News Kannada
Tuesday, September 27 2022

ಮೈಸೂರು

ಕಬಿನಿ ಜಲಾಶಯದಿಂದ ಕಟ್ಟು ನೀರಿನ ಪದ್ಧತಿಯಲ್ಲಿ ನಾಲೆಗಳಿಗೆ ನೀರು - 1 min read

Photo Credit :

ಕಬಿನಿ ಜಲಾಶಯದಿಂದ ಕಟ್ಟು ನೀರಿನ ಪದ್ಧತಿಯಲ್ಲಿ ನಾಲೆಗಳಿಗೆ ನೀರು

ಮೈಸೂರು: ಕಬಿನಿ ಜಲಾಶಯದಿಂದ ಕಟ್ಟು ನೀರಿನ ಪದ್ಧತಿಯ ಆಧಾರದಲ್ಲಿ ಖಾರೀಫ್ 2020ರ ಬೆಳೆಗಳಿಗಾಗಿ ಮುಖ್ಯ ನಾಲೆಗಳಿಗೆ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7 ರವರೆಗೆ, ಅಕ್ಟೋಬರ್ 19 ರಿಂದ ನವೆಂಬರ್ 8 ರವರೆಗೆ ಹಾಗೂ ನವೆಂಬರ್ 20 ರಿಂದ ಡಿಸೆಂಬರ್ 06 ರವರೆಗೆ ನೀರನ್ನು ಹರಿಸಲಾಗುವುದು.

ಕಬಿನಿ ಎಡದಂತೆ ಮತ್ತು ಬಲದಂತೆ ನಾಲೆಗಳ ಒಟ್ಟು 108060 ಎಕರೆಗಳ ಅಚ್ಚುಕಟ್ಟು ಪ್ರದೇಶಗಳಿಗೆ ಖಾರೀಫ್ ಬೆಳೆಯ ಅವಧಿಯಲ್ಲಿ ಕಬಿನಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹಾಗೂ ಕಬಿನಿ ಜಲಾಶಯದಲ್ಲಿ ಸಂಗ್ರಹವಾಗುವ ನೀರಿನ ಲಭ್ಯತೆ ಮೇರೆಗೆ ನಾಲೆಗಳಲ್ಲಿ ನೀರನ್ನು ಹರಿಸಲಾಗುವುದು.

ಕಬಿನಿ ಜಲಾಶಯದ ವ್ಯಾಪ್ತಿಗೆ ಬರುವ ಅಚ್ಚುಕಟ್ಟುದಾರರು ನೀರಾವರಿ ಅಧಿಕಾರಿಗಳೊಡನೆ ಸಹಕರಿಸಿ ನಾಲೆಯ ನೀರಿನ ಅವಲಂಬಿತ ಬೆಳೆಗಳನ್ನು ಬೆಳೆಯದೆ, ಮಳೆ ಅವಲಂಬಿತ ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯಲು ಸೂಚಿಸಲಾಗಿದೆ.

ಒಂದು ವೇಳೆ ಪ್ರಕಟಣೆ ಉಲ್ಲಂಘಿಸಿ ನೀರಾವರಿ ಅವಲಂಬಿತ ಬೆಳೆಗಳನ್ನು ಬೆಳೆದಲ್ಲಿ ನೀರು ಹರಿಸುವುದರ ವಿಷಯವಾಗಿ ನೀರಾವರಿ ಇಲಾಖೆಯ ಯಾವುದೇ ರೀತಿಯ ಜವಾಬ್ದಾರರಲ್ಲ ಎಂದು ಕಬಿನಿ ಹಾಗೂ ವರುಣಾ ನಾಲಾ ವೃತ್ತ ಅಧೀಕ್ಷಕ ಇಂಜಿನಿಯರ್ ಮತ್ತು ಕಬಿನಿ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

See also  ನಂಜನಗೂಡು ಉಪಚುನಾವಣೆ: ಕೋಟಿ ಆಸ್ತಿ ಹೊಂದಿದರೂ ಪ್ಯಾನ್ ಕಾರ್ಡ್ ಇಲ್ಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು