈನಾ ಬಿನ್ ಗಂಗಾರಾಮ್ ಮತ್ತು ಅರ್ಜುನ್ ಅಲಿಯಾಸ್ ಮಾರ್ವಾಡ ಬಿನ್ ಹರಿಲಾಲ್ ಎಂದು ಗುರುತಿಸಲಾಗಿದ್ದು  ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ  ರಾಯಲ್ ಎನ್ ಫೀಲ್ಡ್ ಬೈಕ್ ,   ಹೋಂಡಾ ಡಿಯೋ ಸ್ಕೂಟರ್,  ಮತ್ತು  ನಾಲ್ಕು  ಫೋನ್‌ ಗಳನ್ನು  ವಶಪಡಿಸಿಕೊಳ್ಳಲಾಗಿದೆ. ಇಲ್ಲಿನ  ಕುಂಬಾರಕೊಪ್ಪಲಿನ ನಿವಾಸಿ ರಾಘವೇಂದ್ರ ಎಂಬವರು ಪುರಾತನ ಕಾಲದ ನಾಣ್ಯ ಮತ್ತು ವಸ್ತುಗಳನ್ನು  ಸಂಗ್ರಹಿಸುವ ಹವ್ಯಾಸವನ್ನು ಹೊಂದಿದ್ದು, ಇವರನ್ನು  ಸಂಪರ್ಕಿಸಿದ ಅರೋಪಿಗಳು ತಮ್ಮ ಊರಿನಲ್ಲಿ  ಮನೆ ಪಾಯ ತೆಗೆಯುವಾಗ  ರಾಜರ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿದ್ದು  ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿದ್ದರು. ಮೊದಲಿಗೆ ಒಂದು ಅಸಲಿ ಚಿನ್ನದ ನಾಣ್ಯವನ್ನೂ ನೀಡಿ ನಂಬಿಕೆ ಗಳಿಸಿಕೊಂಡಿದ್ದರು. ನಂತರ   30ಲಕ್ಷರೂ.ಗಳನ್ನು ಪಡೆದುಕೊಂಡು ಚಿನ್ನದ ನಾಣ್ಯ ಮತ್ತು ಗುಂಡುಗಳ ಸರಗಳುಳ್ಳ ಬ್ಯಾಗ್ ಗಳನ್ನು ನೀಡಿ   ಹೋಗಿದ್ದರು. ಮನೆಗೆ ಬಂದು ಪರಿಶೀಲಿಸಿದಾಗ ನಕಲಿ ಚಿನ್ನವೆಂದು ತಿಳಿದು ಬಂದಿದ್ದು, ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

 

ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿದ್ದು  ತನಿಖೆ ಮುಂದುವರೆಸಿದ್ದಾರೆ.

See also  ದಿ.ಶಾಸಕ ಚಿಕ್ಕಮಾದು ಕುಟುಂಬ, ಸಿ.ಹೆಚ್. ವಿಜಯಶಂಕರ್ 5ರಂದು ಕಾಂಗ್ರೆಸ್ ಸೇರ್ಪಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು