ಮಡಿಕೇರಿ: ಮೊಬೈಲ್ ಕರೆನ್ಸಿ ಹಾಕಿಸಲು ಬರುವ ಯುವತಿಯರ ಮತ್ತು ವಿವಾಹಿತ ಮಹಿಳೆಯ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಮಡಿಕೇರಿಯಲ್ಲಿ ಬುಧವಾರ ನಡೆದಿದೆ.
ಖಾಸಗಿ ಬಸ್ ನಿಲ್ದಾಣದ ಬಳಿ ಮೊಬೈಲ್ ಅಂಗಡಿ ಹೊಂದಿರುವ ಮೊಹಮದ್ ಮುದಾಸಿರ್ ಎಂಬಾತ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದನ್ನೇ ಪೂರ್ಣಾವಧಿ ಉದ್ಯೋಗವನ್ನಾಗಿ ಮಾಡಿಕೊಂಡಿದ್ದ ಎನ್ನಲಾಗಿದೆ. ಕಳೆದ 15 ದಿನಗಳ ಹಿಂದೆ ವಿವಾಹಿತ ಮಹಿಳೆಯೊಬ್ಬರ ಮೊಬೈಲ್ ನಂಬರ್ ತಿಳಿದುಕೊಂಡಿದ್ದ ಈತ ರಾತ್ರಿ ಹೊತ್ತಿನಲ್ಲಿ ಅಶ್ಲೀಲ ಮೆಸೇಜ್ ಕಳಿಸಿ ಮಾನಸಿಕ ಹಿಂಸೆ ನೀಡಿದ್ದ. ಮಹಿಳೆಯು ಮಡಿಕೇರಿ ನಗರ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ತಿಳಿಸಿದ್ದರು. ಕಾರ್ಯಕರ್ತರ ಸೂಚನೆಯಂತೆ ಮಹಿಳೆಯ ಮೊಬೈಲ್‌ನಿಂದ ಬುಧವಾರ ಬೆಳಿಗ್ಗೆ ಹಳೆ ಆರ್‌ಟಿಒ ಕಚೇರಿಯ ಬಳಿ ಬರುವಂತೆ ಮೆಸೇಜ್ ಕಳಿಸಲಾಯಿತು. ಖುಷಿಯಿಂದ ಸಮಯಕ್ಕೆ ಸರಿಯಾಗಿ ಬಂದ ಕಾಮುಕನಿಗೆ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿ ಪೋಲೀಸರಿಗೆ ಒಪ್ಪಿಸಿದರು.
ಈತನ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಈತನು ಫೇಸ್ ಬುಕ್ ನಿಂದಲೂ ಮಹಿಳೆಯರಿಗೆ ಅಸಭ್ಯ ಮೆಸೇಜ್ ಕಳಿಸುತಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಮಹಿಳೆಯರು ನಂಬಿಕಾರ್ಹ ಅಂಗಡಿಯವರಿಂದಲೇ ಕರೆನ್ಸಿ ಹಾಕಿಸಿದರೆ ಇಂತಹ ಕಾಮುಕರಿಂದ ಪಾರಾಗಬಹುದು.